ನಿರ್ಲಿಪ್ತತೆಯ ವಯಸ್ಸಲ್ಲ ಭೀಮನದ್ದು, ಮನಸ್ಸೂ ಅಲ್ಲ.
“”ನೀರು ಬೇಕೋ?”
“”ಬೇಡ”
“”ಅರೆ ನಿನಗೇನಾಯಿತು ಮಾರಾಯ? ನೀನು ಏನೂ ಬೇಡ ಎಂದು ಕುಳಿತದ್ದು ನಾನು ಕಂಡಿದ್ದಿಲ್ಲ”
ಭೀಮನೆಂದರೆ ಪಕ್ಕಾ ಲೆಕ್ಕ. ಗಣಿತ ಸೂತ್ರದ ಹಾಗೆ. ಮೂರಕ್ಕೆ ಮೂರು ಕೂಡಿದರೆ ಆರೇ. ಐದು ಮತ್ತೂಂದು ಅಲ್ಲ. ಇ¨ªಾನೆ ಎಂದರೆ ಜೀವ ಕೊಟ್ಟಾದರೂ ಪೂರ್ಣವಾಗಿ ಇ¨ªಾನೆ. ಇಲ್ಲದ ಕಡೆ ಕಣ್ಣೆತ್ತಿ ನೋಡುವವನೂ ಅಲ್ಲ. ರಾಯರ ಧರ್ಮ, ಅರ್ಜುನನ ಸಮತೋಲಿತ ಭಾವನೆ ಇವನದಲ್ಲ. ತನ್ನ ಬಾಹುಬಲದ ಮೇಲೆ ಎಷ್ಟು ನಂಬಿಕೆಯೆಂದರೆ ಒಣ ರೆಂಬೆಯ ಮೇಲೆ ಕುಳಿತ ಗಿಡುಗನ ಹಾಗೆ.
Advertisement
ಹಾರುವ ಗಿಳಿಗೆ ಪಂಜರವನ್ನೋ, ಹರಿಯುವ ಹೊಳೆಗೆ ಅಣೆಕಟ್ಟನ್ನೋ ಕಟ್ಟಬಾರದು. ಅದಕ್ಕೆ ಆತ ರಾಯರು ತನಗೆ ಸರಿಯಾದ ಅಣ್ಣನಾಗಲಿಲ್ಲ ಅಂದ¨ªೋ?!
ಮಾತು ಅವನದು ಒರಟೇ, ಐದು ಮಾತನಾಡಿದರೆ ಎರಡು ಮಾತನಾಡಿಯಾನು, ಆದರೆ, ಕೆಲಸದಲ್ಲಿ ನಾವು ಬೆರಳು ಕೂಡಿಸಿದಲ್ಲಿ ಅವನು ಕೈಗೂಡಿಸಿ ದುಡಿಯಬಲ್ಲವ.
Related Articles
“”ನೀನೋ ಭೀಮಸೇನ ಕಣೋ”
“”ಕಾಲ ಬದಲಾಗುತ್ತದೆ ಕೃಷ್ಣೆ , ಮನಸ್ಸೂ ಕÇÉಾಗುವುದು ಅಥವಾ ಕÇÉೇ ಮನಸ್ಸಾಗುವುದು…”
“ಕೃಷ್ಣೆ’ ಎಂದು ಕರೆಯಬಲ್ಲ ತಾಕತ್ತಿರುವುದು ಭೀಮನಿಗೆ ಮಾತ್ರ. ನಿನ್ನ ಬಣ್ಣ ಕಪ್ಪು ಎಂದರೆ ಯಾವ ಹೆಣ್ಣು ಸಹಿಸಿಕೊಳ್ಳುತ್ತಾಳೆ? ಶುದ್ಧ ಒರಟ. ಹಾಗಂತ ಅವನು ಕೃಷ್ಣೆ ಎಂದು ಕರೆಯದಿದ್ದರೆ ಏನೋ ಕಳೆದುಕೊಂಡ ಹಾಗಾಗುತ್ತದೆ.
