Advertisement

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

03:54 PM Oct 21, 2024 | Team Udayavani |

ಚೆನ್ನೈ: ದಕ್ಷಿಣ ಭಾರತದ (South Indian actress)  ಖ್ಯಾತ ನಟಿ ಓವಿಯಾ ಹೆಲೆನ್ (Oviya Helen) ಅವರದ್ದು ಎನ್ನಲಾಗುತ್ತಿರುವ ಖಾಸಗಿ ವಿಡಿಯೋ (Private Video) ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ.

Advertisement

ಮಾಲಿವುಡ್‌ (Mollywood) ಹಾಗೂ ಕಾಲಿವುಡ್‌ (Kollywood) ಸಿನಿರಂಗದಲ್ಲಿ ಗುರುತಿಸಿಕೊಂಡು, ಆ ಬಳಿಕ ಬಿಗ್‌ ಬಾಸ್‌ ತಮಿಳು ಶೋನಲ್ಲೂ ಕಾಣಿಸಿಕೊಂಡಿರುವ ಓವಿಯಾ ಅಶ್ಲೀಲ ವಿಡಿಯೋ ವೈರಲ್‌ ಮಾಡಿದವರ ಬಗ್ಗೆ‌ ಚೆನ್ನೈ ಪೊಲೀಸ್‌ ಕಮಿಷನರ್‌ ಗೆ ಇತ್ತೀಚೆಗೆ ದೂರು ನೀಡಿದ್ದರು.

ಇದೀಗ ಮಾರ್ಫ್‌ ಮಾಡಿ ಅದನ್ನು ವೈರಲ್‌ ಮಾಡಿದವರು ಯಾರು ಎನ್ನುವುದನ್ನು ಓವಿಯಾ ಹೇಳಿದ್ದಾರೆ. ನನ್ನ ಮಾಜಿ ಪ್ರಿಯಕರ ತಾರಿಖ್ ಎನ್ನುವಾತ ವಿಡಿಯೋಗಳನ್ನು ಮಾರ್ಫ್‌ ಮಾಡಿ ಅದನ್ನು ನಾನು ಎಂಬಂತೆ ಬಿಂಬಿಸಿದ್ದಾನೆ. ಆತನ ನಡವಳಿಕೆಯಿಂದ ಬೇಸತ್ತು ನಾನು ಆತನಿಂದ ದೂರವಾಗಿದ್ದೆ. ಇದೇ ಕಾರಣದಿಂದ ಆತ ಈ ರೀತಿ ವಿಡಿಯೋ ಮಾರ್ಫ್‌ ಮಾಡಿ ಸೇಡು ತೀರಿಸಿಕೊಂಡಿದ್ದಾನೆ. ಆತ ಬೇರೆ ಮಹಿಳೆಯರಿಗೂ ಇದೇ ರೀತಿ ಮಾಡಿದ್ದಾನೆ ಎಂದು ನಟಿ ಓವಿಯಾ ಆರೋಪ ಮಾಡಿ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ನಟಿಯಿಂದ ಖಡಕ್‌ ರಿಪ್ಲೈ:

Advertisement

ವಿಡಿಯೋ ಲೀಕ್‌ ಆಗಿದೆ ಎನ್ನುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ನಟಿ ಓವಿಯಾ ತನ್ನ ಫೋಟೋ ಕೆಳಗೆ ಕಮೆಂಟ್‌ ಮಾಡಿರುವವರಿಗೆ ಖಡಕ್‌ ಆಗಿಯೇ ರಿಪ್ಲೈ ಮಾಡಿದ್ದರು. ಏನೇ ಕಮೆಂಟ್‌ ಬಂದರೂ ಅದಕ್ಕೆ ಧೈರ್ಯವಾಗಿಯೇ ರಿಪ್ಲೈ ಕೊಟ್ಟಿದ್ದರು.

ಓವಿಯಾ ಅವರ ಫೋಟೋ ಕೆಳಗೆ ಕಮೆಂಟ್‌ ಮಾಡಿರುವ ಒಬ್ಬಾತ “17 ಸೆಕೆಂಡ್‌ ಗಳ ವೀಡಿಯೋ ಇಲ್ಲಿದೆ ಮೇಡಂ” ಎಂದು ಮನ್ಷನ್‌ ಮಾಡಿದ್ದಾನೆ. ಇದಕ್ಕೆ ರಿಪ್ಲೈ ಕೊಟ್ಟಿರುವ ನಟಿ “ಎಂಜಾಯ್‌ ಮಾಡಿ” ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next