Advertisement

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

10:58 PM Nov 16, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಕಿಚ್ಚ ಸುದೀಪ್‌ (Kiccha Suddep) ಈ ವಾರ ತಮ್ಮದೇ ಮಾತಿನ ಶೈಲಿಯಲ್ಲಿ ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಾರ ನಡೆದ ಟಾಸ್ಕ್‌ ಹಾಗೂ ಇತರೆ ವಿಚಾರಗಳ ಕಿಚ್ಚ ಮಾತನಾಡಿದ್ದಾರೆ.

Advertisement

ತಲೆ ತಿರುಗಿ ಬಿದ್ದಿದ್ದ ಚೈತ್ರಾ ಅವರು ಚಿಕಿತ್ಸೆ ಪಡೆದು ದೊಡ್ಮನೆಗೆ ಬಂದಿದ್ದಾರೆ. ಮನೆಗೆ ಬಂದ ಕೂಡಲೇ ಚೈತ್ರಾ ಅವರು ಹೊರಗಿನ ಕೆಲ ವಿಚಾರಗಳನ್ನು ಮಂಜು ಅವರ ಬಳಿ ಪಿಸು ದನಿಯಲ್ಲಿ ಹೇಳಿದ್ದಾರೆ. ಹೇಳಿದ್ದಾರೆ. ವಿಕ್ಕಿ ಅಣ್ಣ ನಿಮಗೆ ಎಲ್ಲೂ ಬೆಲೆ ಇಲ್ಲ ಬಿಡಿ. ಎಲ್ಲರೂ ನಾಟ್‌ ಓಕೆ ಎಂದು ಹೊರಗೆ ಕೇಳಿದ ಮಾತನ್ನು ಸ್ಪರ್ಧಿಗಳ ಬಳಿ ಹೇಳಿದ್ದಾರೆ.

ಮಂಜು ಅವರ ತಮಗೆ ಇಷ್ಟ ಆಗುತ್ತಿಲ್ಲವೆಂದು ಶಿಶಿರ್‌ ಜತೆ ಮಂಜು, ಗೌತಮಿ ಅವರ ಬಗ್ಗೆ ಮೋಕ್ಷಿತಾ ಮಾತನಾಡಿದ್ದಾರೆ. ಮೋಕ್ಷಿತಾ ಅವರಿಗೆ ನಿಮ್ಮ ಆಟ ನೀವು ಆಡಿಯೆಂದು ಇತರರು ಹೇಳಿದ್ದಾರೆ.

ಭವ್ಯ ಅವರು ಎಲಿಮಿನೇಟ್‌ ಆಗುವ ವಿಚಾರದಲ್ಲಿ ಟಿಆರ್‌ಪಿ ಬಗ್ಗೆ ಮಾತನಾಡಿದ ಅನುಷಾ ಅವರಿಗೆ ಕಿಚ್ಚ ಅವರು ಪಾಠ ಮಾಡಿದ್ದಾರೆ. ಭವ್ಯ ಅವರು ಆಗುವ ವಿಚಾರ ನಿಮಗೆ ಮೊದಲೇ ಗೊತ್ತಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅದನ್ನು ಭವ್ಯ ಅವರೇ ಹೇಳಿದ್ದು ಎಂದು ಅನುಷಾ ಹೇಳಿದ್ದಾರೆ.

Advertisement

ಇದನ್ನು ಕೇಳಿದ ಕಿಚ್ಚ ಅಅವರು, ಟಿಆರ್‌ಪಿ ನೀವಿಲ್ಲದಿದ್ರು ಇರುತ್ತದೆ. ವರ್ಷವಿಡೀ ಬೇರೆ ಬೇರೆ ಕಾರ್ಯಕ್ರಮದಿಂದ ಟಿವಿ ರೇಟ್‌ ಬರುತ್ತದೆ. ವೋಟಿಂಗ್‌ ಲೈನ್‌ ಓಪನ್ ಇರಲಿಲ್ಲ. ನಿಮಗೆ ಭಾನುವಾರ ಗೊತ್ತಾಗೋದು. ನೀವು ಮನೆಯಲ್ಲಿ ಸ್ಪರ್ಧಿಗಳಾಗಿರಿ, ನಿಮ್ಮನ್ನು ಪ್ರೂವ್‌ ಮಾಡಿ ಅದು ಬಿಟ್ಟು ಡೈರೆಕ್ಟರ್‌, ಕ್ರಿಯೇಟಿವ್‌ ಆಗಬೇಡಿ ಎಂದು ಹೇಳಿದ್ದಾರೆ.

