Advertisement

BBK11: ಎಲ್ಲರೂ ಬಿಗ್‌ ಬಾಸ್‌ ಆಗೋಕೆ ಹೋಗಬೇಡಿ.. ಸ್ಪರ್ಧಿಗಳಿಗೆ ಕಿಚ್ಚನ ಎಚ್ಚರಿಕೆ

10:57 PM Nov 30, 2024 | Team Udayavani |

ಬೆಂಗಳೂರು: ಕಿಚ್ಚ ಸುದೀಪ್‌ ಅವರ ಸಮ್ಮುಖದಲ್ಲಿ ವಾರದಲ್ಲಿ ನಡೆದ ಅನೇಕ ವಿಚಾರಗಳ ಬಿಗ್‌ ಬಾಸ್‌ ಮನೆಯಲ್ಲಿ ಚರ್ಚೆ ನಡೆದಿದೆ.

Advertisement

ಕ್ಯಾಪ್ಟನ್‌ ಧನರಾಜ್‌ ಅವರು ಐಶ್ವರ್ಯಾ ಅವರನ್ನು ಉತ್ತಮವೆಂದು ಕೊಟ್ಟಿದ್ದಾರೆ. ಶೋಭಾ ಅವರಿಗೆ ಕಳಪೆ ಕೊಟ್ಟಿದ್ದಾರೆ.  ಈ ವಾರ ನಿಮ್ಮ ಆ್ಯಕ್ಟಿವಿಟಿ ಅಷ್ಟಾಗಿ ಕಂಡಿಲ್ಲವೆನ್ನುವ ಕಾರಣವನ್ನು ನೀಡಿದ್ದಾರೆ. ಇದಕ್ಕೆ ಶೋಭಾ ನೀವು ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಲೈಫ್ ಅಲ್ಲಿ ಏನೇನೂ ಫೇಸ್ ಮಾಡಿದ್ದೀನಿ 24 ಗಂಟ ಜೈಲು ಅಲ್ಲಿರೋದು ದೊಡ್ಡ ವಿಷ್ಯವಲ್ಲವೆಂದು ಕಣ್ಣೀರಿಡುತ್ತಲೇ ಜೈಲಿನೊಳಗೆ ಹೋಗಿದ್ದಾರೆ .

ಶೋಭಾ ಅವರು ಕಳಪೆಯಾಗಿ ಜೈಲಿಗೆ ಹೋಗುವ ಮುನ್ನ ಇಲ್ಲೇ ನಿಂತು ನಾನು ನನ್ನ ಆಟವನ್ನು ಉತ್ತಮಪಡಿಸಿಕೊಳ್ಳುತ್ತೇನೆ ಎಂದು ಕಣ್ಣೀರಡುತ್ತಲೇ ಜೈಲಿಗೆ ಹೋಗಿದ್ದಾರೆ.

ಇವರೇನು ಟೀಚರ್‌ ಆ? ಎಲ್ಲರನ್ನು ತಿದ್ದೋಕೆ? ಇವರು ಆಟ ಆಡೋಕೆ ಬಂದಿದ್ದಾರಾ? ಅಥವಾ ಟೀಚರ್‌ ಆಗೋಕೆ ಬಂದಿದ್ದಾರಾ? ಏನು ಆಟ ಆಡುತ್ತಾ ಇದ್ದಾರೆ ಅವರು ಮನೆಯಲ್ಲಿ ಏನೂ ಮಾಡಿಲ್ಲ. ಸುಮ್ಮನ್ನೆ ರಾತ್ರಿ ಗಂಟೆಗಟ್ಟಲೇ ಮಾತನಾಡೋದ್ದಷ್ಟೇ ಎಂದು ಮೋಕ್ಷಿತಾ ಗೌತಮಿ ಅವರ ಬಗ್ಗೆ ಹೇಳಿದ್ದಾರೆ.

ತಾವಿಟ್ಟ ಜುಲೇಬಿಯನ್ನು ತಕ್ಕೊಂಡವರ ಮೇಲೆ ಭವ್ಯ ಅವರು ಗರಂ ಆಗಿದ್ದಾರೆ. ಇದನ್ನು ಮೋಕ್ಷಿತಾ, ಐಶ್ವರ್ಯಾ ಅವರು ಗೊತ್ತಿಲ್ಲದೆ ತಿಂದಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಭವ್ಯ ಕಾಮನ್‌ ಸೆನ್ಸ್‌ ಇಲ್ವಾ ಕೇಳಿ ತೆಗೆದುಕೊಳ್ಳಬೇಕೆಂದಿದ್ದಾರೆ.

