Advertisement

ಬಂಡೆಗೆ ಭೀಮನ ಗದಾ ಪ್ರಹಾರ

07:23 PM Oct 04, 2019 | Lakshmi GovindaRaju |

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಆಕರ್ಷಕ ತಾಣ. ರಾಮಾಯಣದ ಕಾಲದ ನಂಟಿರುವ ಈ ಬೆಟ್ಟದ ತಪ್ಪಲಿನಲ್ಲಿ, ಪಾಂಡವರು ವಾಸವಿದ್ದರು ಎನ್ನುವುದು ಊರಿನವರ ನಂಬಿಕೆ. ಒಮ್ಮೆ ಭೀಮ, ಹೊಲದಲ್ಲಿ ಉಳುಮೆ ಮಾಡುತ್ತಿದ್ದನಂತೆ. ಮೊದಲೇ ಭೀಮನಿಗೆ ಹಸಿವು. ಕುಂತಿಯು ಮಗನಿಗೆ, ದೊಡ್ಡ ದೊಡ್ಡ ಬುತ್ತಿಗಳಲ್ಲಿ ಊಟ ಕಟ್ಟಿಕೊಂಡು, ಹೊಲದತ್ತ ಹೊರಟಳು.

Advertisement

ದಾರಿಯಲ್ಲಿ ಆಕೆಗೆ ಬೃಹತ್‌ ಬಂಡೆ ಎದುರಾಯಿತು. ಕುಂತಿಗೆ ದಾರಿ ತೋಚದೆ, ಭೀಮನನ್ನು ಗಟ್ಟಿಯಾಗಿ ಕೂಗಿದಳಂತೆ. ಆಗ ಭೀಮ ಬಂದು, ತನ್ನ ಗದೆಯಿಂದ ಬಂಡೆಗೆ ಪ್ರಹಾರ ಮಾಡಿದ. ಬಂಡೆಯು ಕಮಾನಿನ ರೂಪ ಪಡೆದಾಗ, ಕುಂತಿಗೆ ಹಾದಿ ಸುಗಮವಾಯಿತು. ಆ ಕಾರಣ ಇಲ್ಲಿಗೆ “ಭೀಮನ ಬೆಟ್ಟ’ ಎಂಬ ಹೆಸರು ಬಂತು. ಈ ಬಂಡೆ 200 ಅಡಿ ಉದ್ದ, 150 ಅಡಿ ಅಗಲ ಮತ್ತು 70 ಅಡಿ ಎತ್ತರವಿದೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next