ಅಂತಾರಾಜ್ಯ ದ್ವಿಚಕ್ರವಾಹನ ಕಳ್ಳರ ತಂಡಗಳು ರಾಜ್ಯದ ಪ್ರಮುಖ ನಗರಗಳಿಗೆ ಸಕ್ರಿಯಲಾಗಿದ್ದು, ತಡರಾತ್ರಿ ಕಾರ್ಯಾಚರಣೆ ನಡೆಸುತ್ತವೆ. ಅತಿ ನಿಪುಣ ತಂಡವಾಗಿರುವ ಇವು, ಕೇವಲ 1ರಿಂದ 2 ನಿಮಿಷದಲ್ಲಿ ಬೈಕ್ ಲಪಟಾಯಿಸುವ ತಂತ್ರಗಾರಿಕೆ ಯನ್ನು ಹೊಂದಿವೆ. ಕದ್ದ ಬೈಕ್ನಲ್ಲೇ ಊರು ಸೇರಿ ಅದರ ನಂಬರ್ ಪ್ಲೇಟ್ ಸಹಿತ ಎಲ್ಲ ಬಿಡಿ ಭಾಗಗಳನ್ನು ಸಂಪೂರ್ಣ ಬದಲಾಯಿಸಿ 10 ಸಾವಿರ ದಿಂದ 35 ಸಾ.ರೂ.ವರೆಗೆ ಮಾರಾಟ ಮಾಡುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
6 ತಿಂಗಳಲ್ಲಿ 5,559 ಬೈಕ್ಗಳು ಕಳವು2018ರಲ್ಲಿ 9,892, 2019ರಲ್ಲಿ 9,062, 2020ರಲ್ಲಿ 7,991 ದ್ವಿಚಕ್ರ ಕಳವು ಪ್ರಕರಣ ದಾಖಲಾಗಿದ್ದವು. 2021ರಲ್ಲಿ 9,119ರಷ್ಟು ಪ್ರಕರಣ ದಾಖಲಾಗಿದ್ದರೆ, ಈ ವರ್ಷ (ಜೂನ್ ವರೆಗೆ) ಕೇವಲ 6 ತಿಂಗಳಲ್ಲಿ 5,559 ದ್ವಿಚಕ್ರವಾಹನ ಕಳ್ಳತನವಾಗಿರುವುದು ಆತಂಕ ಮೂಡಿಸಿದೆ.
ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬುಲೆಟ್ ಬೈಕ್ನ ಎಂಜಿನ್ಗಳನ್ನು ಬೋಟ್ಗಳಿಗೆ ಅಳವಡಿಸುವ ಜಾಲವೂ ಸಕ್ರಿಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Related Articles
– ಕದ್ದ ಬೈಕ್ಗಳ ಎಂಜಿನ್ಗಳ ಬಿಡಿ ಭಾಗಗಳನ್ನು ಹಳೆ ವಾಹನಗಳಿಗೆ ಅಳವಡಿಸುವುದು.
– ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ
– ಗ್ಯಾರೇಜ್ಗೆ ಕಡಿಮೆ ಬೆಲೆಗೆ ಮಾರಾಟ ಅಥವಾ ಗುಜರಿಗೆ ಹಾಕುವುದು.
– ಹಳ್ಳಿಗಾಡಿನ ಜನರೇ ಹೆಚ್ಚಾಗಿ ಬಳಸುವುದು.
Advertisement
– ಅವಿನಾಶ್ ಮೂಡಂಬಿಕಾನ