Advertisement

ಬಿಟ್‌ಕಾಯಿನ್‌ನಲ್ಲೂ ಬಿಗ್‌ ಬಿ, ಪುತ್ರನ ಹೂಡಿಕೆ

07:30 AM Dec 21, 2017 | Harsha Rao |

ಮುಂಬೈ: ಪರ್ಯಾಯ ಕರೆನ್ಸಿ ಎಂದೇ ಜನಜನಿತವಾಗಿರುವ ಬಿಟ್‌ ಕಾಯಿನ್‌ ಉದ್ದಿಮೆಯನ್ನು ಬಾಲಿವುಡ್‌ ತಾರೆಯರಾದ ಅಮಿತಾಬ್‌ ಬಚ್ಚನ್‌ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಹೂಡಿಕೆ ಮಾಡಿದ್ದಾರೆ. 2015ರಲ್ಲಿ ಆರ್‌ಬಿಐ ಜಾರಿ ಮಾಡಿದ್ದ ಲಿಬರಲೈಸ್ಡ್ ರೆಮಿಟೆನ್ಸ್‌ ಸ್ಕೀಂ ಅಡಿಯಲ್ಲಿ ಮೆರಿಡಿಯನ್‌ ಟೆಕ್‌ ಪಿಟಿಇ ಎಂಬ ಸಿಂಗಾಪುರ ಮೂಲದ ಸಂಸ್ಥೆಯಲ್ಲಿ 1.3 ಕೋಟಿ ರೂ. (2.50 ಲಕ್ಷ ಡಾಲರ್‌) ಹೂಡಿಕೆ ಮಾಡಿದ್ದರು. ಇದೀಗ ಇತರ ಮೌಲ್ಯ 113 ಕೋಟಿ ರೂ. (1.75 ಕೋಟಿ ಡಾಲರ್‌) ಆಗಿದೆ. 

Advertisement

ಭಾರತೀಯ ಮೂಲದ ವೆಂಕಟ ಶ್ರೀನಿವಾಸ ಮೀನವಲ್ಲಿ ಮೆರಿಡಿಯನ್‌ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಇತ್ತೀಚೆಗಷ್ಟೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಿತ್ತು. ಕೆಲವೇ ದಿನಗಳಲ್ಲಿ ಷೇರು ಮೌಲ್ಯ 2500 ಪಟ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಗ್‌ ಬಿ ಮತ್ತು ಅವರ ಪುತ್ರ ಮಾಡಿದ ಹೂಡಿಕೆಯ ಮೌಲ್ಯ ಭಾರಿ ಏರಿಕೆ ಕಂಡಿದೆ. ಬಚ್ಚನ್‌ದ್ವಯರಿಗೆ ಕಂಪನಿಯ 2,50,00 ಷೇರುಗಳನ್ನು ನೀಡಲಾಗಿತ್ತು ಎಂದು ಮೀನವಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next