Advertisement

ಎಲ್ಲರೂ ಸೇರಿಕೊಂಡೇ ನನ್ನನ್ನು ಕ್ಯಾಪ್ಟನ್‌ ಸ್ಥಾನದಿಂದ ಹೊರಗಿಟ್ಟಿದ್ದಾರೆ. ನಾನು ಕ್ಯಾಪ್ಟನ್‌ ಆದರೆ ಬೇರೆ ರೀತಿ ಮನೆಯನ್ನು ನೋಡಿಕೊಳ್ಳುತ್ತೇನೆ ಅಂಥ ಎಲ್ಲರೂ ಸೇರಿ ಈ ರೀತಿ ಮಾಡಿದ್ದಾರೆ ಎಂದು ಸುರೇಶ್‌ ಹೇಳಿದ್ದಾರೆ.

ಇದಕ್ಕೆ ಶಿಶಿರ್‌ – ಮೋಕ್ಷಿತಾ ನಾವು ಚರ್ಚೆ ಮಾಡಿ ಸುರೇಶ್‌ ಅವರನ್ನು ಹೊರಗಿಡಲಿಲ್ಲ ಎಂದು ಹೇಳಿದ್ದಾರೆ. ಸ್ಪರ್ಧಿಗಳ ಈ ರೀತಿಯ ಆಟಕ್ಕೆ ಕಿಚ್ಚ ಇದೊಂದು ಅತ್ಯಂತ ಕಳಪೆ ಸ್ಕ್ರಿಪ್ಟ್ ವೆಂದು ಸ್ಪರ್ಧಿಗಳ ಸ್ಟ್ರಾಟರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ವರ್ತನೆಗಳ ಮೂಲಕ ಒಂದು ಸ್ಕ್ರಿಪ್ಟ್‌ ನಡೆಯುತ್ತಿದೆ. ಆದರೆ ಮೈಂಡ್‌ ಅಲ್ಲಿ ಏನು ಆಗುತ್ತಿದೆ ಅಂಥ ಜನರಿಗೆ ಗೊತ್ತಾಗುತ್ತಿಲ್ಲ ಎಂದು ಕಿಚ್ಚ ಹೇಳಿದ್ದಾರೆ.

ಎಲ್ಲರೂ ಬಿಗ್‌ ಬಾಸ್‌ ಆಗೋಕೆ ಹೋಗಬೇಡಿ..

ಮನೆಯವರು ದಯವಿಟ್ಟು ನೀವು ಬಿಗ್‌ ಬಾಸ್‌ ಆಗೋಕೆ ಹೋಗಬೇಡಿ.  ಕಿಚ್ಚನ ಚಪ್ಪಾಳೆ ಸಿಗುತ್ತದೆ ಅಂದುಕೊಳ್ಳೋಕೆ ಹೋಗಬೇಡಿ. ನಿಮ್ಮ ಬುಡಕ್ಕೆ ಬೆಂಕಿ ಇಡೋಕೆ ಮತ್ತೊಬ್ಬ ಕಾಯುತ್ತಾ ಇರುತ್ತಾನೆ. ಇಲ್ಲಿ ದೇವರಾಗೋಕೆ ಹೋಗಬೇಡಿ. ಒಬ್ಬ ವ್ಯಕ್ತಿ ಎರಡು – ಮೂರು ಸಲಿ ಕ್ಯಾಪ್ಟನ್‌ ಆದರೆ ಏನಾಗುತ್ತದೆ?. ಅರ್ಹತೆ ಇದ್ದವರು ಆಗುತ್ತಾರೆ. ಆದರಲ್ಲಿ ಏನಾಗುತ್ತದೆ. ನನಗೆ ಇಲ್ಲಿ ಫೇವರೇಟ್‌ ಇಲ್ಲ. ಮಂಜು, ತ್ರಿವಿಕ್ರಮ್‌ ಅವರು ನನಗೆ ಪರಿಚಯ ಇರಬಹುದು. ಅವರು ನಾಳೆ ಹೋದರೆ ಅವರನ್ನು ಕರೆಸೋದು ನಾನೇ. ಇಲ್ಲಿ ಯಾರೂ ಫೇವರೇಟ್‌ ಅಲ್ಲ. ಹೆಚ್ಚು ಪರಿಚಯ ಇದ್ದಿದ್ದರೆ ಧರ್ಮ ಕೀರ್ತಿ ಅವರು ಇಷ್ಟೋತ್ತಿಗೆ ಮನೆಯೊಳಗೆ ಇರುತ್ತಾ ಇದ್ದರು. ಕಿಚ್ಚನ ಚಪ್ಪಾಳೆ ಎರಡು ಮೂರು ಸಲಿ ಒಬ್ಬನಿಗೆ ಸಿಕ್ಕರೆ ಅವರಿಗೆ ಅರ್ಹತೆ ಇದೆ ಅಂಥ ಅರ್ಥ ಎಂದು ಕಿಚ್ಚ ಹೇಳಿದ್ದಾರೆ.

