Advertisement

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

01:17 PM Jan 09, 2025 | Team Udayavani |

ಬಿಗ್‌ ಬಾಸ್‌ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ವಾರದ ಮಧ್ಯದಲ್ಲೇ ಒಬ್ಬರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ.

Advertisement

ಸಲ್ಮಾನ್‌ ಖಾನ್ ನಡೆಸಿಕೊಡುವ ಬಿಗ್‌ ಬಾಸ್‌ -18 (Bigg Boss18) ಫಿನಾಲೆಗೆ ಡೇಟ್‌ ಫಿಕ್ಸ್‌ ಆಗಿದೆ. ದೊಡ್ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು ಹೇಗಾದರೂ ಮಾಡಿ ತಮ್ಮ ಕೊನೆಯ ಕೆಲ ದಿನಗಳಲ್ಲಿ ವೈಯಕ್ತಿಕ ಆಡಿ ಫಿನಾಲೆಗೆ ಬರುವ ತಯಾರಿಯಲ್ಲಿದ್ದಾರೆ.

ಆದರೆ ಬಿಗ್‌ ಬಾಸ್‌ ಅಷ್ಟು ಸುಲಭವಾಗಿ ಸ್ಪರ್ಧಿಗಳನ್ನು ಫಿನಾಲೆ ತಲುಪಲು ಬಿಡುವುದಿಲ್ಲ. ಕಾರ್ಯಕ್ರಮದಲ್ಲಿ ಟ್ವಿಸ್ಟ್‌ವೊಂದನ್ನು ನೀಡಿ, ಏಕಾಏಕಿ ಒಬ್ಬರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ಆ ಮೂಲಕ ವೀಕ್ಷಕರಿಗೆ ಶಾಕ್‌ ನೀಡಲಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಆರಂಭದಿಂದಲೂ ತಮ್ಮ ಆಟ ಹಾಗೂ ವ್ಯಕ್ತಿತ್ವದಿಂದ ಗಮನ ಸೆಳೆದಿರುವ ಪ್ರಬಲ ಸ್ಪರ್ಧಿ ಶ್ರುತಿಕಾ ಅರ್ಜುನ್ (Shrutika Arjun) ಶಾಕಿಂಗ್‌ ಎಲಿಮಿನೇಷನ್‌ನಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಅಚೆ ಬಂದಿದ್ದಾರೆ ಎಂದು ವರದಿಯಾಗಿದೆ.

ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಬಿಗ್‌ ಬಾಸ್‌ ಮನೆಯಲ್ಲಿ ವಾರದ ಮಧ್ಯದಲ್ಲೇ ಎಲಿಮಿನೇಷನ್‌ ನಡೆದಿದೆ. ಇದರಲ್ಲಿ ಶ್ರುತಿಕಾ ಅರ್ಜುನ್ ಅವರು ಎಲಿಮಿನೇಟ್‌ ಆಗಿದ್ದಾರೆ.

Advertisement

ಪ್ರಬಲ ಸ್ಪರ್ಧಿಯಾಗಿ, ಫಿನಾಲೆಗೆ ಬರುತ್ತಾರೆ ಎಂದು ಹೇಳಲಾಗುತ್ತಿದ್ದ ಶ್ರುತಿಕಾ ಅರ್ಜುನ್ ಅವರನ್ನೇ ಎಲಿಮಿನೇಟ್ ಮಾಡಿದ್ದು, ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಶಿಲ್ಪಾ ಶಿರೋಡ್ಕರ್ ಅವರನ್ನು ಉಳಿಸಲು ಶ್ರುತಿಕಾ ಅವರನ್ನು ಎಲಿಮಿನೇಟ್‌ ಮಾಡಿದ್ದಾರೆ ಎಂದು ವೀಕ್ಷಕರು ಅಸಮಾಧಾನವನ್ನು ಹೊರಹಾಕಿದ್ದಾರೆ.

ಮಿಡಲ್‌ ವೀಕ್‌ ಎಲಿಮಿನೇಟ್‌ ಬಳಿಕ ʼವೀಕೆಂಡ್‌ ಕಾ ವಾರ್‌ʼ ನಲ್ಲಿ ಮತ್ತೊಂದು ಎಲಿಮಿನೇಷನ್‌ ನಡೆಯಲಿದೆ. ಚಾಹತ್ ಪಾಂಡೆ ಅಥವಾ ರಜತ್ ದಲಾಲ್ ಅವರು ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಜನವರಿ 19, ರಂದು ಬಿಗ್‌ ಬಾಸ್‌ ಹಿಂದಿ -18 ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next