ಮುಂಬಯಿ: ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ವಾರ್ಷಿಕ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಜರಗಿತು.
ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಭವ್ಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಉದ್ಯಮ ಕ್ಷೇತ್ರದ ಸಾಧಕರುಗಳಾದ ಮಹೇಶ್ ಲಂಚ್ ಹೋಮ್ ಹೊಟೇಲ್ ಸಮೂಹದ ಕಾರ್ಯಾಧ್ಯಕ್ಷ ಸೂರು ಸಿ. ಕರ್ಕೇರ ಪರವಾಗಿ ಶಾರದಾ ಸೂರು ಕರ್ಕೇರ, ಸುಖ್‌ಸಾಗರ್ ಹೊಟೇಲ್ ಸಮೂಹದ ಕಾರ್ಯಾಧ್ಯಕ್ಷ ಸುರೇಶ್ ಎಸ್.ಪೂಜಾರಿ ದಂಪತಿ, ಏಯನ್ ಆರ್ಟ್ ಇನ್‌ಸ್ಟಿಟ್ಯೂಟ್‌ನ ಹೃದಯತಜ್ಞ ಡಾ| ತಿಲಕ್ ಟಿ. ಸುವರ್ಣ, ಪ್ರಸಿದ್ಧ ಶಿಕ್ಷಣ ತಜ್ಞ ಪಿ. ಸಾಧು ಪೂಜಾರಿ ಇವರಿಗೆ ಬಿಸಿಸಿಐ ಪ್ರಶಸ್ತಿ-2018ನ್ನು ಗಣ್ಯರು ಪ್ರದಾನಿಸಿ ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ರಾಜ್ಯ ವಸತಿ ಮತ್ತು ಕಾರ್ಮಿಕ ಸಚಿವ ಪ್ರಕಾಶ್ ಮೆಹ್ತಾ, ಗೌರವ ಅತಿಥಿಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉದ್ಯಮಿಗಳಾದ ಲಕ್ಷ ¾ಣ್ ಬಿ. ಅಮೀನ್, ಗಣೇಶ್ ಆರ್. ಪೂಜಾರಿ, ಉದಯ ಡಿ. ಸುವರ್ಣ ಹಾಗೂ ಸಂಸ್ಥೆಯ ಉಪ ಕಾರ್ಯಾಧ್ಯಕ್ಷರುಗಳಾದ ಡಿ. ಎನ್. ಸುವರ್ಣ, ನಿರ್ದೇಶಕರುಗಳಾದ ಹರೀಶ್ ಜಿ. ಅಮೀನ್, ಪುರುಷೋತ್ತಮ ಎಸ್. ಕೋಟ್ಯಾನ್, ಭರತ್ ಎಸ್. ಪೂಜಾರಿ, ಗಂಗಾಧರ್ ಅಮೀನ್ ಕರ್ನಿರೆ ಉಪಸ್ಥಿತರಿದ್ದರು.
ಯಶೋದಾ ಎನ್. ಟಿ. ಪೂಜಾರಿ ಬಳಗವು ಸ್ವಾಗತಗೀತೆ ಹಾಡಿತು. ನಿಖೀತಾ ಎನ್. ಪೂಜಾರಿ ಮತ್ತು ಅಂಕಿತಾ ಎನ್. ಪೂಜಾರಿ ಪ್ರಾರ್ಥನೆಗೈದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ. ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಿಸಿಸಿಐನ ಉಪ ಕಾರ್ಯಾಧ್ಯಕ್ಷರಾದ ಡಿ. ಬಿ. ಅಮೀನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರಾದ ಅಶ್ಮಿತ್ ಬಿ. ಕುಳಾಯಿ, ಚಂದಯ ಬಿ. ಕರ್ಕೇರ ಅತಿಥಿಗಳನ್ನು ಹಾಗೂ ಪುರಸ್ಕೃತರನ್ನು ಪರಿಚಯಿಸಿದರು. ಎನ್. ಟಿ. ಪೂಜಾರಿ ಸಚಿವರನ್ನು ಮತ್ತು ಅತಿಥಿಗಳನ್ನು ಗೌರವಿಸಿದರು. ಸಲೀಲ್ ಝವೀರ್ ಅತಿಥಿಗಳನ್ನು ಪರಿಚಯಿಸಿ ನಿರೂಪಿಸಿದರು. ನಿರ್ದೇಶಕ ಹರೀಶ್ ಜಿ. ಅಮೀನ್ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್