Advertisement
“”ಸಾಕು ಮಾಡೋ… ನೀನು ರಾಯನಾಗಬೇಡ, ಭೀಮನೆಂದರೆ ಇಷ್ಟ ಕಣೋ ನನಗೆ”ಮತ್ತೆ ಭೀಮನ ಕೈ ಹಿಡಿದು “”ನನಗೆ ಆ ಹೂವು ಬೇಕು ಅಷ್ಟೇ” ಹೇಳಿದಳು. ಭೀಮ ಕೊಸರಿಕೊಂಡ ಚಿಕ್ಕ ಮಕ್ಕಳ ಹಾಗೆ.
“”ನಾನೊಬ್ಬನೆ ಗಂಡ ಅಲ್ಲವಲ್ಲ ನಿನಗೆ”
“”ದೂÂತದ ಸಭೆಯಲ್ಲಿ ಎದ್ದು ನಿಂತು ಕೊಂದೇ ಬಿಡುತ್ತೇನೆ ನಿಮ್ಮನ್ನೆಲ್ಲ ಎಂದದ್ದು ನೀವು ಮಾತ್ರ”
“”ಅದೇ ತಪ್ಪಾಯ್ತು ಅಂತ ಅನಿಸ್ತದೆ”
“”ಮಾತನ್ನು ನೀವೂ ಮರೆಸುತ್ತೀರಿ ಅಲ್ವಾ?”
“”ಸ್ವಲ್ಪ ತಡಿ, ಅರ್ಜುನ ಬಂದು ಬಾಣದಿಂದಲಾದರೂ ಕೊಯ್ದು ಕೊಡುತ್ತಾನೆ”
“”ಭೀಮ ನಿನ್ನ ಬಾಹುಬಲ ದೊಡ್ಡದು ಮತ್ತು ಅದರ ಮೇಲೆ ನನಗೆ ನಂಬಿಕೆ”
ನನ್ನ ಮಾತು ಕಾವ್ಯ ನಾಟಕದ ಹಾಗೆ… ಭೀಮನಿಗದು ಅರ್ಥವಾಗುವುದಿಲ್ಲ ಎಂದು ತಿಳಿದಿದ್ದರೂ ನಾನು ಮಾತನಾಡುವುದು ಹಾಗೆಯೇ… ಅರ್ಥ ಕಟ್ಟುವ ಕಲೆ ಅಥವಾ ಕಾವ್ಯವಾಗುವ ಕಲೆ ಅರ್ಜುನನಿಗಿದೆ. ಒಳ್ಳೆಯ ನಾಟಕಕಾರ ಆತ ! ಭೀಮ ಸೊರಗಿದರೆ ಪಾಂಡವರಿಗೆ ಬದುಕಿಲ್ಲ. ರಾಯರ ಸಂಕಲ್ಪ , ಅರ್ಜುನರ ಸಾಧನೆ ನಿನ್ನ ಬಲದಲ್ಲಿ ಸಾಕಾರಗೊಳ್ಳುವುದು. ಬಿಡು, ರಾಯರ ಸಂಕಲ್ಪಕ್ಕೆ ಧಿಕ್ಕಾರ ಇರಲಿ, ನನಗೆ ನೀನು ಬೇಕು, ಭೀಮನಾಗಿಯೇ ಬೇಕು. ನಿನ್ನ ಹೃದಯ ಕಮಲದ ಪರಿಮಳ ಕುಂದಬಾರದು. ಅದು ಕುಂದಿದಾಗ ಬೇರೆ ಹೂವಿನ ಪರಿಮಳ ಬರುತ್ತದೆ! ಮನಸ್ಸು ಬಿಚ್ಚಿ ಅಳುವುದಕ್ಕೂ, ಕಾಲು ಕೆರೆದು ಜಗಳವಾಡುವುದಕ್ಕೂ ಭೀಮನಿದ್ದರೆ ಚಂದ… ಮತ್ತೆ ಬಾಹುಗಳನ್ನು ಅÇÉಾಡಿಸಿ, “”ಹೂವು ಬೇಕೆನಗೆ, ಮತ್ತೇನೂ ಬೇಡ… ತಂದು ಕೊಡುತ್ತಿ ತಾನೆ?” ಎಂದೆ.
