ಮಹಾಲಿಂಗಪುರ: ನ.21ರಂದು ಬೆಳಗ್ಗೆ 10ಕ್ಕೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕಿತ್ತೂರ ಕರ್ನಾಟಕದಲ್ಲಿ ಭೋವಿ ವಡ್ಡರ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಭೋವಿ-ವಡ್ಡರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಭೋವಿ-ವಡ್ಡರ ಸಮಾಜದ ಮುಖಂಡ ಅನಿಲ ಮಮದಾಪುರ ಹೇಳಿದರು.
ಪಟ್ಟಣದ ಹೆಸ್ಕಾಂ ಗಣಪತಿ ದೇವಸ್ಥಾನದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ನೂತನ ವಧು-ವರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಸಮಾವೇಶ ಏರ್ಪಡಿಸಲಾಗಿದೆ.
ಸಮಾವೇಶದಲ್ಲಿ ಭಾಗವಹಿಸಲು ಬರುವ ವಧು 18 ವರ್ಷ, ವರ 21 ವರ್ಷ ಪೂರೈಸಿರಬೇಕು. ವಯಸ್ಸಿನ ಅಗತ್ಯ ದಾಖಲಾತಿಗಳು, ಪರಿಚಯ ಪತ್ರ, ಭಾವಚಿತ್ರಗಳೊಂದಿಗೆ ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಸಮಾಜದ ಬಾಂಧವರು ಈ ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ-ವಡ್ಡರ ಸಮಾಜದ ಹಿರಿಯರಾದ ತುಳಜಪ್ಪ ಪಾತ್ರೋಟ, ಪರಶುರಾಮ ಪಾತ್ರೋಟ, ಮಹಾಲಿಂಗ ಶಿವಣಗಿ, ಲಕ್ಷ್ಮಣ ಪಾತ್ರೋಟ, ನಾಗೇಶ ರಾಮದುರ್ಗ, ಸಂಜು ಪಾತ್ರೋಟ ಇದ್ದರು.