Advertisement
ನೇಕಾರಿಕೆಗೆ ಕಳೆದೆರಡು ಶತಮಾನಗಳ ಇತಿಹಾಸ ಹೊಂದಿರುವ ಈ ಪಟ್ಟಣಗಳು ಇದೀಗ ಜವಳಿ ಉದ್ದಿಮೆ ಅಳಿವಿನಂಚಿನ ತೂಗುಯ್ಯಾಲೆಯಲ್ಲಿವೆ. ಒಂದೆಡೆ ಮಾರುಕಟ್ಟೆ ನೆಲೆ ಸಿಗದೆ ವ್ಯಾಪಾರ ಹೀನಾಯ ಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ನವೀಕರಣಗೊಳ್ಳದ ಕಾರಣ ಅದೇ ಹಳೇ ಕಾಲದ ಮಗ್ಗಗಳಿಂದಲೇ ಸೀರೆ ಉತ್ಪಾದನೆ ದೊಡ್ಡ ಸವಾಲಾಗಿದೆ.
Related Articles
Advertisement
ಅನ್ಯ ಉದ್ಯೋಗ: ಈಗಾಗಲೇ ಅನುಭವ ಹೊಂದಿರುವ ನೇಕಾರ ಮಾಲಿಕರು ಅನ್ಯ ಉದ್ಯೋಗಗಳತ್ತ ಸಾಗಿದ್ದು, ಜವಳಿ ಕ್ಷೇತ್ರದಿಂದ ದೂರವಾಗುವಲ್ಲಿ ಕಾರಣವಾಗಿದ್ದರೆ, ಮತ್ತೊಂದೆಡೆ ದಿನದಿಂದ ದಿನಕ್ಕೆ ಯುವಕರು ನೇಕಾರಿಕೆಯತ್ತ ಸಾಗುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಹೈಟೆಕ್ ಮಗ್ಗಗಳು ಮೂಲೆಗುಂಪು: ಹೊಸ ವಿನ್ಯಾಸ, ತಾಂತ್ರಿಕತೆಯೊಂದಿಗೆ ರ‍್ಯಾಪಿಯರ್, ಕಂಪ್ಯೂಟರ್ ಜಕಾರ್ಡ್ ಸೇರಿದಂತೆ ಅನೇಕ ಮಗ್ಗಗಳು ಈಗಷ್ಟೇ ಅವಳಿ ನಗರದತ್ತ ದಾಪುಗಾಲು ಹಾಕಿವೆ. ಇವುಗಳ ನಿರ್ವಹಣೆ ದೊಡ್ಡ ಸವಾಲಾಗಿದ್ದು, ನೇಯ್ಗೆಯ ನೈಪುಣ್ಯತೆಗಾರರು ದೊರಕದ ಕಾರಣ ಮಾಲಿಕರು ಆರ್ಥಿಕ ಸಂಕಷ್ಟ ಎದುರಿಸುವುದರ ಜೊತೆಗೆ ಮಗ್ಗಗಳು ಧೂಳು ತಿನ್ನುತ್ತಿವೆ. ಬೆರಳಣಿಕೆಯಷ್ಟು ಮಾಲಿಕರು ಮಾತ್ರ ಮಗ್ಗಗಳನ್ನು ಖರೀದಿಸಿದ್ದರಿಂದ ಇವರ ಹಾನಿಯಿಂದಾಗಿ ಇತರೆ ಮಾಲಿಕರು ಮಗ್ಗಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ.
ಕಚ್ಚಾ ಸಾಮಗ್ರಿ ತಯಾರಿಕಾ ಘಟಕ ನೇಪಥ್ಯಕ್ಕೆ: ಸೀರೆ ಉತ್ಪಾದನೆ ಆಗಬೇಕಾದರೆ ಸುಮಾರು ಐದಾರು ವಿಭಾಗಗಳ ಘಟಕಗಳು ಅವಶ್ಯಕತೆ ಇದ್ದವು. ಪ್ರಮುಖವಾಗಿ ವಾರ್ಪಿಂಗ್, ಸೈಜಿಂಗ್, ನೂಲು ಸುತ್ತುವಿಕೆ ಸೇರಿದಂತೆ ಅನೇಕವಿದ್ದವು. ಇದೀಗ ಸೀರೆ ನೇಯ್ಗೆಗೆ ಮಾರುಕಟ್ಟೆಯಲ್ಲಿ ತಯಾರಿ ನೂಲು ದೊರಕುತ್ತಿರುವುದರಿಂದ ಕಚ್ಚಾ ಸಾಮಗ್ರಿಗಳ ಘಟಕಗಳು ನೇಪಥ್ಯಕ್ಕೆ ಸರಿಯುವಲ್ಲಿ ಕಾರಣ.
ಅಸಂಘಟಿತ: ಹಲವಾರು ಸಮಸ್ಯೆಗಳನ್ನು ಹೊತ್ತು ನಿಂತಿರುವ ಜವಳಿ ಕ್ಷೇತ್ರಕ್ಕೆ ಅಸಂಘಟನೆಯಿಂದ ಹೋರಾಟ ಅಥವಾ ಬೇಡಿಕೆಗಳಿಗೆ ಸ್ಪಂದನೆಗೆ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿ ಸರ್ಕಾರದ ವಿರುದ್ಧ ಸಿಡಿದೇಳುತ್ತಿದ್ದ ನೇಕಾರರು ಕಳೆದೊಂದು ದಶಕದಿಂದ ಪ್ರಖರ ಹಾಗು ಪ್ರಮುಖ ಹೋರಾಟಗಳಿಂದ ದೂರ ಉಳಿಯುವಲ್ಲಿ ಕಾರಣವಾಗಿದೆ.
ಯೋಜನೆಗಳಿಗೆ ಸೀಮಿತ: ಸರ್ಕಾರ ಕೊಡ ಮಾಡುವ ಯೋಜನೆಗಳಿಗೆ ಸೀಮಿತಗೊಂಡಿರುವ ನೇಕಾರರು ತಮ್ಮ ಕಾಯಕದ ನಿಷ್ಠೆ ಹಾಗೂ ಪ್ರಯತ್ನ ತೋರುವಲ್ಲಿ ವೈಫಲ್ಯ ಕಾಣುವಲ್ಲಿ ಕಾರಣವಾಗಿದ್ದು, ನೆರೆಯ ರಾಜ್ಯಗಳಲ್ಲಿನ ಅತೀ ವೇಗದ ಉದ್ಯೋಗ ಕ್ರಾಂತಿಗೆ ಕಿಂಚಿತ್ತೂ ಪೈಪೋಟಿ ಒಡ್ಡುವಲ್ಲಿ ಇಚ್ಛಾಶಕ್ತಿ ತೋರದಿರುವುದು ವಿಪರ್ಯಾಸ.