ಬೀದರ: ಗಡಿ ನಾಡು ಬೀದರನಲ್ಲಿ ಸೋಮವಾರವಷ್ಟೇ ಕೊಂಚ ತಗ್ಗಿದ್ದ ಕೋವಿಡ್ ವೈರಸ್ ಮಂಗಳವಾರ ಮತ್ತೆ ಆರ್ಭಟಿಸಿದ್ದು, ಮೂರು ವರ್ಷದ ಮಗು ಸೇರಿ 22 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 524ಕ್ಕೆ ಏರಿಕೆ ಆಗಿದೆ. ಇನ್ನೊಂದೆಡೆ 42 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಒಂದು ವಾರ ಕಾಲ ಕೋವಿಡ್ ನಿಂದ ಸರಣಿ ಸಾವಿನಿಂದ ಕಂಗೆಟ್ಟಿದ್ದ ಬೀದರ ಜನತೆ ಸೋಮವಾರ ಸ್ವಲ್ಪ ಮಟ್ಟಿಗೆ ನಿಟ್ಟಿಸಿರುವ ಬಿಟ್ಟಿದ್ದರು. ಆದರೆ, ಮಂಗಳವಾರ 22 ಸೋಂಕಿತರು ಪತ್ತೆಯಾಗಿದ್ದು, ಬಹುತೇಕರು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಸೇರಿದವರಾಗಿದ್ದಾರೆ. 6 ಸೋಂಕಿತರು ಪಿ-7090 ರೋಗಿಯ ಸಂಪರ್ಕದಿಂದ, 11 ಕೇಸ್ ಮಹಾರಾಷ್ಟ್ರ ಮತ್ತು 2 ಕೇಸ್ ಗಳು ತೆಲಂಗಾಣಾ ಸಂಪರ್ಕದಿಂದ ವೈರಸ್ ವಕ್ಕರಿಸಿದೆ.
ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಮಲನಗರ ತಾಲೂಕಿನ ಹಾರೋಹಳ್ಳಿ ಗ್ರಾಮದ 4, ಕೊಟಗ್ಯಾಳ್, ಹಕ್ಯಾಳ್, ಹೊಳಸಮುದ್ರ, ಮುರ್ಕಿ ಮತ್ತು ಹಾಲಹಳ್ಳಿ ಗ್ರಾಮದ ತಲಾ 2, ಹೊಕ್ರಾಣಾ, ಬಳತ (ಕೆ) ಮತ್ತು ಕಮಲನಗರ ಪಟ್ಟಣದಲ್ಲಿ ತಲಾ 1 ಕೇಸ್‌ಗಳು ಪತ್ತೆಯಾಗಿದ್ದರೆ, ಬೀದರ ನಗರದಲ್ಲಿ 3 ಹಾಗೂ ಔರಾದ ಪಟ್ಟಣದಲ್ಲಿ 2 ಪ್ರಕರಣಗಳು ವರದಿಯಾಗಿವೆ.
22 ವರ್ಷದ ಪುರುಷ (ಪಿ-9611), 48 ವರ್ಷದ ಮಹಿಳೆ (ಪಿ-9612), 39 ವರ್ಷದ ಮಹಿಳೆ (ಪಿ-9613), 17 ವರ್ಷದ ಯುವಕ (ಪಿ-9614), 56 ವರ್ಷದ ಮಹಿಳೆ (ಪಿ-9615), 51 ವರ್ಷದ ಮಹಿಳೆ (ಪಿ-9616), 54 ವರ್ಷದ ಪುರುಷ (ಪಿ-9617), 40 ವರ್ಷದ ಪುರುಷ (ಪಿ-9618), 34 ವರ್ಷದ ಮಹಿಳೆ (ಪಿ-9619), 35 ವರ್ಷದ ಮಹಿಳೆ (ಪಿ-9620), 10 ವರ್ಷದ ಬಾಲಕಿ (ಪಿ-9621), 40 ವರ್ಷದ ಮಹಿಳೆ (ಪಿ-9622), 65 ವರ್ಷದ ವೃದ್ಧೆ (ಪಿ-9623), 3 ವರ್ಷದ ಹೆಣ್ಣುಮಗು (ಪಿ-9624), 49 ವರ್ಷದ ಪುರುಷ (ಪಿ-9625), 19 ವರ್ಷದ ಯುವಕ (ಪಿ-9626), 20 ವರ್ಷದ ಮಹಿಳೆ (ಪಿ-9627), 49 ವರ್ಷದ ಪುರುಷ (ಪಿ-9628), 23 ವರ್ಷದ ಪುರುಷ (ಪಿ-9629), 19 ವರ್ಷದ ಯುವತಿ (ಪಿ-9630), 30 ವರ್ಷದ ಮಹಿಳೆ (ಪಿ-9631) ಮತ್ತು 23 ವರ್ಷದ ಮಹಿಳೆ (ಪಿ-9632) ರೋಗಿಗಳಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಈವರೆಗೆ 524 ಪಾಸಿಟಿವ್ ಪ್ರಕರಣಗಳು ವರದಿಯಾದಂತಾಗಿದೆ. ಅದರಲ್ಲಿ 15 ಜನ ಸಾವನ್ನಪ್ಪಿದ್ದರೆ 366 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಇನ್ನೂ 143 ಸಕ್ರೀಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.