ಈ ವಾರ ಜೋಡಿ ಟಾಸ್ಕ್‌ ಇಡಲಾಗಿತ್ತು. ಆಟದಲ್ಲಿ ಟ್ವಿಸ್ಟ್‌ ನೀಡಲು ಬಿಗ್‌ ಬಾಸ್‌ ತಮ್ಮ ಪಾರ್ಟ್ನರ್‌ ಬದಲಾಯಿಸಲು ಆಯ್ಕೆ ನೀಡಲಾಗಿತ್ತು. ಇದರಲ್ಲಿ ಚೈತ್ರಾ ಅವರು ತಮ್ಮ ಜೋಡಿ ಶಿಶಿರ್‌ ಅವರನ್ನು ಬದಲಾಯಿಸಿ ತ್ರಿವಿಕ್ರಮ್‌ ಅವರನ್ನು ಆಯ್ಕೆ ಮಾಡಲು ಬಯಸಿದ್ದರು. ಈ ವಿಚಾರ ಶಿಶಿರ್‌ ಅವರಿಗೆ ಸಿಟ್ಟು ತರಿಸಿತ್ತು.

ಕೆಲವೊಂದು ನೀತಿ ಪಾಠಗಳ ಕಥೆಯ ಉದಾಹರಣೆಯನ್ನು ಕೊಟ್ಟು ಚೈತ್ರಾ ಅವರು ಹೊರಗಡೆಯಲ್ಲಿ ಕೇಳಿಬಂದ ಕೆಲ ಅಭಿಪ್ರಾಯವನ್ನು ಪರೋಕ್ಷವಾಗಿ ಸ್ಪರ್ಧಿಗಳಿಗೆ ಹೇಳಿದ್ದಾರೆ.

ಈ ಸಂಬಂಧ ಕಿಚ್ಚ ಸುದೀಪ್‌ ಅವರು ಮಾತನಾಡಿದ್ದಾರೆ. ಚೈತ್ರಾ ನೀತಿ ಕಥೆಯನ್ನು ಹೇಳಿ ಅವರಿಗೆ ಕಿಚ್ಚ ತೋಳದ ಕಥೆಯನ್ನು ಹೇಳಿ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚೈತ್ರಾಗೆ ಕಿಚ್ಚನಿಂದ ಕ್ಲಾಸ್..:‌ ಆಸ್ಪತ್ರೆಯಲ್ಲಿ ಏನೆಲ್ಲ ಆಯಿತು ಎಂದು ಚೈತ್ರಾನ ಬಳಿ ಕಿಚ್ಚ ಕೇಳಿದ್ದಾರೆ. ಇದಕ್ಕೆ ಚೈತ್ರಾ ಅವರು, “ಡಾಕ್ಟರ್‌ ಬಳಿ ನಾನು ಕೆಲವೊಂದು ವಿಚಾರ ಶೋ ಬಗ್ಗೆ ಕೇಳಿದ್ದೆ. ಶೋನಲ್ಲಿ ಏನೆಲ್ಲ ಮಿಸ್‌ ಆಗುತ್ತಿದೆ ಎಂದು ಕೇಳಿದ್ದೆ. ಅದಕ್ಕೆ ಅವರು ಮನರಂಜನೆ ಇಲ್ಲ ಬರೀ ಫೈಟ್‌ ಬಗ್ಗೆ ಹೇಳಿದ್ರು. ನಿಮ್ಮ ಮೆಚ್ಚಿನ ಸ್ಪರ್ಧಿ ಯಾರೆಂದು ಕೇಳಿದ್ದೆ. ಅದಕ್ಕೆ ಅಲ್ಲಿದ್ದವರು ಶಿಶಿರ್‌ ಹಾಗೂ ಹನುಮಂತು ಅವರ ಹೆಸರು ಹೇಳಿದ್ದರು ಎಂದು ಆಸ್ಪತ್ರೆಯಲ್ಲಿ ನಡೆದ ಮಾತಿನ ಬಗ್ಗೆ ವಿವರಿಸಿದ್ದಾರೆ.

