ರಾಯ್ ಪುರ್(ಚತ್ತೀಸ್ ಗಢ): ತನ್ನ ಐದು ವರ್ಷಗಳ ಆಡಳಿತಾವಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 15 ವರ್ಷಗಳ ಆಡಳಿತಾವಧಿಯಲ್ಲಿನ ಅಭಿವೃದ್ಧಿ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲನ್ನು ಸ್ವೀಕರಿಸಿದ್ದು, ಚರ್ಚೆಗೆ ವೇದಿಕೆ ಸಿದ್ಧವಾಗಿದೆ ಎಂದು ಚತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಟ್ವೀಟರ್ ನಲ್ಲಿ ಪ್ರತಿಸವಾಲೊಡ್ಡಿದ್ದಾರೆ.
ಇದನ್ನೂ ಓದಿ:BOLLYWOOD: ತಪ್ಪಿದ ಬಾಕ್ಸ್ ಆಫೀಸ್ ದಂಗಲ್; ರಿಲೀಸ್ ಡೇಟ್ ಮುಂದೂಡಿದ ʼಯೋಧʼ
“ಕಪ್ಪು ಸೋಫಾ ಹಾಗೂ ಅದರಲ್ಲಿ ಇಬ್ಬರ ಹೆಸರನ್ನು ನಮೂದಿಸಿರುವ ಫೋಟೋವನ್ನು ಎಕ್ಸ್ ನಲ್ಲಿ ಬಾಘೇಲ್ ಶೇರ್ ಮಾಡಿದ್ದು, ನೀವು(ಅಮಿತ್ ಶಾ) ಚರ್ಚೆಯ ದಿನಾಂಕ, ವೇದಿಕೆ ಮತ್ತು ಸಮಯವನ್ನು ಇನ್ನೂ ನಮೂದಿಸಿಲ್ಲ. ಆದರೆ ಸಾರ್ವಜನಿಕರು ಈಗಾಗಲೇ ಚರ್ಚೆಯ ವೇದಿಕೆಯನ್ನು ಸಿದ್ಧಪಡಿಸಿದ್ದು, ದಿನಾಂಕ ಮತ್ತು ಸಮಯ ದಯವಿಟ್ಟು ತಿಳಿಸಿ ಎಂದು ಟ್ವೀಟ್ ಮೂಲಕ” ಶಾಗೆ ತಿರುಗೇಟು ನೀಡಿದ್ದಾರೆ.
15 ವರ್ಷಗಳ ಆಡಳಿತಾವಧಿಯ ನಿಮ್ಮ ಹಗರಣಗಳು ಮತ್ತು ನಮ್ಮ 5 ವರ್ಷಗಳ ಅಭಿವೃದ್ಧಿಯ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯಬೇಕಾಗಿದೆ. ಈ ಸವಾಲಿಗೆ ಚತ್ತೀಸ್ ಗಢ ಭಯಪಡುವುದಿಲ್ಲ…ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಬಾಘೇಲ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.
ಇತ್ತೀಚೆಗೆ ಪಂಡಾರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಮಿತ್ ಶಾ ಅವರು, ಬಾಘೇಲ್ ಗೆ ಸವಾಲೊಡ್ಡಿದ್ದರು. ಚತ್ತೀಸ್ ಗಢ್ ಸಿಎಂ 5 ವರ್ಷಗಳ ಆಡಳಿತಾವಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 15 ವರ್ಷಗಳ ಕಾಲಾವಧಿಯ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಎಂದು ಶಾ ಸವಾಲೊಡ್ಡಿದ್ದರು.