ಪಾಟ್ನಾ : ಭೋಜಪುರಿ ನಟಿ ತ್ರಿಷಾ ಕರ್ ಮಧು ಅವರ ಖಾಸಗಿ ವಿಡಿಯೋವೊಂದು ಸೋರಿಕೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ.
ಮಧು ಅವರು ತಮ್ಮ ಭಾಯ್ ಫ್ರೆಂಡ್ ಜೊತೆ ಬೆಡ್ ರೂಮಿನಲ್ಲಿದ್ದ ಖಾಸಗಿ ವಿಡಿಯೋ ತುಣುಕು ಇದೀಗ ಲೀಕ್ ಆಗಿದೆ. ವಿಡಿಯೋ ಲೀಕ್ ಆಗುತ್ತಿದ್ದಂತೆ ಟ್ವೀಟ್ ಮಾಡಿರುವ ನಟಿಮಣಿ, ಈ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಗುಡುಗಿದ್ದಾರೆ. ಜೊತೆಗೆ ವಿಡಿಯೋ ಡಿಲೀಟ್ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಅಕ್ರೋಶ ಭರಿತ ಪೋಸ್ಟ್ ಹಾಕಿರುವ ಮಧು, ಎಲ್ಲವನ್ನು ದೇವರು ನೋಡುತ್ತಿರುತ್ತಾನೆ. ನನ್ನ ಹೆಸರು ಹಾಳು ಮಾಡುವ ದುರುದ್ದೇಶದಿಂದ ಕೆಲವರು ಈ ವಿಡಿಯೋ ವೈರಲ್ ಮಾಡಿದ್ದಾರೆ. ಇಂತಹ ಕೀಳುಮಟ್ಟದ ಜನರು ಬಿಹಾರನಲ್ಲಿದ್ದಾರೆ ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ ಈ ನಟಿಯ ವಿರುದ್ಧ ಟೀಕೆ,ಟ್ರೋಲ್ ಗಳು ವ್ಯಕ್ತವಾದವು. ಫೇಮಸ್ ಆಗುವ ಉದ್ದೇಶದಿಂದ ಇಂತಹ ಇಂಟಿಮೇಟ್ ವಿಡಿಯೋ ಆಕೆಯ ಹರಿಬಿಟ್ಟಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ಇನ್ನು 27 ವಯಸ್ಸಿನ ತ್ರಿಷಾ, ಮೂಲತಃ ಪಶ್ಚಿಮ ಬಂಗಾಳದವರು. ಭೋಜಪುರಿಯ ‘ಹಮ್ ಹೈ ಹಿಂದೂಸ್ಥಾನಿ’ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಹಲವು ಐಟಂ ಸಾಂಗ್ ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.