ನಾನೇ ಡಾಕ್ಟರ್‌ ಹತ್ರ ಸ್ವಲ್ಪ ಕೇಳಿದ್ದೆ. ಅಲ್ಲಿದ್ದ ನರ್ಸ್‌ ಹತ್ರ ಹೀಗೆಯೇ ಕೇಳಿದಾಗ ಪ್ರತಿಯೊಬ್ಬರು ಅಭಿಪ್ರಾಯಗಳಲ್ಲೂ ನಾನು ಯಾವುದು, ನನ್ನ ಅಭಿಪ್ರಾಯವನ್ನು ಮಿಕ್ಸ್‌ ಮಾಡಿ ಹೇಳಿಲ್ಲವೆಂದಿದ್ದಾರೆ. ಎಲ್ಲರ ಬಗ್ಗೆ ನಾನು ಅಲ್ಲಿ ಮಾತನಾಡಿಲ್ಲವೆಂದಿದ್ದಾರೆ.

ದೊಡ್ಮನೆಯಿಂದ ಆಸ್ಪತ್ರೆಗೆ ಹೋಗಿ ಬಂದ್ಮೇಲೆ ಇದನ್ನೆಲ್ಲ ಉದ್ದೇಶವೇನು. ಕಥೆ ಹೇಳಿದ್ರಾ ಡಾಕ್ಟರ್ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಚೈತ್ರಾ ಅವರು ಹೊರಗಡೆ ನಮ್ಮೆಲ್ಲರ ಬಗ್ಗೆ ಹೀಗೆಲ್ಲ ಮಾತು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ ಎಂದು ಮನೆಮಂದಿಯೆಲ್ಲ ಹೇಳಿದ್ದಾರೆ.

ನೀವು ಚೈತ್ರಾನ ಬಳಿ ನನ್ನ ಹೆಸರು ಹೇಳಿದ್ರಾ. ನಿಮ್ಮ ಹಾಗೆ ನನಗೆ ಕೂಡ ಫ್ಯಾಮಿಲಿ ಇದೆ. ನಿಮ್ಮಷ್ಟು ಚೀಪ್‌ ಮೆಂಟಲಿಟಿ ನನಗೆ ಇಲ್ಲ. ನನ್ನನ್ನು ಇಷ್ಟಪಡುವ ಜನರು ಹೊರಗಡೆ ಇದ್ದಾರೆ. ನನ್ನ ಆಟ ನಾನು ಆಡುತ್ತಿದ್ದೇನೆ. ನಿಮ್ಮ ಸ್ನೇಹದ ಬಗ್ಗೆ ನಾನು ಮಾತನಾಡಿದ್ದೇನಾ? ಎಂದು ಭವ್ಯ ಅವರು ಮಂಜು ಮೇಲೆ ಗರಂ ಆಗಿದ್ದಾರೆ.

ವರ್ತೂರು ಉದಾಹರಣೆ ಕೊಟ್ಟು ಚೈತ್ರಾಗೆ ಕಿಚ್ಚನ ತರಾಟೆ:  ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್‌ ಅವರು ಒಂದು ವಾರ ಹೊರಗಡೆ ಹೋಗಿದ್ರು. ಜೈಲಿಗೆ ಹೋಗಿದ್ದರು ಅವರು. ಆದರೆ ಹೊರಗಡೆ ಹೋಗಿದಾಗ ಒಂದೇ ಒಂದು ಪದ ಕೂಡ ಮಾತನಾಡಿಲ್ಲ. ಅದಕ್ಕೆ ಹೇಳೋದು ಪ್ರೋಟೋಕಾಲ್‌ ಅಂಥ. ನಿಮ್ಮೆಲ್ಲ ಕಥೆಗೆ ಡಾಕ್ಟರ್‌ ಸಪೋರ್ಟ್‌ ತೆಗೆದುಕೊಳ್ಳಬೇಡಿ. ಹೊರಗಿನ ವಿಚಾರ ಹೇಳಿದ್ದನ್ನು ಹೇಳಿದ್ರಿ ಆದರೆ ಅದನ್ನು  ಕತೆ ಮೂಲಕ ಹೇಳುವ ಅಗತ್ಯವಿತ್ತು ಎಂದು ಪ್ರಶ್ನಿಸಿದ್ದಾರೆ.