ಬಿಗ್‌ ಬಾಸ್‌ ಸಾಮ್ರಾಜ್ಯದ ಬಗ್ಗೆ ಕಿಚ್ಚ ಅವರು ಸ್ಪರ್ಧಿಗಳೊಂದಿಗೆ ಅನುಭವ ಕೇಳಿದ್ದಾರೆ.  ಮಹಾರಾಜನ ಕಾನ್ಸೆಪ್ಟ್‌ ಮಾಡಿರುವುದು ಒಬ್ಬ ಕಲಾವಿದನಾಗಿ ನನಗೆ ಇಷ್ಟವಾಯಿತೆಂದು ಮಂಜು ಹೇಳಿದ್ದಾರೆ. ಇನ್ನು ಸಹ ಇದನ್ನು ಮುಂದುವರೆಸಬೇಕಿತ್ತು. ಮಂಜು – ಮೋಕ್ಷಿತಾ ಈಗೋ ಬಿಟ್ಟು ಆಡಬೇಕಿತ್ತು ಎಂದು ರಜತ್‌ ಹೇಳಿದ್ದಾರೆ.

ಮಂಜು -ಮೋಕ್ಷಿತಾ ನಡುವೆ ನಡೆದ ಮಾತಿನ ಚಕಮಕಿ ಕುರಿತು ಕಿಚ್ಚ ಕೇಳಿದ್ದಾರೆ. ಮಂಜಣ್ಣ ಅವರು ಪರ್ಸನಲ್‌ ಆಗಿ ತೆಗೆದುಕೊಂಡರು. ಫಸ್ಟ್‌ ಅವರು ಶುರು ಮಾಡಿದಾಗ ನಾನು ಸಹ ಶುರು ಮಾಡಿದೆ ಎಂದು ಮೋಕ್ಷಿತಾ ಹೇಳಿದ್ದಾರೆ. ಕೆಲವೊಂದು ಅವರ ಮಾತುಗಳು ನನಗೆ ತುಂಬಾ ಹರ್ಟ್‌ ಆಗಿದೆ. ನನಗೆ ಹರ್ಟ್‌ ಆಗಿದ್ದಕ್ಕೆ ನಾನು ಆ ರೀತಿ ರಿಯಾಕ್ಟ್‌ ಮಾಡೋಕೆ ಶುರು ಮಾಡಿದ್ದು ಎಂದಿದ್ದಾರೆ.

ವೈಯಕ್ತಿಕವಾಗಿರುವಂಥದ್ದು ಪಾತ್ರದೊಳಗೆ ತರುವುದು ಎಷ್ಟು ಸರಿ ಎಂದು ಕಿಚ್ಚ ಕೇಳಿದ್ದಾರೆ. ಚೆನ್ನಾಗಿ ಆಡುತ್ತಿದ್ದೀರಿ. ಪರ್ಸನಲ್‌ ಆಗಿ ತಕ್ಕೊಂಡು ತುಂಬಾ ಕೆಟ್ಟದಾಗಿ ಹಾಳು ಮಾಡಿಕೊಂಡ್ರಿ. ಸಂಬಂಧ ಸಂಬಂಧ ಅಂತೀರಾ ಆಮೇಲೆ ನನಗೆ ಮೋಸ ಆಯಿತು, ನಂಬಿಕೆ ದ್ರೋಹ ಆಯಿತು ಅಂತೀರಿ ಯಾರು ಹೇಳಿದ್ರು ನಂಬಿಯಂಥ ಎಂದು ಮೋಕ್ಷಿತಾ ಅವರಿಗೆ ಸುದೀಪ್‌ ಹೇಳಿದ್ದಾರೆ.

ಯುವರಾಣಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು ಅಂತ ಹೇಳಿದಾಗ ಗೌತಮಿ ಅವರೇ ನೀವದನ್ನು ನಿರಾಕರಿಸುತ್ತೀರಿ. ಮಹಾರಾಜರ ಹಾಗೆ ಬೇರೆ ಅವರಿಗೆ ಆದೇಶ ಕೊಟ್ಟಹಾಗೆ ತಾವು ಕೊಡಬೇಕಿತ್ತು. ಹೇಳಿದ್ದಷ್ಟು ಮಾಡು ಅಂಥ. ಪ್ರಜೆ ಮಾತನಾಡುತ್ತಿದ್ದಾಗ ಗೌತಮಿ ಮಾತನಾಡುತ್ತಿದ್ದರು ಎಂದಿದ್ದಾರೆ.

ಟಾಸ್ಕ್‌ ನಲ್ಲಿ ಆದಾ ತಪ್ಪುಗಳಿಂದ ಯಾರೆಲ್ಲ ಬಕ್ರಾಗಳು ಆದವರು ಎಂದು ಕಿಚ್ಚ ಕೇಳಿದ್ದಾರೆ. ರಿಸಲ್ಟ್‌ ಬರದಿದ್ದಾಗ ನಾವೇ ಬಕ್ರಾ ಆದದ್ದು ಎಂದು ತ್ರಿವಿಕ್ರಮ್‌ ಹೇಳಿದ್ದಾರೆ. ಟಾಸ್ಕ್‌ ಅನ್ನು ಟಾಸ್ಕ್‌ ನ್ನು ಪರ್ಸನಲ್‌ ಆಗಿ ತಕ್ಕೊಂಡಿದ್ದಾರೆ. ನನ್ನನ್ನು ಕ್ಯಾಪ್ಟನ್ಸಿನಿಂದ ಬೇಕಂತಲೇ ಹೊರಗಿಟ್ಟಿದ್ದಾರೆ. ಎದುರಾಳಿ ತಂಡದಲ್ಲಿ ಆಡುವಾಗ ನಮ್ಮನ್ನು ಟಾರ್ಗೆಟ್‌ ಮಾಡಿ ದುಷ್ಮನ್‌ ತರ ನೋಡುತ್ತಾರೆ. ಗೆಲುವು ಸೋಲು ಇದ್ದದ್ದೇ ಅದನ್ನು ಪರ್ಸನಲ್‌ ಅಲ್ಲಿ ಯಾಕೆ ತಕ್ಕೊಳುತ್ತಾರೆ. ನಾನಿಲ್ಲಿ ಮಂಜು ಅವರನ್ನು ಗೆಲ್ಲಿಸೋಕೆ ಬರಲಿಲ್ಲ. ನನ್ನ ಆಟ ಆಡೋಕೆ ನಾನು ಬಂದಿದ್ದೀನಿ. ಜನರ ಪ್ರೀತಿ ಗಳಿಸೋಕೆ. ನೆಕ್ಸ್ಟ್‌ ವಾರ ಜನರ ಕಳ್ಸಿದ್ರೆ ನಾನು ಹೋಗ್ತೀನಿ ಎಂದು ಮಂಜು ಅವರ ಬಗ್ಗೆ ರಜತ್‌ ಹೇಳಿದ್ದಾರೆ.

ಇಲ್ಲಿ ಬಕ್ರಾ ಆದದ್ದು ನೀವು ಮಾತ್ರವಲ್ಲ ಟಾಸ್ಕ್‌ ಮಾಡಿದ ಬಿಗ್‌ ಬಾಸ್‌ ಟೀಮ್‌,  ವೀಕ್ಷಕರು ಹಾಗೂ ನಾನು ಕೂಡ ಬಕ್ರಾ ಆದೆ ಎಂದು ಕಿಚ್ಚ ಹೇಳಿದ್ದಾರೆ.

