Advertisement

ತಟಸ್ಥ ನಿಲುವಿಗೆ ಸಮರ್ಥನೆ;  ಬೈಡೆನ್‌ ಜತೆಗಿನ ವರ್ಚುವಲ್‌ ಸಭೆಯಲ್ಲಿ ಪ್ರಧಾನಿ ಸ್ಪಷ್ಟನೆ

02:26 AM Apr 12, 2022 | Team Udayavani |

ಹೊಸದಿಲ್ಲಿ/ವಾಷಿಂಗ್ಟನ್‌: ಉಕ್ರೇನ್‌ ಮೇಲೆ ದಂಡೆತ್ತಿರುವ ರಷ್ಯಾ ವಿರುದ್ಧ ವಿಶ್ವಸಂಸ್ಥೆ ಸಹಿತ ಹಲವು ವೇದಿಕೆ ಗಳಲ್ಲಿ ಭಾರತ ತಳೆದಿರುವ ತಟಸ್ಥ ನಿಲುವನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜತೆಗೆ ನಡೆಸಿದ ವರ್ಚುವಲ್‌ ಸಭೆಯಲ್ಲಿ ಸದ್ಯ ನಡೆಯುತ್ತಿರುವ ಸಂಘರ್ಷ ಶೀಘ್ರ ಮುಕ್ತಾಯವಾಗಿ, ಶಾಂತಿ ನೆಲೆಸಲಿದೆ ಎಂಬ ವಿಶ್ವಾಸ ವನ್ನು ಅವರು ವ್ಯಕ್ತಪಡಿಸಿದ್ದಾರೆ.

Advertisement

ಉಕ್ರೇನ್‌ನ ಬುಚಾದಲ್ಲಿ ರಷ್ಯಾ ಸೇನೆ ಮುಗ್ಧ ನಾಗರಿಕರ ಹತ್ಯೆ ನಡೆಸಿದ್ದನ್ನು ಭಾರತ ಸರಕಾರ ಖಂಡಿಸಿತ್ತು ಎಂದಿದ್ದಾರೆ.

ಅಮೆರಿಕ, ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳು ರಷ್ಯಾ ವಿರುದ್ಧ ದಿಗ್ಬಂಧನಗಳನ್ನು ಹೇರಿದ್ದರೂ ಭಾರತ ಸರಕಾರ ಪುಟಿನ್‌ ಆಡಳಿತದ ಜತೆಗೆ ಕಚ್ಚಾ ತೈಲ ಖರೀದಿ ಸಹಿತ ಹಲವು ರೀತಿಯ ವಾಣಿಜ್ಯಿಕ ಚಟುವಟಿಕೆಗಳನ್ನು ಮುಂದುವರಿಸಿದ್ದಕ್ಕೆ ಭಾರೀ ಟೀಕೆ ವ್ಯಕ್ತ ವಾಗಿತ್ತು. ಭಾರತದ ಇಂಧನ ಅಗತ್ಯ ಸೇರಿ ದಂತೆ ದೇಶದ ಅನಿವಾರ್ಯದ ಬಗ್ಗೆ ಪ್ರಧಾನಿ ಮೋದಿಯವರು ಬೈಡೆನ್‌ಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತಕ್ಕೆ ಮೆಚ್ಚುಗೆ
ಉಕ್ರೇನ್‌ ಜನತೆಗೆ ಭಾರತದ ಮಾನವೀಯ ಸಹಾಯಗಳನ್ನು ಬೈಡನ್‌ ಶ್ಲಾಘಿಸಿದ್ದಾರೆ. ಯುದ್ಧ ದಿಂದ ನಾನಾ ರಾಷ್ಟ್ರಗಳಲ್ಲಿ ಸೃಷ್ಟಿ ಯಾಗಿರುವ ಅಸ್ಥಿರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಪರಸ್ಪರ ಕೈಜೋಡಿಸಿ ಹೆಜ್ಜೆಯಿಡಲಿವೆ ಎಂದಿದ್ದಾರೆ. ಉಭಯ ದೇಶಗಳ ನಡುವಿನ ವಾಣಿಜ್ಯ, ರಾಜಕೀಯ ಸಂಬಂಧಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಬದ್ಧವಾಗಿರಲಿವೆ ಎಂದಿದ್ದಾರೆ.

“2+2′ ಮಾತುಕತೆಗೆ ಚಾಲನೆ
ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆಗಾಗಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಮತ್ತು ವಿದೇಶಾಂಗ ಸಚಿವ ಜೈಶಂಕರ್‌ ಈಗಾಗಲೇ ವಾಷಿಂಗ್ಟನ್‌ ಡಿ.ಸಿ.ಗೆ ತಲುಪಿ ದ್ದಾರೆ. ರಾಜನಾಥ್‌ ಸಿಂಗ್‌ ಅವರು ಅಮೆರಿಕದ ಏರೋಸ್ಪೇಸ್‌ ಮತ್ತು ರಕ್ಷಣ ವಲಯದ ಪ್ರತಿಷ್ಠಿತ ಬೋಯಿಂಗ್‌ ಹಾಗೂ ರೇಥಾನ್‌ ಕಂಪೆನಿ  ಗಳ ಅಧಿಕಾರಿಗಳನ್ನು ಭೇಟಿ ಯಾಗಿ ಮಾತುಕತೆ ನಡೆಸಿದರು. ಮಂಗಳವಾರವೂ 2+2 ಸಭೆಗಳು ಮುಂದುವರಿಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next