“”ಯಾವ ತಲೆಗೆ ಮುಡಿಯುವುದಕ್ಕೆ? ಬಿಚ್ಚಿದ್ದಕ್ಕೋ? ನಾನೇ ಸಾವಿರ ಚಿಂತೆಯಲ್ಲಿದ್ದೇನೆ, ನೀನೊಂದು ಮಧ್ಯದಲ್ಲಿ”
“”ನನಗೆ ತಿಳಿದಿರದ ಚಿಂತೆ ನಿನಗೇನದು? ಭೀಮ ನಿಜ ಹೇಳು, ನೀನು ಎಂದಾದರೂ ಬಣ್ಣದ ಬಟ್ಟೆ ತೊಟ್ಟು ಕನ್ನಡಿ ಮುಂದೆ ನಿಂತದ್ದುಂಟೋ?”
.
ಸಮಯ 1.40. ಹೋ ಗಾಡ್… ಎಂದಿನ ಉದ್ಗಾರ ಮಂಜುವಿನದು. ಯೂಟ್ಯೂಬ್‌ನಲ್ಲಿ “ಸಮರ ಸೌಗಂಧಿಕಾ’ ತಾಳಮದ್ದಲೆಯಲ್ಲಿ ಭೀಮ-ದ್ರೌಪದಿ ಪಾತ್ರಗಳ ಅರ್ಥಸಂವಾದವನ್ನು ಕೇಳಿ ರಾತ್ರಿ ಹನ್ನೆರಡಕ್ಕೆ ರೂಮು ಬಿಟ್ಟವನು ಎಚ್ಚರಗೊಂಡದ್ದು ಈಗಲೇ. ಭೀಮ ಹಾಗೂ ದ್ರೌಪದಿ ಅವನ ಮನದಲ್ಲಿ ವಿಸ್ತಾರಗೊಳ್ಳುತ್ತ, ಮಾತಾಗುತ್ತ ಸಾಗಿದ ದಾರಿ ಈಗ ಅವನಿಗೆ ತಿಳಿದೇ ಇಲ್ಲ. ಕನಸಿನಲ್ಲಿ ಮುಳುಗಿದವನಿಗೆ ಕನಸು ಕಳೆದು ಎಚ್ಚರವಾದ ಹಾಗಿನ ಸಿœತಿಯದು. ಶಾರ್ಜಾದ ಉದ್ದಗಲಕ್ಕೆ ಹರಡಿಕೊಂಡಿರುವ ಮರಳುಗಾಡದು. ಹೆಜ್ಜೆಯಿಟ್ಟಲ್ಲೆಲ್ಲ ಗುರುತು ಮೂಡುತ್ತದಾದರೂ ಬಹಳ ಹೊತ್ತು ನಿಲ್ಲುತ್ತದೆಂಬ ಖಾತ್ರಿಯಿಲ್ಲ. ಬೆಳದಿಂಗಳ ರಾತ್ರಿಯಲ್ಲಿ ಹೆಜ್ಜೆ ಗುರುತುಗಳನ್ನು ಹುಡುಕುವುದಾದರೂ ಹೇಗೆ? ಹಿಂದಕ್ಕೆ ಉದ್ದಗಲಕ್ಕೂ ಸುಮಾರು ನಡೆದ, ಓಡಿದ ದಾರಿಯ ಗುರುತೇ ಸಿಗುತ್ತಿಲ್ಲ. ತಪ್ಪಿದ ದಾರಿ… ಪಟ್ಟಣದಿಂದ ಸುಮಾರು ದೂರ ಬಂದಿರಬೇಕು. ಬಾಯಾರಿಕೆ… ನೀರು… ಎಲ್ಲಿಂದ ? ಎತ್ತ ಕಣ್ಣು ಹಾಯಿಸಿದರೂ ಮರಳೇ! ಭೂಮಿಗೆ ಚಾದರ ಹೊದಿಸಿ ಮಲಗಿಸಿದ ಹಾಗೆ. ಒಂದು ಕಡೆ ನಿಂತ, ನಾಳೆ ಆಫೀಸಿಗೆ ಹೋಗಬೇಕು. ರೂಮ್‌ಗೆ ಬೀಗ ಹಾಕಿದ್ದೇನೆ, ಗ್ಯಾಸ್ ಬಂದ್ ಮಾಡಿದ್ದೇನೆ. ಯಾರಿಗಾದರೂ ಕಾಲ್ ಮಾಡೋಣವೆಂದರೆ… ವಾಕಿಂಗ್‌ಗೆ ಹೋಗುವಾಗ ಮೊಬೈಲ್ ಇಟ್ಟುಕೊಳ್ಳದ ಚಾಳಿ. ಏನೋ ಹೊಳೆದವನಂತೆ ನಿಂತಲ್ಲಿಂದ ಪಶ್ಚಿಮ ದಿಕ್ಕಿಗೆ ಒಂದೇ ಸಮನೆ ನಡೆದ, ಅಲ್ಲಲ್ಲ ಓಡಿದ, ಒಂದು ಕಿಲೋಮೀಟರ್ ನಡೆದಿರಬೇಕು, ಯಾರೋ ಕಂಡ ಹಾಗಾಯ್ತು. ಹೆಚ್ಚೇ ಎನಿಸುವಷ್ಟು ಉದ್ದಗಲದ ಕಟ್ಟುಮಸ್ತಾದ ಆಳು. “”ಸರ್…, ಭಾಯಿ ಸಾಬ್…” ಏದುಸಿರು ಬಿಡುತ್ತ ಕರೆದ. ಅವನು ತಿರುಗಿ ನೋಡಿದ ಭಂಗಿಗೇ ಹೆದರಬೇಕು, ಮತ್ತೆ ಮಾತಿಗೆ? ದಾರಿ ತಪ್ಪಿ ಯಾರೂ ಸಿಗದೇ ಇ¨ªಾಗ ಇದ್ದ ಭಯಕ್ಕಿಂತ ಇವನು ಸಿಕ್ಕಾಗ ಭಯ ಹೆಚ್ಚಾಯ್ತು ಮಂಜುಗೆ. “”ಕ್ಯಾ ಚಾಹೀಯೆ?” (ಏನು ಬೇಕು) ಪಾಕಿಸ್ತಾನದ ಜನರ ಗಟ್ಟಿ ಸ್ವರ ಅದು.
“”ಪಾನಿ” ಅಂದ ಮಂಜು ಕಂಪಿಸುತ್ತಲೇ.
“”ನನ್ನ ಹತ್ತಿರ ಎಲ್ಲಿದೆ?”
“”ನನಗೆ ಶಾರ್ಜಾ ಮೆಗಾ ಮಾಲ್ ಹತ್ತಿರ ಹೋಗಬೇಕು, ತಪ್ಪಿ ಇಲ್ಲಿಗೆ ಬಂದೆ. ದಾರಿ ತೋರಿಸಬಹುದಾ?” ಬಾಯಿಪಾಠ ಒಪ್ಪಿಸಿದ ಹಾಗೆ ಅಂದ.
“”ಪಾಗಲ್… ಅದು ಇಲ್ಲಿಂದ ಎರಡೂವರೆ ಕಿಲೋಮೀಟರ್ ದೂರದಲ್ಲಿದೆ”
“”ನನಗೆ ದಾರಿ ತೋರಿಸಿ ಸಾಕು”
“”ಆಪ್ ಲೋಗ್ ಆಫೀಸ್ ಮೆ ಕಾಮ್ ಕರ್ತಾ ಹೇ, ಧಿಮಾಕ್ ತೋಡಾಬಿ ನಹಿ ಹೆ, ಚ್ಯುತಿಯಾ ಲೋಗ್ (ನೀವು ಆಫೀಸ್‌ನಲ್ಲಿ ಕೆಲಸ ಮಾಡುತ್ತೀರಿ, ಆದರೆ ತಲೆ ಇಲ್ಲ ನಿಮಗೆ, ಕಳ್ಳರು)” ಶುದ್ಧ ತನ್ನ ಪಾಕಿಸ್ತಾನದ ಉರ್ದು ಮಿಶ್ರಿತ ಹಿಂದಿಯಲ್ಲಿ ಬೈದ. “”ಆವೋ (ಬಾ)” ಎಂದ.
ಹುಷಾರು ತಪ್ಪಿದ ಕರು ಕೀಟಲೆ ಮಾಡದೆ ಹಸುವನ್ನು ಹಿಂಬಾಲಿಸುವಂತೆ ಅವನನ್ನು ಹಿಂಬಾಲಿಸಿದ ಮಂಜು. ಅವನು ಬೈಯುತ್ತಲೇ ಇದ್ದ, ಮಾತೂ ಮರೆತವನಂತೆ ಸುಮ್ಮನಿದ್ದ ಮಂಜು.