ಮಂಜು – ಮೋಕ್ಷಿತಾ ನೀವು ತುಂಬಾ ನಿರಾಸೆ ಮೂಡಿಸಿದ್ದೀರಿ. ಟಾಸ್ಕ್‌ ಥೀಮ್‌ ಅನ್ನೇ ಹಾಳು ಮಾಡಿಬಿಟ್ರಿ. ಒಬ್ಬರು ಹಾಳು ಮಾಡಿದ್ರೆ ಒಬ್ಬರು ಚೆನ್ನಾಗಿ ಆಡಿದಿದ್ರೆ ಜನರ ಚಪ್ಪಾಳೆ ಸಿಗ್ತಾ ಇತ್ತು. ನೋಡುತ್ತಿರುವ ವೀಕ್ಷಕರಿಗೆ ಏನು ನ್ಯಾಯ ಮಾಡಿದ್ರಿ. ಪಾತ್ರ ಚೆನ್ನಾಗಿ ಮಾಡಿದ್ರಿ ಆದರೆ ಒಂದು ಹೆಜ್ಜೆಯಿಂದ ಎಲ್ಲವೂ ಹಾಳಾಯಿತು ಎಂದು ಕಿಚ್ಚ ಕೇಳಿದ್ದಾರೆ.

ಸರ್ಕಾರ ರಚನೆ ಮಾಡೋಕೆ ಮಾಡಿ ಆಡಳಿತ ನಡೆಸಿಬೇಡಿ. ಇಲ್ಲಿ ಯಾವ ರಾಜಕೀಯ ಪಕ್ಷಗಳು ಕೂತಿಲ್ಲ. ಒಳಗಡೆ ಇರುವವರು ಎಲ್ಲರೂ ವೈಯಕ್ತಿಕ ಎಂಎಲ್‌ ಎ, ಎಂಪಿ ಎಂದು ಕಿಚ್ಚ ಹೇಳಿದ್ದಾರೆ.

ಪರ್ಸನಲ್‌ ಎನ್ನುವವಂಥದ್ದು ನಿಮ್ಮ ಸೂಟ್‌ ಕೇಸ್‌ ಅಲ್ಲಿ ಹಾಕಿಡಿ. ಸಂಬಂಧವೆನ್ನುವುದನ್ನು ಧಾರಾವಾಹಿಗಳು ನೀಡುತ್ತದೆ. ಇಲ್ಲಿಂದ ಹೊರಗೆ ಹೋದ ಮೇಲೆ ಸಂಬಂಧ ತೋರಿಸಿ. ಸಂಬಂಧ ಬಹಳ ಮುಖ್ಯ ಆದ್ರಿಂದನೇ ಹೊರಗೆ ಹೋಗಬೇಡಿ ಎಂದು ಮಂಜು – ಗೌತಮಿ ಅವರಿಗೆ ಕಿಚ್ಚ ಖಡಕ್‌ ಆಗಿಯೇ ಹೇಳಿದ್ದಾರೆ.

ಸ್ಪರ್ಧಿಗಳ ದೃಷ್ಟಿಯಲ್ಲಿ ಯಾರು ಕಳಪೆ, ಯಾರು ಉತ್ತಮ..

