Advertisement

ಭಿಲಾಯ್‌ ಸ್ಟೀಲ್‌ ಪ್ಲಾಂಟ್‌ ದುರಂತ : 11ಕ್ಕೇರಿದ ಮೃತರ ಸಂಖ್ಯೆ

11:52 AM Oct 10, 2018 | Team Udayavani |

ರಾಯಪುರ : ಛತ್ತೀಸ್‌ಗಢದ ಭಿಲಾಯ್‌ ಸ್ಟೀಲ್‌ ಪ್ಲಾಂಟ್‌ನಲ್ಲಿ ನಿನ್ನೆ ಮಂಗಳವಾರ ಸಂಭವಿಸಿದ್ದ ಭೀಕರ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ನೌಕರರು ಇಂದು ಮೃತಪಡುವುದರೊಂದಿಗೆ  ಈ ದುರಂತದಲ್ಲಿ ಅಸುನೀಗಿರುವವರ ಸಂಖ್ಯೆ 11ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಿನ್ನೆ ಮಂಗಳವಾರ ಅವಘಡ ಸಂಭವಿಸಿದ್ದ ವೇಳೆ 9 ಮಂದಿ ಮಡಿದಿದ್ದು ಇತರ 14 ಮಂದಿ ಗಾಯಗೊಂಡಿದ್ದರು. ಸರಕಾರಿ ಒಡೆತನದ ಸ್ಟೀಲ್‌ ಅಥಾರಿಟಿ ಆಫ್ ಇಂಡಿಯಾಗೆ ಸೇರಿದ ಈ ಘಟಕದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಸ್ಫೋಟಗೊಂಡಿತ್ತು. 

ತೀವ್ರ ಸುಟ್ಟಗಾಯಗಳೊಂದಿಗೆ ನಿನ್ನೆ ಭಿಲಾಯ್‌ ನ ಜವಾಹಾರ್‌ ಲಾಲ್‌ ನೆಹರೂ ಆಸ್ಪತ್ರೆಗೆ ದಾಖಲಾಗಿದ್ದ 14 ಮಂದಿಯ ಪೈಕಿ ನಿನ್ನೆ ತಡರಾತ್ರಿ ಇಬ್ಬರು ಕೊನೆಯುಸಿರೆಳೆದರು ಎಂದು ಘಟಕದ ಪಿಆರ್‌ಓ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next