Advertisement
ಹನುಮಂತು ವೆಸ್ಟರ್ನ್ ಟಾಯ್ಲೆಟ್ ಪಾಠ ಮಾಡಿದ ಧನರಾಜ್:ಹಳ್ಳಿಯಿಂದ ಬಂದಿರುವ ಹನುಮಂತು ಅವರಿಗೆ ಬಿಗ್ ಬಾಸ್ ಮನೆಯನ್ನು ಪರಿಚಯಿಸಲು ಧನರಾಜ್ ಹಾಗೂ ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ಹೇಳಿದ್ದು, ಅದರಂತೆ ಧನರಾಜ್ ಅವರು ವೆಸ್ಟರ್ನ್ ಟಾಯ್ಲೆಟ್ ಬಳಸೋದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ.
ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತನಾಡಿದ್ರೆ ನಾನು ಯಾರನ್ನು ಬಿಡಲ್ಲ ಎಂದು ಚೈತ್ರಾ ಅವರು ಐಶ್ವರ್ಯಾ ಜತೆ ಮಾತನಾಡುತ್ತಾ ಹೇಳಿದ್ದಾರೆ.
Related Articles
ಹನುಮಂತು ಅವರು ಯಾವ ಸದಸ್ಯ ಯಾವ ಸ್ಥಾನದಲ್ಲಿರಬೇಕೆಂದು ನಿರ್ಧರಿಸಿ ತಮ್ಮ ಇಚ್ಚೆಗೆ ಅನುಗುಣವಾಗಿ ಒಬ್ಬೊಬ್ಬರನ್ನು ಒಂದೊಂದು ಸ್ಥಾನದಲ್ಲಿ ನಿಲ್ಲಿಸಿದ್ದಾರೆ.
Advertisement
ಎಲ್ಲಾ ಸ್ಪರ್ಧಿಗಳು ಮೂರು ವಾರದ ತಮ್ಮ ಆಟದ ಬಗ್ಗೆ ಹನುಮಂತು ಅವರಿಗೆ ಹೇಳಿದ್ದು, ಹನುಮಂತು ಅವರು ಇದನ್ನು ಕೇಳಿದ ಬಳಿಕ ನಂಬರ್ ವೈಸ್ ಒಬ್ಬೊಬ್ಬರನ್ನು ನಿಲ್ಲಿಸಿದ್ದಾರೆ.
ಶಿಶಿರ್ ಅವರನ್ನು ಒಂದನೇ ಸ್ಥಾನದಲ್ಲಿ ನಿಲ್ಲಿಸಿದ್ದು, ಗೌತಮಿ ಅವರನ್ನು ಎರಡನೇ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಮೂರನೇ ಸ್ಥಾನವನ್ನು ಮೋಕ್ಷಿತಾ, ನಾಲ್ಕನೇ ಸ್ಥಾನವನ್ನು ಐಶ್ವರ್ಯಾ, ಐದನೇ ಸ್ಥಾನವನ್ನು ಧನರಾಜ್ ಅವರಿಗೆ ನೀಡಿದ್ದಾರೆ. ಕೊನೆಯ ಸ್ಥಾನವನ್ನು ಗೋಲ್ಡ್ ಸುರೇಶ್ ಅವರಿಗೆ ನೀಡಿದ್ದಾರೆ.