ಎಲ್ಲದಕ್ಕೂ  ಸ್ಪಷ್ಟನೆ ಕೊಡುತ್ತಾ ಹೋದ ಚೈತ್ರಾ ಕಿಚ್ಚ ಅವರು ಹಾಕಿದ ಮರು ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ, ಗೊಂದಲಕ್ಕೆ ಒಳಗಾದರು.

ಮಾತಿನ ಮಧ್ಯ ಮೂಗು ತೂರಿಸಿದ ಚೈತ್ರಾ.. ನನಗೆ ಗೌರವ ಕೊಡಿ ಎಂದ ಚೈತ್ರಾ..

ಒಬ್ಬರು ಮಾತನಾಡುವಾಗ ಕೈ ಎತ್ತದೆ ಚೈತ್ರಾ ಅವರು ಮಧ್ಯದಲ್ಲಿ ಮಾತನಾಡಿದ್ದಕ್ಕೆ ಕಿಚ್ಚ ಗರಂ ಆಗಿದ್ದಾರೆ. ನನ್ನ ಮಾತಿಗೆ ಗೌರವನೇ ಇಲ್ಲ. ಕೈ ಎತ್ತಿ ಮಾತನಾಡಿ. ನಿಮಗೆ ನನ್ನ ಬಗ್ಗೆ ಏನ್ರಿ ಗೊತ್ತು. ಮನುಷ್ಯತ್ವ, ಮಾನವೀಯತೆ, ಹೃದಯ ಈ ಮೂವರ ಬಗ್ಗೆ ಬಾಳಿ ಬದುಕುತ್ತಿರುವವನು ನಾನು. ನನ್ನನ್ನು ಮಾನವನಾಗಿ ಬದುಕಲು ಬಿಡಿ. ನಿಮಗೆ ಗೌರವ ಕೊಟ್ಟು ಮಾತನಾಡಿಸುತ್ತೇನೆ. ನನಗೆ ಗೌರವ ಕೊಡಿವೆಂದು ಕಿಚ್ಚ ಹೇಳಿದ್ದಾರೆ.

ಏರು ಧ್ವನಿಯಲ್ಲಿ ನಿಮ್ಮ ಹತ್ರ ಮಾತನಾಡಿದ್ದಕ್ಕೆ ಕ್ಷಮೆ ಇರಲಿ. ಯಾರ ಹತ್ರನೂ ನಾನು ಈ ರೀತಿ ಮಾತನಾಡಲ್ಲ ಅಮ್ಮ. ಅಲ್ಲಿಯವರೆಗೆ ಹೋಗೋದು ಬೇಡ ಅಮ್ಮವೆಂದು ಕಿಚ್ಚ ಹೇಳಿದ್ದಾರೆ.

ನನ್ನ ಸ್ಸಾರಿಗೂ ನೀವು ಸ್ಪಂದಿಸಿಲ್ಲ. ಎಷ್ಟು ಬೇಕು ಅಷ್ಟೇ ಮಾತನಾಡುತ್ತೇನೆ. ಇದನ್ನು ನೆನಪಿಟ್ಟುಕೊಳ್ಳಿ. ನಾನು ಸ್ಸಾರಿ ಕೇಳುವಾಗ ನಿಮ್ಮ ಗಮನ ಇಲ್ಲಿ ಇಲ್ಲ. ಚೆನ್ನಾಗಿ ಬೆಳೆಯಿರಿ ಚೈತ್ರಾ ಅವರೇ ಎಂದು ಬುದ್ದಿ ಮಾತು ಹೇಳಿದ್ದಾರೆ.

