Advertisement
ರಸ್ತೆಯುದ್ದಕ್ಕೂ ಮಾಸ್ಕ್ ವಿತರಿಸುವ ಇವರು ಸ್ಯಾನಿಟೈಸರ್ ಬಳಕೆ ಮತ್ತುಸಾಮಾಜಿಕ ಅಂತರ ಕಾಪಾಡಿಕೊಳ್ಳುವಕುರಿತಂತೆ ಮೈಕ್ ಮೂಲಕ ಕೊರೊನಾಜಾಗೃತಿ ಅಭಿಯಾನ ಕೈಗೊಳ್ಳಲು ಸಿದ್ಧತೆನಡೆಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Related Articles
Advertisement
ಬೆಂಗಳೂರಿನಿಂದಲೂ ಬರುತ್ತಾರೆ ಭಕ್ತರು: ಪಟ್ಟಣದ ಉದ್ಯಮಿ ಮಂಜುನಾಥಬಂಡಿ ರಾಜಧಾನಿ ಬೆಂಗಳೂರಿಗೂಈ ಭಕ್ತಿಯ ನಂಟು ಹಚ್ಚಿಸಿದ್ದಾರೆ.ಬೆಂಗಳೂರಿನ ಅಮ್ಮಾ ಫೌಂಡೇಶನ್ ಮತ್ತುಪಟ್ಟಣದ ಶ್ರೀಶೈಲ ಭಕ್ತರು ಕಳೆದ 7 ವರ್ಷಗಳಿಂದ ಅಮೀನಗಡದಿಂದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಮಾಡುತ್ತಾರೆ. ಪಟ್ಟಣದಿಂದಲೂ ಸುಮಾರು 200 ಭಕ್ತರುಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ.ದಾರಿಯುದ್ದಕ್ಕೂ ದಾಸೋಹ: ಪಟ್ಟಣದಿಂದ ಹೋಗುವ ಪಾದಯಾತ್ರೆ ಶ್ರೀಶೈಲಮಲ್ಲಿಕಾರ್ಜುನ ದೇವಸ್ಥಾನ ತಲುಪುವರೆಗೂದಾರಿಯುದ್ದಕ್ಕೂ ದಾಸೋಹ ನಡದೇಇರುತ್ತದೆ. ವಿವಿಧ ರೀತಿಯ ಸೇವೆ ಮಾಡುವಮುಖ್ಯಸ್ಥರಿಗೆ ಅಮ್ಮಾ ಫೌಂಡೇಶನ್ ಮತ್ತುಅಮೀನಗಡ ಶ್ರೀಶೈಲ ಭಕ್ತರ ಪರವಾಗಿಸನ್ಮಾನಿಸಿ ದಾಸೋಹ ಕುರಿತು ಜಾಗೃತಿ ಮಾಡಲಾಗುತ್ತಿದೆ.
ಮಾ.29ರಂದು 108 ಅಡಿ ಉದ್ದದ ಧ್ವಜ- ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣ :
ಶ್ರೀಶೈಲ ಪಾದಯಾತ್ರೆಯಲ್ಲಿ ಧಾರ್ಮಿಕ ಹಾಗೂ ಕೊರೊನಾ ಜಾಗೃತಿ ಮೂಡಿಸಲು 108ಅಡಿ ಉದ್ದದ ಮಲ್ಲಯ್ಯನ ಧ್ವಜ ಹಾಗೂ ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣಕಾರ್ಯಕ್ರಮ ಮಾ.29ರಂದು ಸಂಜೆ 4ಕ್ಕೆ ನಡೆಯಲಿದೆ. ಸಂಸದ ಪಿ.ಸಿ.ಗದ್ದಿಗೌಡರಅನಾವರಣಗೊಳಿಸಲಿದ್ದು, ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಶ್ರೀಶೈಲಜಗದ್ಗುರು ಪೀಠದ ಶಾಖಾಮಠ ಸಂಡೂರ ತಾಲೂಕಿನ ಅಂತಾಪುರದ ಕುಮಾರಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಂಗಳೂರಿನ ನಾಗಾರ್ಜುನವಿವಿಯ ನಿರ್ದೇಶಕ ಮನೋಹರ ಸರೋಜಿ, ರಾಷ್ಟ್ರೀಯ ಆಟಗಾರ ರೋಹಿತಕೆಂಪೇಗೌಡ, ರಾಷ್ಟ್ರೀಯ ಆಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲ ವ್ಯಕ್ತಿ ರಮೇಶಉಮ್ರಾಣಿ, ಜ್ಞಾನಜ್ಯೋತಿ ಕಾಲೇಜ್ ಪ್ರಾಚಾರ್ಯ ರಮೇಶ ಸೇರಿದಂತೆ ಪಟ್ಟಣದಗಣ್ಯರಿಂದ 150 ಕೆಜಿ ಹೂಗಳ ಪುಷ್ಪಾರ್ಚನೆ ಮೂಲಕ ಪಥ ಸಂಚಲನ ನಡೆಯಲಿದೆ ಎಂದು ಉದ್ಯಮಿ ಮಂಜುನಾಥ ಬಂಡಿ ತಿಳಿಸಿದ್ದಾರೆ.
-ಎಚ್.ಎಚ್.ಬೇಪಾರಿ