Advertisement

Bigg Boss Telugu 8: ಬಿಗ್‌ಬಾಸ್‌ ಆರಂಭಕ್ಕೆ ಕ್ಷಣಗಣನೆ; ಸ್ಪರ್ಧಿಗಳ ವಾರದ ಸಂಭಾವನೆ ಎಷ್ಟು?

09:21 AM Sep 02, 2024 | Team Udayavani |

ಹೈದರಾಬಾದ್:‌ ಬಿಗ್‌ ಬಾಸ್‌ ತೆಲುಗು ಸೀಸನ್‌ -8 (Bigg Boss Telugu Season 8) ಭಾನುವಾರದಿಂದ (ಸೆ.1 ರಿಂದ) ಆರಂಭಗೊಳ್ಳಲಿದೆ. ಈ ಬಾರಿಯೂ ಕಿಂಗ್ ನಾಗಾರ್ಜುನ(Nagarjuna) ಅವರು ಶೋ ನಡೆಸಿಕೊಳ್ಳಲಿದ್ದಾರೆ.

Advertisement

ಪ್ರತಿಬಾರಿಯಂತೆ ಈ ಬಾರಿಯೂ ಶೋನಲ್ಲಿ ಟ್ವಿಸ್ಟ್‌ ಇಡಲಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಜೋಡಿಗಳಾಗಿ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ. ಅಂದರೆ ಒಂದೇ ಸಲಿಗೆ ಇಬ್ಬರು ಮನೆಯೊಳಗೆ ಪ್ರವೇಶಿಸಲಿದ್ದಾರೆ. ಪರಿಚಯವಿರದ ಸ್ಪರ್ಧಿಗಳು ಜೋಡಿಗಳಂತೆ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ.

ಮೊದಲೇ ತಿಳಿದಂತೆ ಬಿಗ್ ಬಾಸ್‌ ಮನೆಯೊಳಗೆ ಹೋಗುವ ಸ್ಪರ್ಧಿಗಳಿಗೆ ಸಂಭಾವನೆ ಇರುತ್ತದೆ. ಸ್ಪರ್ಧಿಗಳು ವಾರದಲ್ಲಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದರ ಬಗೆಗಿನ ಒಂದು ವರದಿ ಇಲ್ಲಿದೆ.

ಬಿಗ್ ಬಾಸ್ ತೆಲುಗು 8 ಸ್ಪರ್ಧಿಗಳ ಪಟ್ಟಿ:  

Advertisement

ವಿಷ್ಣುಪ್ರಿಯಾ ಭೀಮನೇನಿ (ನಟಿ) 

ಪೃಥ್ವಿರಾಜ್‌ ಶೆಟ್ಟಿ(ನಟ) 

ನಿಖಿಲ್‌ (ನಟ) 

ನಾಗ ಮಣಿಕಂಠ(ನಟ)

ಅಭಯ್ ನವೀನ್(ನಟ) 

ನಬೀಲ್‌ ಅಫ್ರಿದಿ(ಯೂಟ್ಯೂಬರ್)

ಶೇಖರ್ ಬಾಷಾ (ಆರ್‌ ಜೆ)‌ 

ಯಾಸ್ಮಿ ಗೌಡ(ನಟಿ) 

ಸೋನಿಯಾ ಅಕುಲ(ನಟಿ) 

ಪ್ರೇರಣಾ(ನಟಿ) 

ಸೀತಾ (ನಟಿ)

ಬೇಜವಾಡ ಬೇಬಕ್ಕ( ಸೋಶಿಯಲ್‌ ಮೀಡಿಯಾ ಪ್ರಭಾವಿ, ನಟಿ)

ನೈನಿಕಾ‌ (ಡ್ಯಾನ್ಸರ್)

ಆದಿತ್ಯ ಓಂ (ನಟ)

ಇವರುಗಳೊಂದಿಗೆ ಇಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಕೂಡ ದೊಡ್ಮನೆಯೊಳಗೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.

ಸ್ಪರ್ಧಿಗಳ ಸಂಭಾವನೆ ಎಷ್ಟು?:

ಸ್ಪರ್ಧಿಗಳಿಗೆ ವಾರದ ಪ್ರಕಾರ 1 ಲಕ್ಷ ರೂ.ನಿಂದ ಆರಂಭವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾಗವಹಿಸುವವರಿಗೆ 5 ಲಕ್ಷ ರೂ.ವರೆಗೆ ನೀಡಲಾಗುತ್ತದೆ ಎಂದು ʼಫಿಲ್ಮ್‌ ಬೀಟ್‌ʼ ವರದಿ ತಿಳಿಸಿದೆ.

ನಾಗಾರ್ಜುನ ಅವರ ಸಂಭಾವನೆಯೂ ಈ ಬಾರಿ ದುಪ್ಪಾಟ್ಟಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಆರಂಭ ಯಾವಾಗ, ಎಲ್ಲಿ?: ಸ್ಟಾರ್‌ ಮಾ ವಾಹಿನಿಯಲ್ಲಿ ಭಾನುವಾರ(ಸೆ.1ರಂದು) ಸಂಜೆ 7 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಡಿಸ್ನಿ+ ಹಾಟ್‌ ಸ್ಟಾರ್‌ನಲ್ಲಿ ಪ್ರತಿನಿತ್ಯ ಸ್ಟ್ರೀಮ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next