ಇದಕ್ಕೆ ನಿಮ್ಮ ಬಳಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಆದರೆ ಕಿಚ್ಚ ನನ್ನ ಹತ್ರ ಯಾಕಮ್ಮ ಕ್ಷಮೆ ಕೇಳ್ತೀರಾ. ನೀವು ನನ್ನ ಕ್ಷಮೆಗೆ ಸ್ಪಂದಿಸಿಲ್ಲ. ನಾನ್ಯಾಕೆ ಸ್ಪಂದಿಸಬೇಕೆಂದು ಹೇಳಿದ್ದಾರೆ.

ಈ ವಾರ ನಾನೇ ಮನೆಯಿಂದ ಆಚೆ ಹೋಗಬೇಕು ಅಂದುಕೊಂಡಿದ್ದೇನೆ. ಇಲ್ಲಿಗೆ ನನ್ನ ಋಣ ಮುಗಿಯಿತು ಅನ್ನಿಸುತ್ತದೆ. ಕಣ್ಣೀರಿಟ್ಟ ಚೈತ್ರಾ ಉಸಿರುಗಟ್ಟುವ ವಾತಾವರಣದಲ್ಲಿ ಇರುವುದ್ದಕ್ಕಿಂತ ಮನೆಗೆ ಹೋಗಬೇಕೆಂಥ ನಿರ್ಧಾರ ಮಾಡಿದ್ದೇನೆ. ದಯವಿಟ್ಟು ನನ್ನ ಮನವಿಯನ್ನು ಒಪ್ಪಿಕೊಳ್ಳಿವೆಂದು ಎಂದು ಕಣ್ಣೀರಿಟ್ಟಿದ್ದಾರೆ.

ನಾನು ಪ್ರೋಟೋಕಾಲ್‌ ಮೀರಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದ್ದಕ್ಕೆ. ಡಾಕ್ಟರ್‌, ನರ್ಸ್‌ ಹಾಗೂ ಮನೆಯವರಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಚೈತ್ರಾ ಅವರು ಹೇಳಿದ್ದಾರೆ. ಈ ಟಾಪಿಕ್‌ ಇಲ್ಲೇ ಬಿಡಬೇಕು ಎಂದು ಕಿಚ್ಚ ಮನೆಯವರಿಗೆ ಹೇಳಿದ್ದಾರೆ.

ಕಿಚ್ಚನ ಚಪ್ಪಾಳೆ ಈ ವಾರ ಗೋಲ್ಡ್‌ ಸುರೇಶ್‌ ಅವರಿಗೆ ದಕ್ಕಿದೆ.

ನಾಮಿನೇಷನ್‌ನಿಂದ ಪಾರಾದವರು ಯಾರೆಲ್ಲ.. ಇವತ್ತು ನಾಮಿನೇಷನ್‌ನಿಂದ ಮೊದಲಿಗೆ ಸುರೇಶ್‌ ಅವರು ಸೇಫ್‌ ಆಗಿದ್ದಾರೆ. ಆ ಬಳಿಕ ಧನರಾಜ್‌ ಅವರು ಸೇಫ್‌ ಆಗಿದ್ದಾರೆ. ಮೋಕ್ಷಿತಾ ಅವರು ಇವತ್ತಿನ ಸಂಚಿಕೆ ಸೇಫ್‌ ಆಗಿದ್ದಾರೆ.

ಜೋಡಿ ಟಾಸ್ಕ್‌ ಆಗಿದ್ದ ಕಾರಣ ಯಾರು ಹೋಗ್ತಾರೆ ಅಥವಾ ಯಾರು ಯಾರು ಹೋಗ್ತಾರೆ ಅಂಥ ಕಿಚ್ಚ ಹೇಳಿದ್ದು,  ನಾಳೆ  (ಭಾನುವಾರ) ಡಬಲ್‌ ಎಲಿಮಿನೇಷನ್‌ ಇರುತ್ತೋ ಇಲ್ವೋವೆನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next