Advertisement

Bharamasagara; ಸ್ಥಳೀಯ ಟಿಪ್ಪರ್ ಗಳನ್ನು ಬಳಸಿಕೊಳ್ಳಲು ಆಗ್ರಹಿಸಿ ಪ್ರತಿಭಟನೆ

10:48 PM Jul 21, 2024 | Team Udayavani |

ಭರಮಸಾಗರ: ಮೆದಕೇಪುರ ಸಮೀಪದ ಜಾನ್ ಮೈನ್ಸ್ ನವರು ಸ್ಥಳೀಯ ಟಿಪ್ಪರ್ ಲಾರಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿರುವ ಮೈನ್ಸ್ ಆಡಳಿತ ವೈಖರಿಯನ್ನು ಖಂಡಿಸಿ ಸುತ್ತಮುತ್ತಲ ಗ್ರಾಮಸ್ಥರು ಮೆದಕೇಪುರ ಬಳಿಯ ಜಾನ್ ಮೈನ್ಸ್ ಮುಖ್ಯ ದ್ವಾರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

Advertisement

ಸ್ಥಳೀಯವಾಗಿರುವ ಮೈನ್ಸ್ ನಲ್ಲಿ ಕೆಲಸಕ್ಕೆಂದು ಟಿಪ್ಪರ್ ಲಾರಿಗಳನ್ನು ಸಾಲಸೂಲ ಮಾಡಿ ತಂದು ಲಾರಿಗಳನ್ನು ಲೋಡ್ ಮಾಡಲು ಅವಕಾಶ ನೀಡುವಂತೆ ಕೋರಿದರೆ ಮೈನ್ಸ್ ವರು ಲಾರಿಗಳನ್ನು ತೆಗೆದುಕೊಳ್ಳದೆ ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ 340 ಕ್ಕೂ ಹೆಚ್ಚು ಲಾರಿಗಳ ಮಾಲೀಕರು ಅದಿರು ಗಣಿ ಕೆಲಸಕ್ಕೆಂದೆ ಜನರು ಖರೀದಿಸಿದ್ದಾರೆ.ಹೊಸದಾಗಿ 120 ಲಾರಿಗಳನ್ನು ಹಳ್ಳಿಗರು ಖರೀದಿಸಿ ತಂದಿದ್ದಾರೆ. ಕೆಲಸಕ್ಕೆ ಲಾರಿಗಳನ್ನು ಬಳಕೆ ಮಾಡಿಕೊಳ್ಳದೆ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಸ್ಥಳೀಯ ಲಾರಿಗಳನ್ನು ಕಳೆದ 50 ದಿನಗಳಿಂದ ಕೆಲಸಕ್ಕೆ ತೆಗೆದುಕೊಳ್ಳದೆ ಇರುವ ಕಾರಣ ಮೈನ್ಸ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

ಗಣಿ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿ ಗೆ ಶ್ರಮಿಸಬೇಕಾದ ಗಣಿ ಮಾಲೀಕರು ಕಿಂಚಿತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಸ್ಥಳೀಯ ಜನರಿಗೆ ಹೆಚ್ಚು ಉದ್ಯೋಗ ಅವಕಾಶಗಳನ್ನು ನೀಡದೆ ಹಲವು ಗುರುತರ ತಪ್ಪುಗಳನ್ನು ಎಸಗುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಶೀಘ್ರವಾಗಿ ಲಾರಿಗಳನ್ನು ಗಣಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳದೆ ಹೋದರೆ ಮೆದಕೇಪುರ ದಿಂದ ಚಿತ್ರದುರ್ಗ ಡಿಸಿ ಕಚೇರಿ ವರೆಗೆ ಕಾಲ್ಗಡಿಗೆ ಜಾಥ ನಡೆಸಿ ಗಣಿ ಅದಿರು ಮಾಲಕರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ನಾನಾ ಸಂಘಟನೆಗಳ ಮುಖಂಡರು ಮತ್ತು ಕಾಗಳಗೆರೆ, ಮುತ್ತುಗದೂರು, ಮೆದಕೇಪುರ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next