Advertisement

29 ಗಂಟೆ ಬಳಿಕ ಬಾಲಕಿ ರಕ್ಷಣೆ

06:00 AM Aug 02, 2018 | Team Udayavani |

ಪಾಟ್ನಾ: ಬಿಹಾರದ ಮುಂಗರ್‌ನಲ್ಲಿ  110 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ 3 ವರ್ಷದ ಮಗುವನ್ನು ರಾಜ್ಯ ವಿಪತ್ತು ನಿರ್ವಹಣ ತಂಡ(ಎಸ್‌ಡಿಆರ್‌ಎಫ್) 29 ಗಂಟೆಗಳ ರಕ್ಷಣಾ ಕಾರ್ಯಾ ಚರಣೆ ನಡೆಸಿ ರಕ್ಷಿಸಿದೆ. ಮಂಗಳವಾರ 3 ವರ್ಷದ ಹೆಣ್ಣುಮಗು ಮನೆಯಂಗಳ ದಲ್ಲಿ ಆಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದಿದ್ದಳು. ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಅಗತ್ಯ ತಯಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಮಗುವನ್ನು ಸುರಕ್ಷಿತವಾಗಿ ಹೊರತಗೆದಿದ್ದಾರೆ. ಮಗು ವಿಗೆ ಆಮ್ಲಜನಕ, ಆಹಾರವನ್ನು ಒದಗಿ ಸಲಾಗಿತ್ತು. ಮಗು ಮತ್ತಷ್ಟು ಕೆಳಗೆ ಹೋಗದಂತೆ ಸರಳುಗಳನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next