ಹೊಸದಿಲ್ಲಿ/ಪಾಟ್ನಾ: ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಜಯ ಗಳಿಸಿದರೆ ಬಿಹಾರ ಉಗ್ರರಿಗೆ ಸ್ವರ್ಗವಾಗಲಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
ಪ್ರಚಾರವೊಂದರಲ್ಲಿ ಮಾತನಾಡಿದ ಅವರು “ಕಾಶ್ಮೀರದಲ್ಲಿ ನಿರ್ದಯೆಯಿಂದ ಉಗ್ರರನ್ನು ಮಟ್ಟ ಹಾಕಲಾಗುತ್ತಿದೆ. ಚುನಾವಣೆಯಲ್ಲಿ ಆರ್ ಜೆಡಿ ಜಯ ಗಳಿಸಿದರೆ ಕಾಶ್ಮೀರದಲ್ಲಿರುವ ಉಗ್ರರಿಗೆ ಬಿಹಾರ ಉತ್ತಮ ತಾಣವಾದೀತು’ ಎಂದು ಹೇಳಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಬಿಜೆಪಿಗೆ ಪಾಕಿಸ್ಥಾನ ಅಥವಾ ಕಾಶ್ಮೀರ ಲಿಂಕ್ ಮಾಡುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ:ಬಿಹಾರ ಚುನಾವಣಾ ಕದನ: 4 ಬಾರಿ ಸಿಎಂ ಆದ ನಿತೀಶ್ ಗೆ ತೇಜಸ್ವಿ ಯಾದವ್ ಸವಾಲು!
ಶರದ್ ಪುತ್ರಿ ಕಾಂಗ್ರೆಸ್‌ಗೆ: ಮಾಜಿ ಸಚಿವ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಸಮೀಕ್ಷೆಗೆ ನಿಷೇಧ: ಈ ತಿಂಗಳ 28ರಿಂದ ನ.7ರ ವರೆಗೆ ಚುನಾವಣಪೂರ್ವ ಸಮೀಕ್ಷೆ (ಎಕ್ಸಿಟ್ ಪೋಲ್ )ಗಳನ್ನು ಬಿಹಾರ ಚುನಾವಣಾ ಆಯೋಗ ನಿಷೇಧಿಸಿದೆ. 28ರ ಬೆಳಗ್ಗೆ 7 ಗಂಟೆಯಿಂದ ನ.7ರ ಸಂಜೆ 6.30ರ ವರೆಗೆ ಸುದ್ದಿ ವಾಹಿನಿಗಳಲ್ಲಿ, ವೆಬ್ ಸೈಟ್‌ಗಳಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಅಂಶಗಳನ್ನು ಪ್ರಕಟಿಸಬಾರದು ಎಂದು ಆದೇಶ ನೀಡಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ಅನ್ವಯ ಚುನಾವಣ ಆಯೋಗ ಈ ಆದೇಶ ನೀಡಿದೆ.