ಮೆಗಾಮಾಲ್ ಹತ್ತಿರ ತಲುಪುತ್ತಲೇ ಮಂಜು, “”ಸಾಕು, ನಾನಿನ್ನು ಹೋಗುತ್ತೇನೆ, ತುಂಬಾ ಧನ್ಯವಾದ” ಅಂದ. “”ನಿನ್ನ ರೂಮ್ ಎಲ್ಲಿ?”
“”ಇದರ ಹಿಂದೆ”
“”ಆವೋ…” ಅವನದು ಧಿಮಾಕಿನ ಸ್ವರ.
ಅವನು ನಡೆಯುವುದೋ, ಓಡುವುದೋ? ಆದರೆ ಮಂಜು ಮಾತ್ರ ಓಡಿದ್ದು.
ರೂಮ್‌ಗೆ ತಲುಪುತ್ತಲೇ “”ನಾನಿನ್ನು ಹೋಗುತ್ತೇನೆ” ಅಂದ.
“”ಇಲ್ಲಿಯವರೆಗೆ ಬಂದಿದ್ದೀರಿ, ನೀರು ಕುಡಿದು ಹೋಗಿ” ಎಂದ ಮಂಜು.
ಮರುಮಾತನಾಡದೆ ಒಳಗೆ ಬಂದು ಅಡುಗೆ ಕೋಣೆಯ ಒಂದು ಬದಿಯಲ್ಲಿ ಪೆಕರುಪೆಕರಾಗಿ ಕುಳಿತ. “”ಅಲ್ಲಿ ಕುಳಿತುಕೊಳ್ಳಿ ಸೋಫಾದಲ್ಲಿ” ಎಂದು ಸೋಫಾ ತೋರಿಸಿದ ಮಂಜು. ಅವನು ಮಾತನಾಡಲಿಲ್ಲ. ಎರಡು ಚಪಾತಿ ಬಿಸಿ ಮಾಡಿ ನೀರಿನೊಂದಿಗೆ ಅವನಿಗೆ ಕೊಟ್ಟ.
“”ಚಾರ್ ಕಿದರ್ಸೆ ಚಲೇಗಾ? ಔರು ಚಾರ್ ದೇದೋ (ನಾಲ್ಕು ಎಲ್ಲಿಗೆ ಸಾಕಾಗುತ್ತದೆ? ಇನ್ನು ನಾಲ್ಕು ಕೊಡು)” ಶುದ್ಧ ಆಗ್ರಹ ಶೈಲಿ. ಮತ್ತೆ ಆರು ಚಪಾತಿ ತಿಂದು ಬಟ್ಟಲನ್ನು ಸಿಂಕ್‌ನಲ್ಲಿ ಹಾಕಿ ಮತ್ತೆ ಧಿಮಾಕ್ ಜಾಗಾ ಮೆ ರಖೋ… ಚ್ಯುತಿಯಾ ಲೋಗ್… ಸಿಫ್ì ಕಾಮ್ ಮಾಲೂಮ್ ಹೆ… ಚ್ಯುತಿಯಾ ಲೋಗು…(ಬುದ್ಧಿ ಸರಿಯಾಗಿ ಇಟ್ಟುಕೋ, ಆಫೀಸ್ ಕೆಲಸ ಮಾತ್ರ ಗೊತ್ತು ಕಳ್ಳರು) ತಿರುಗಿಯೂ ನೋಡದೆ ಬಿಟ್ಟ ಬಾಣದಂತೆ ನಡೆದೇ ಬಿಟ್ಟ. ಅರೆ ಹೆಸರೇ ಕೇಳಲಿಲ್ಲವಲ್ಲ ಅವನದ್ದು, ಅವನೂ ಕೇಳಲಿಲ್ಲ. ದಾರಿ ಕೇಳಿದರೆ ಮನೆಗೇ ತಂದು ಬಿಟ್ಟ ಅಸಾಮಿ, ಬೈದದ್ದು ಬಿಟ್ಟರೆ ಬೇರೇನೂ ಹೇಳಲಿಲ್ಲ. ಬಲಿಷ್ಠ ಬಾಹುಗಳು, ಅಗಲವಾದ ಬೆನ್ನು, ನೇರನಿಷ್ಠುರ ನುಪಿನಡೆ.
ಥೇಟ್ ಭೀಮನ ಹಾಗೆಯೇ ! – ಸಂತೋಷ್ ತಿಮ್ಮೊಟ್ಟು