ಕ್ಯಾಪ್ಟನ್ ಹನುಮಂತು ಮೇಲೆ ಮುಗಿಬಿದ್ದ ಸ್ಪರ್ಧಿಗಳು:ತಮಗೆ ಕೊಟ್ಟ ಸ್ಥಾನದಿಂದ ಅಸಮಾಧಾನಗೊಂಡ ಕೆಲ ಸ್ಪರ್ಧಿಗಳು ನೀವು ಹೊರಗಡೆ ನಮ್ಮ ಆಟ ಏನು ನೋಡ್ಕೊಂಡು ಬಂದಿದ್ದೀರಾ? ಐದು ನಿಮಿಷ ಆಟ ನೋಡಿ ನಮ್ಮನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದೀರಿ. ನಿಮ್ಮ ನಿರ್ಧಾರ ಇಲ್ಲಿ ಯಾರಿಗೂ ಸಮಾಧಾನ ತಂದಿಲ್ಲ. ನಿಮಗೆ ನೀವು ಕೊಟ್ಟದಕ್ಕೆ ಕ್ಲಾರಿಟಿ ಇಲ್ಲ ಅಂದ್ರೆ ಯಾಕೆ ಈ ಸ್ಥಾನವನ್ನು ಕೊಟ್ರಿ ಎಂದು ಒಬ್ಬರ ಮೇಲೆ ಒಬ್ಬದು ಹನುಮಂತು ಮೇಲೆ ಮುಗಿಬಿದಿದ್ದಾರೆ. ಚೈತ್ರಾ ಅವರು ತಮಗೆ ಕೊಟ್ಟ 13ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 7ನೇ ಸ್ಥಾನ ಪಡೆದ ಭವ್ಯಾ, 12ನೇ ಸ್ಥಾನವನ್ನು ಪಡೆದ ತಿವಿಕ್ರಮ್ ಅವರು ನನಗೆ ಈ ಸ್ಥಾನ ಯಾಕೆ ಕೊಟ್ರಿ ಎಂದು ಪ್ರಶ್ನಿಸಿದ್ದಾರೆ. ಮನೆಯವರ ಜಗಳ ನೋಡಿ ಹನುಮಂತು ನನಗೆ ಈ ಕ್ಯಾಪ್ಟನ್ ಸ್ಥಾನ ಬೇಡ ಬಿಗ್ ಈ ರೀತಿ ಜಗಳ ಮಾಡಿಕೊಳ್ಳುತ್ತಾರೆ ಅಂಥ ಗೊತ್ತು ಇದಿದ್ದರೆ ಇಲ್ಲಿಗೆ ಬರ್ತಾನೆ ಇರಲಿಲ್ಲ ಎಂದಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್: ಜೋಡಿಗಳಾಗಿ ಕಣಕ್ಕಿಳಿದ ಸ್ಪರ್ಧಿಗಳು:
ವಾರದ ಕ್ಯಾಪ್ಟನ್ ಗಾಗಿ ಬಿಗ್ ಬಾಸ್ ಕ್ಯಾಪ್ಟನ್ಸಿ ಆಕಾಂಕ್ಷಿಗಳಿಗೆ ಟಾಸ್ಕ್ ವೊಂದನ್ನು ನೀಡಿದ್ದಾರೆ. ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್ ಆಗಿದ್ದಾರೆ. 7 ಜೋಡಿಗಳಾಗಿ ಟಾಸ್ಕ್ ಆಡಿದ್ದಾರೆ. ಶಿಶಿರ್ ಅವರು ಸುರೇಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಗೌತಮಿ ಮೋಕ್ಷಿತಾ,ಐಶ್ವರ್ಯಾ – ತಿವಿಕ್ರಮ್, ಧನರಾಜ್ – ಭವ್ಯಾ, ಮಂಜು – ಅನುಷಾ, ಧರ್ಮಕೀರ್ತಿರಾಜ್ – ಹಂಸಾ, ಮಾನಸ – ಚೈತ್ರಾ ಅವರು ಜೋಡಿಗಳಾಗಿ ಆಡಿದ್ದಾರೆ. ಏಕಾಗ್ರತೆಗೆ ಭಂಗ ತರುವ ಟಾಸ್ಕ್ ನಲ್ಲಿ ಮೊದಲ ಜೋಡಿ ಗೌತಮಿ – ಮೋಕ್ಷಿತಾ ನೀರು ಎಸೆದ ಸವಾಲು ಮೆಟ್ಟಿ ನಿಂತು ಟಾಸ್ಕ್ ಪೂರ್ಣಗೊಳಿಸಿದ್ದಾರೆ.