ಬೆಂಗಳೂರು: ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎನ್ನುವ ಮಾತಿನ ನಡುವೆಯೇ ಕಾರ್ಯಕ್ರಮ ಆರಂಭದ ಸುಳಿವು ಅಧಿಕೃತವಾಗಿ ಹೊರಬಿದ್ದಿದೆ.
ಬಿಗ್ ಬಾಸ್ ಕನ್ನಡ 11 ಈ ಬಾರಿ ಆರಂಭಕ್ಕೂ ಮುನ್ನ ಸಾಕಷ್ಟು ಚರ್ಚೆ ಅಗುತ್ತಿದೆ. ಅದಕ್ಕೆ ಕಾರಣ ಈ ಬಾರಿ ನಿರೂಪಕ ಯಾರು ಎನ್ನುವುದರ ವಿಚಾರಕ್ಕೆ.
ಪ್ರತಿಬಾರಿ ಕಿಚ್ಚ ಸುದೀಪ್ (Kiccha Sudeep) ಅವರು ನಡೆಸಿಕೊಳ್ಳುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಅವರೆ ನಡೆಸಿಕೊಡುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ತಕ್ಕಂತೆ ಕಿಚ್ಚ ಅವರು ಕೊಟ್ಟಿರುವ ಹೇಳಿಕೆಯೂ ಗೊಂದಲಮಯವಾಗಿದೆ.
ಈ ಎಲ್ಲದರ ನಡುವೆಯೇ ಭಾನುವಾರ (ಸೆ.1ರಂದು) ಕಲರ್ಸ್ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಗ್ ಬಾಸ್ ಸೀಸನ್ 11 ರ ಸಣ್ಣ ಝಲಕ್ ಹೊರಬಿದ್ದಿರುವುದು ಪ್ರೇಕ್ಷಕರ ಗಮನ ಸೆಳೆದಿದೆ.
ಪ್ರೋಮೊ ರೀತಿಯಲ್ಲಿ ಬಿಗ್ ಬಾಸ್ ಇಂಟ್ರೋ ಹಾಕಲಾಗಿದ್ದು, ಶೀಘ್ರದಲ್ಲೇ ಕಾರ್ಯಕ್ರಮ ಶುರುವಾಗಲಿದೆ ಎನ್ನುವ ಸುಳಿವನ್ನು ವಾಹಿನಿ ನೀಡಿದೆ. ಹೊಸ ಸೀಸನ್ ಹೊಸ ಲೋಗೋವನ್ನು ಪರಿಚಯಿಸಲಾಗಿದೆ.
ಆದರೆ ಕಾರ್ಯಕ್ರಮ ನಡೆಸಿಕೊಡುವ ನಿರೂಪಕ ಯಾರು? ಯಾವಾಗಿನಿಂದ ಶುರು ಎನ್ನುವುದನ್ನು ರಹಸ್ಯವಾಗಿಯೇ ಇಡಲಾಗಿದೆ.