Advertisement

Bijoor: ರೋ ರೋ ರೈಲಿಗೆ ಆಕಸ್ಮಿಕ ಬೆಂಕಿ: ತಪ್ಪಿದ ಭಾರೀ ಅನಾಹುತ

11:30 PM Oct 10, 2023 | Team Udayavani |

ಬಿಜೂರು: ರೋ ರೋ ರೈಲಿಗೆ ಬೆಂಕಿರೋ ರೋ ರೈಲಿನಲ್ಲಿ ಸಾಗಿಸುತ್ತಿದ್ದ ತಿಂಡಿ ತಿನಿಸುಗಳನ್ನು ತುಂಬಿದ್ದ ಲಾರಿಯೊಂದಕ್ಕೆ ಬೆಂಕಿ ತಗಲಿದ ಪರಿಣಾಮ ವಸ್ತುಗಳು ಸುಟ್ಟು ಹೋದ ಘಟನೆ ಬಿಜೂರು ರೈಲ್ವೇ ನಿಲ್ದಾಣದಲ್ಲಿ ಅ. 10ರಂದು ಮುಂಜಾನೆ ಸಂಭವಿಸಿದೆ.

Advertisement

ಅ. 9ರಂದು ಮುಂಬಯಿ ಕೋಲಾಡ್‌ನಿಂದ ಹೊರಟು ಮಂಗಳೂರು ಸುರತ್ಕಲ್‌ಗೆ ತಿಂಡಿ ತಿನಿಸುಗಳು ತುಂಬಿದ ಲಾರಿಗಳನ್ನು ಹೊತ್ತ ರೋ ರೋ ರೈಲು ಮಂಗಳವಾರ ಮುಂಜಾನೆ ಬಿಜೂರು ರೈಲ್ವೇ ನಿಲ್ದಾಣದ ಸಮೀಪ ಬರುವಾಗ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಿಬಂದಿ ತತ್‌ಕ್ಷಣ ರೈಲು ನಿಲ್ಲಿಸಿ, ಬೆಂಕಿ ಆರಿಸಲು ಪ್ರಯತ್ನಿಸಿದರು.

ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದರು. ಲಾರಿ ಒಳಗಿದ್ದ ತಿಂಡಿ ತಿನಿಸುಗಳು ಹಾಗೂ ಲಾರಿ ಭಾಗಶಃ ಸುಟ್ಟು ಹೋಗಿದೆ. ಯಾವುದೇ ಅಪಾಯ ಉಂಟಾಗಿಲ್ಲ. ರೈಲ್ವೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next