ವೈಯಕ್ತಿಕವಾಗಿ ಯಾರಿಗೆ ಉತ್ತಮ ಯಾರಿಗೆ ಕಳಪೆ ನೀಡಬೇಕೆಂದು ಎಂದು ಕೇಳಿದಾಗ ಮಂಜು ಅವರು ಶೋಭಾ ಅವರಿಗೆ ಕಳಪೆ, ತ್ರಿವಿಕ್ರಮ್‌ ಅವರಿಗೆ ಉತ್ತಮ ಕೊಟ್ಟಿದ್ದಾರೆ. ಗೌತಮಿ ಅವರು  ಸುರೇಶ್‌ ಅವರಿಗೆ ನೀಡಿದ್ದಾರೆ. ಕಳಪೆಯನ್ನು ಮೋಕ್ಷಿತಾ ಅವರಿಗೆ ನೀಡಿದ್ದಾರೆ. ಮೋಕ್ಷಿತಾ ಅವರು ಶಿಶಿರ್‌ ಅವರಿಗೆ ಉತ್ತಮ ನೀಡಿದ್ದಾರೆ. ಕಳಪೆಯನ್ನು ಶೋಭಾ ಅವರಿಗೆ ನೀಡಿದ್ದಾರೆ. ಶಿಶಿರ್‌ ಅವರು ಮಂಜು ಅವರಿಗೆ ಕಳಪೆಯನ್ನು ನೀಡಿದ್ದಾರೆ. ರಜತ್‌ ಅವರಿಗೆ ಉತ್ತಮವನ್ನು ನೀಡಿದ್ದಾರೆ. ಚೈತ್ರಾ ಅವರು ರಜತ್‌ ಅವರಿಗೆ ಉತ್ತಮ ನೀಡಿದ್ದಾರೆ. ಕಳಪೆಯನ್ನು ಮಂಜು ಅವರಿಗೆ ನೀಡಿದ್ದಾರೆ. ಐಶ್ವರ್ಯಾ ಅವರು ಮಂಜು ಅವರಿಗೆ ಕಳಪೆ, ಉತ್ತಮವನ್ನು ಧನರಾಜ್‌ ಅವರಿಗೆ ನೀಡಿದ್ದಾರೆ. ಶೋಭಾ ಅವರು ಮೋಕ್ಷಿತಾ ಅವರಿಗೆ ಕಳಪೆಯನ್ನು ನೀಡಿದ್ದು, ಉತ್ತಮವನ್ನು ರಜತ್‌ ಅವರಿಗೆ ಉತ್ತಮವನ್ನು ನೀಡಿದ್ದಾರೆ. ತ್ರಿವಿಕ್ರಮ್‌ ಅವರು ಸುರೇಶ್‌ ಅವರಿಗೆ ಉತ್ತಮ, ಮೋಕ್ಷಿತಾ ಅವರಿಗೆ ಕಳಪೆ ನೀಡಿದ್ದಾರೆ. ಭವ್ಯ ಅವರು ತ್ರಿವಿಕ್ರಮ್‌ ಅವರಿಗೆ ಉತ್ತಮ ನೀಡಿದ್ದಾರೆ. ಮೋಕ್ಷಿತಾ ಅವರಿಗೆ ಕಳಪೆಯನ್ನು ನೀಡಿದ್ದಾರೆ. ಹನುಮಂತು ಅವರು ಮಂಜು ಅವರಿಗೆ ಕಳಪೆಯನ್ನು ನೀಡಿದ್ದಾರೆ. ಉತ್ತಮವನ್ನು ತ್ರಿವಿಕ್ರಮ್‌ ಅವರಿಗೆ ನೀಡಿದ್ದಾರೆ. ಸುರೇಶ್‌ ಅವರು ಮೋಕ್ಷಿತಾ ಅವರಿಗೆ ಕಳಪೆಯನ್ನು ನೀಡಿದ್ದಾರೆ. ಉತ್ತಮವನ್ನು ತ್ರಿವಿಕ್ರಮ್‌ ಅವರಿಗೆ ನೀಡಿದ್ದಾರೆ. ರಜತ್‌ ಅವರು ಮಂಜು ಅವರಿಗೆ ಕಳಪೆಯನ್ನು, ತ್ರಿವಿಕ್ರಮ್‌ ಅವರಿಗೆ ಉತ್ತಮವನ್ನು ನೀಡಿದ್ದಾರೆ.

ಜನರ ನಾಮಿನೇಷನ್‌ನಿಂದ ಪಾರಾದವರು ಯಾರೆಲ್ಲ: ಈ ವಾರ ನಾಮಿನೇಟ್‌ ಆಗಿರುವ ಪೈಕಿ ಸುರೇಶ್‌ ಅವರು ಮೊದಲನೇ ಅವರಾಗಿ ಸೇಫ್‌ ಆಗಿದ್ದಾರೆ.  ತ್ರಿವಿಕ್ರಮ್‌ ಅವರು ಎರಡನೇ ಅವರಾಗಿ ಸೇಫ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next