Advertisement

80 ಸಾವಿರ ರೂ. ಧನ ಸಂಗ್ರಹವನ್ನು ವಿತರಿಸಿದ ಭಗವತಿ ಗ್ರೂಪ್‌

02:55 AM Dec 07, 2018 | Team Udayavani |

ಪಡುಬಿದ್ರಿ: ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಹುಟ್ಟು ಹಾಕಲಾಗಿರುವ ಪಡುಬಿದ್ರಿ ಭಗವತಿ ಗ್ರೂಪ್‌ನಿಂದ ನವರಾತ್ರಿ ಉತ್ಸವದ ಕೊನೆಯ 2 ದಿನ ವೇಷಗಳನ್ನು ಹಾಕಿ ಸಹೃದಯಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಎಂಬತ್ತು ಸಾವಿರ ರೂಪಾಯಿಗಳನ್ನು ಅಸೌಖ್ಯದಿಂದ ಬಳಲುತ್ತಿರುವ ಅವಿಭಜಿತ ಜಿಲ್ಲೆಯ ಏಳು ಕುಟುಂಬಗಳಿಗೆ ಅವರ ಮನೆಗೇ ತೆರಳಿ ಸಹಾಯಧನವನ್ನು ಇತ್ತೀಚೆಗೆ ಹಸ್ತಾಂñರಿಸಲಾಯಿತು.

Advertisement

ಯಾವುದೇ ಪದಾಧಿಕಾರಿಗಳಿಲ್ಲದ ಭಗವತಿ ಗ್ರೂಪ್‌ ಸಂಘಟನೆಯಲ್ಲಿ ಸುಮಾರು ಎಂಭತ್ತು ಜನ ಸದಸ್ಯರಿದ್ದಾರೆ. ದುಡಿದು ತಿನ್ನುವ ಈ ಯುವಕರು ಪ್ರತೀ ತಿಂಗಳು ತಾವು ಪಡೆಯುವ ವೇತನದ ಒಂದಂಶವನ್ನು ಗ್ರೂಪ್‌ನಲ್ಲಿ ಸಂಗ್ರಹಿಸಿ ಅದನ್ನು ಸಮಾಜದ ಅಶಕ್ತರಿಗೆ ಧನ ಸಹಾಯವಾಗಿ ನೀಡುವ ಮೂಲಕ ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಈವರೆಗೆ ಲಕ್ಷಾಂತರ ರೂ.ಗಳ  ಸಹಾಯಧನವನ್ನು ಹಲವಾರು ಅಶಕ್ತರಿಗೆ ನೀಡಿದ್ದಾರೆ. ಇದೇ ಉದ್ದೇಶದಿಂದ ಈ ಬಾರಿ ವೇಷ ಧರಿಸಿ ನವರಾತ್ರಿಯ ಕೊನೆಯ ಎರಡು ದಿನಗಳಲ್ಲಿ ಊರೂರು ಸುತ್ತಿ ಧನ ಸಂಗ್ರಹಿಸಿ ಅದನ್ನು ಬಡವರಿಗೆ ವಿತರಿಸುವ ಮೂಲಕ ಅವರ ನೋವಿಗೆ ಸ್ಪಂದಿಸಿದ್ದಾರೆ.

ಸಿದ್ದಕಟ್ಟೆ ಸಂಗಬೆಟ್ಟು ಗ್ರಾಮದ ಸಂಜೀವ ಆಚಾರ್ಯ ಮತ್ತು ಸರಸ್ವತಿಯವರ ಮಗಳಾದ ಪ್ರತಿಮಾ ಅವರ ಗರ್ಭಕೋಶದ ಶಸ್ತ್ರ ಚಿಕಿತ್ಸೆಯ ವೈದ್ಯಕೀಯ ವೆಚ್ಚಕ್ಕಾಗಿ ರೂ. 20,000, ಮಂಗಳೂರು ಕೋಟೆಕಾರ್‌ ಗ್ರಾಮದ  ಪಾರ್ಶ್ವವಾಯುವಿಗೆ ತುತ್ತಾದ ರಾಮಣ್ಣ ಕುಲಾಲ್‌ ರವರಿಗೆ ರೂ.10,000, ಕೆಲಸ ಮಾಡುವಾಗ ಅಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಕೈ ಬೆರಳು ತುಂಡಾಗಿ ಚಿಕಿತ್ಸೆ ಪಡೆಯುತ್ತಿರುವ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ನಿವಾಸಿ ಸಂಗೀತಾ ಶೆಟ್ಟಿಯವರಿಗೆ ರೂ 10000 ಧನ ಸಹಾಯ ನೀಡಲಾಯಿತು.

ನಂದಿಕೂರು ಶೆಟ್ಟಿಗುಡ್ಡೆ ನಿವಾಸಿ ಜಯಶ್ರೀ ದೇವಾಡಿಗರವರ ಮನೆ ದುರಸ್ತಿಗೆ ರೂ. 10000, ನಂದಿಕೂರು ಆನೆಡ್ಕ ನಿವಾಸಿ ರಿಯಾಜ್‌ ಸಹೋದರಿಯ ಮದುವೆಯ ಖರ್ಚಿಗೆ  ರೂ. 10000,  ಉಡುಪಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕಾಪು ತಾಲೂಕಿನ ಸದಾಶಿವ ನಾಯಕ್‌- ಲಕ್ಷ್ಮೀ ದಂಪತಿಯ ಪುತ್ರಿ ಸೌಂದರ್ಯ ಅವರ ಬೆನ್ನಿನ ಶಸ್ತ್ರ ಚಿಕಿತ್ಸೆಗಾಗಿ ರೂ. 10,000 ಹಾಗೂ ಅಪಘಾತದಲ್ಲಿ ಕಾಲು ಕಳೆದುಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕಾರ್ಕಳ ತಾಲೂಕು ನಿಟ್ಟೆ ಕೆಮ್ಮಣ್ಣು ನಿವಾಸಿ ಶೇಖರ್‌ ದೇವಾಡಿಗರವರ ವೈದ್ಯಕೀಯ ವೆಚ್ಚಕ್ಕೆ ರೂ. 10000 ಸಹಾಯಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಗವತಿ ಗ್ರೂಪ್‌ನ ಸದಸ್ಯರು, ಮಂಜಣ್ಣ ಸೇವಾ ಬ್ರಿಗೇಡ್‌, ಪಾದೆಬೆಟ್ಟು ನಿತ್ಯಾನಂದ ಸೇವಾ ಬಳಗದ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next