Advertisement

ಮಣಿಪಾಲ: ಭಜನೆ ರಿಯಾಲಿಟಿ ಶೋ

01:50 AM Dec 06, 2018 | Karthik A |

ಉಡುಪಿ: ರಾಷ್ಟ್ರದ ಪ್ರಮುಖ ಧಾರ್ಮಿಕ ವಾಹಿನಿ ಶ್ರೀ ಶಂಕರ ಟಿವಿ ಚಾನೆಲ್ ಆಯೋಜನೆಯಲ್ಲಿ ಮತ್ತು ಮಣಿಪಾಲ ಈಶ್ವರನಗರ ಮಹಾಮಾಯ ಭಜನ ಮಂಡಳಿ ಸಹಭಾಗಿತ್ವದಲ್ಲಿ ಡಿ. 30ರಂದು ಮಣಿಪಾಲ ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 8ರಿಂದ 16ರ ವಯೋಮಿತಿಯವರ ಭಜನ ತಂಡಗಳಿಗೆ ವಿಶ್ವದ ಮೊತ್ತಮೊದಲ ರಿಯಾಲಿಟಿ ಶೋ ಭಜನ್‌ ಸಾಮ್ರಾಟ್‌ ಜೂನಿಯರ್‌ 3ನೇ ಅವತರಣಿಕೆ ನಡೆಯಲಿದೆ.

Advertisement

ರಾಜ್ಯಮಟ್ಟದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು ಆಸಕ್ತ ಭಜನ ತಂಡಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಡಿ. 20ರ ಒಳಗೆ ನೋಂದಾಯಿಸಲು ಸೂಚಿಸಲಾಗಿದೆ. ಪ್ರಥಮ ಐದು ಸ್ಥಾನ ವಿಜೇತ ಭಜನ ತಂಡಗಳಿಗೆ ಸೆಮಿಫೈನಲ್ ಹಂತಕ್ಕೆ ತೇರ್ಗಡೆಗೊಂಡು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗೆ ದೂ. 9743293290 ಸಂಪರ್ಕಿಸಲು ಕಾರ್ಯಕ್ರಮ ಸಂಯೋಜಕರಾದ ಮಾಯಾ ಕಾಮತ್‌, ಮಹೇಶ್‌ ಠಾಕೂರ್‌, ಮಂಜುನಾಥ್‌ ಮಣಿಪಾಲ ಮತ್ತು ಜಯಕರ್‌ ಕುಂದಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next