Advertisement
ಇಲ್ಲಿಯವರೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ 8 ಕಂತುಗಳನ್ನು ರೈತರ ಖಾತೆಗೆ ಹಾಕಲಾಗಿದೆ. ಆದರೆ, ಈ ಯೋಜನೆಯ ನಿಧಿಯು 42 ಲಕ್ಷಕ್ಕೂ ಹೆಚ್ಚು ಅನರ್ಹ ರೈತರ ಖಾತೆ ಸೇರಿರುವ ಅಂಶ ಬೆಳೆಕಿಗೆ ಬಂದಿದೆ. ಈ ಕಾರಣದಿಂದಾಗಿ ಸರ್ಕಾರಕ್ಕೆ 3 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ.
Related Articles
Advertisement
ಅಸ್ಸಾಂನಲ್ಲಿ ಈ ರೀತಿಯ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲಿ 554 ಕೋಟಿ ರೂ.ಗಳಿಗಿಂತ ಹಣ 8 ಲಕ್ಷ 35 ಸಾವಿರಕ್ಕೂ ಹೆಚ್ಚು ಅನರ್ಹ ರೈತರ ಖಾತೆ ಸೇರಿವೆ. ಪಂಜಾಬ್ ನಲ್ಲಿ ಸುಮಾರು 437 ಕೋಟಿ ರೂ.ಗಳನ್ನು ಅನರ್ಹ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇನ್ನು, ಮಹಾರಾಷ್ಟ್ರದ ಅನರ್ಹ ರೈತರ ಖಾತೆಗಳಿಗೆ 357 ಕೋಟಿ ರೂ. ಸಂದಾಯವಾಗಿದೆ ಎಂದು ತಿಳಿದು ಬಂದಿದೆ.
42 ಲಕ್ಷಕ್ಕೂ ಹೆಚ್ಚು ಜನರು ಕಿಸಾನ್ ಸಮ್ಮನ್ ನಿಧಿಗೆ ಅನರ್ಹರಾಗಿದ್ದು, ಈ ಪೈಕಿ ಕೆಲವು ರೈತರಂತೂ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಎಂದು ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ರೈತರ ವಿಳಾಸ ರೈತರ ಆಧಾರ್, ಪಿಎಂಎಸ್, ಆದಾಯ ತೆರಿಗೆ ಡೇಟಾ ಬೇಸ್ ಪರಿಶೀಲನೆಯ ಸಂದರ್ಭದಲ್ಲಿ ಈ ವಂಚನೆ ಸಚಿವಾಲಯದ ಗಮನಕ್ಕೆ ಬಂದಿದೆ. ಬರುವವರು ಎನ್ನಲಾಗಿದೆ.
ಇದನ್ನೂ ಓದಿ : ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಶ್ರೀರಾಮುಲುಗೆ ಹೈಕಮಾಂಡ್ ಬುಲಾವ್: ಏನಿದು ಹೊಸ ಟ್ವಿಸ್ಟ್?