Advertisement

Bharat: ಗೂಗಲ್‌ನಲ್ಲೂ ಈಗ “ಭಾರತ್‌”

09:28 PM Oct 29, 2023 | Team Udayavani |

ನವದೆಹಲಿ: ಇದೀಗ ಗೂಗಲ್‌ ಮ್ಯಾಪ್ಸ್‌ನಲ್ಲಿ ನೀವು “ಭಾರತ್‌’ ಎಂದು ಇಂಗ್ಲೀಷ್‌ನಲ್ಲಿ ಟೈಪ್‌ ಮಾಡಿದರೆ, ತ್ರಿವರ್ಣ ಧ್ವಜದೊಂದಿಗೆ “ದಕ್ಷಿಣ ಏಷ್ಯಾದ ರಾಷ್ಟ್ರ’ ಎಂದು ತೋರಿಸುತ್ತಿದೆ. ಈ ಹಿಂದೆ ಹಿಂದಿ ಭಾಷೆಯಲ್ಲಿ “ಭಾರತ್‌’ ಎಂದು ಟೈಪ್‌ ಮಾಡಿದರೆ ಮಾತ್ರ ದೇಶದ ಹೆಸರು ಬರುತ್ತಿತ್ತು. ಇಂಗ್ಲೀಷ್‌ನಲ್ಲಿ “ಇಂಡಿಯಾ’ ಎಂದು ಟೈಪ್‌ ಮಾಡಿದರೆ, ದೇಶದ ರಾಷ್ಟ್ರಧ್ವಜದೊಂದಿಗೆ ದಕ್ಷಿಣ ಏಷ್ಯಾದ ರಾಷ್ಟ್ರ ಎಂದು ತೋರಿಸಲಾಗುತ್ತಿತ್ತು.

Advertisement

ಈಗ ಇಂಗ್ಲೀಷ್‌ ಭಾಷೆಯಲ್ಲಿ “ಭಾರತ್‌’ ಎಂದು ಟೈಪ್‌ ಮಾಡಿದರೂ ಅದು ಗುರುತಿಸುತ್ತಿದೆ. ಕೇಂದ್ರ ಸರ್ಕಾರ ನಿಧಾನವಾಗಿ “ಇಂಡಿಯಾ’ ಬದಲಾಗಿ ಎಲ್ಲೆಡೆ “ಭಾರತ್‌’ ಎಂದು ಹಂತ-ಹಂತವಾಗಿ ಬಳಸಲು ಮುಂದಾಗಿರುವ ನಡುವೆಯೇ ಗೂಗಲ್‌ ತನ್ನನ್ನು ತಾನು ಅಪ್‌ಡೇಟ್‌ ಮಾಡಿಕೊಂಡಿದೆ. ಗೂಗಲ್‌ ಮ್ಯಾಪ್ಸ್‌ ಮಾತ್ರವಲ್ಲದೇ ಗೂಗಲ್‌ನಲ್ಲಿ “ಭಾರತ್‌’ ಎಂದು ಸರ್ಚ್‌ ಮಾಡಿದರೆ ದೇಶಕ್ಕೆ ಸಂಬಂಧಿಸಿದ ಸುದ್ದಿಗಳು, ವಿಕಿಪೀಡಿಯಾ ಸೇರಿದಂತೆ ಎಲ್ಲಾ ಮಾಹಿತಿಗಳು ಅನಾವರಣಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next