Advertisement

ಗುರಿ ಸಾಧನೆಗೆ ಭಗೀರಥ ಮಹರ್ಷಿ ಮಾದರಿ: ಮಂಜಪ್ಪ

04:29 PM Apr 23, 2018 | Team Udayavani |

ಚಿತ್ರದುರ್ಗ: ಭಗೀರಥ ಮಹರ್ಷಿಗಳು ನಡೆಸಿದ ತಪಸ್ಸಿನಂತೆ ನಿರಂತರವಾಗಿ ಪ್ರಯತ್ನ ಪಟ್ಟಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರೊಬೆಷನರಿ ಸಹಾಯಕ ನಿರ್ದೇಶಕ ಮಂಜಪ್ಪ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸಕೃತಿ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

Advertisement

ಉತ್ತರ ಭಾರತದಲ್ಲಿ ಭಗೀರಥ ಬಹು ದೊಡ್ಡ ಮಹಾರಾಜನಾಗಿದ್ದ. ಅವನಿಗೆ ಸಕಲ ವೈಭವಗಳಿದ್ದರೂ ಕೊರಗುತ್ತಿದ್ದ. ಭಗೀರಥನ ತಂದೆ, ತಾಯಿ ದೇವಗಂಗೆಯನ್ನು ಪಡೆಯಲೇಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಈ ಬಯಕೆ ಈಡೇರಿರಲಿಲ್ಲ. ಹೇಗಾದರೂ ಮಾಡಿ ದೇವಗಂಗೆಯನ್ನು ಪಡೆಯಬೇಕೆಂದು ಭಗೀರಥ ಪ್ರತಿಜ್ಞೆ ಮಾಡಿದ. ಭಗೀರಥ ಛಲಗಾರ, ಅವನು ದೇವಗಂಗೆಯನ್ನು ಧರೆಗಿಳಿಸಲು ಘೋರವಾದ ತಪಸ್ಸು ಮಾಡಿದ. ಅವನ
ತಪಸ್ಸಿಗೆ ಮೆಚ್ಚಿ ಗಂಗೆ ಪ್ರತ್ಯಕ್ಷಳಾಗಿ ನಿನಗೇನು ವರ ಬೇಕು ಎಂದು ಕೇಳಿದಾಗಿ ನೀನು ಭೂಮಿಗೆ ಇಳಿಯಬೇಕು, ನನ್ನ ತಂದೆ-ತಾಯಿಯನ್ನು ಪವಿತ್ರಗೊಳಿಸಬೇಕು ಎಂದು ಬೇಡಿಕೊಂಡ. 

ಆಕಾಶದಿಂದ ಭೂಮಿಗೆ ಧುಮುಕುವಾಗ ನನ್ನ ರಭಸವನ್ನು ತಡೆಯುವವರು ಯಾರು, ಆ ರಭಸಕ್ಕೆ ಇಡೀ ಭೂ ಮಂಡಲವೇ ಕೊಚ್ಚಿ ಹೋದರೇನು ಗತಿ ಎಂದು ಗಂಗಾಮಾತೆ ಕೇಳಿದಾಗ ಭಗೀರಥ ನಾನು ಶಿವನನ್ನು ಬೇಡಿ ರಭಸವನ್ನು ತಡೆಯುವಂತೆ ಪ್ರಾರ್ಥಿಸುತ್ತೇನೆ ಎಂದ. ಆಗ ಶಿವ ಪ್ರತ್ಯಕ್ಷನಾದಾಗ ಗಂಗೆ ಆಕಾಶದಿಂದ ಧುಮುಕಿದಳು. ಶಿವನು ಗಂಗೆಯನ್ನು ಜಟೆಯಲ್ಲಿ ಧರಿಸಿ ಗಂಗಾಧರನಾದ. ಅಲ್ಲಿಂದ ಗಂಗೆ ಭೂಮಿಗಿಳಿದು ಭಗೀರಥನ ರಥದ
ಹಿಂದೆ ಹರಿಯುತ್ತಾ ಹೊರಟು ಭೂಮಿಯನ್ನು ಪವಿತ್ರಗೊಳಿಸಿದಳು. ಭಗೀರಥ ನಿರಂತರ ಈ ಪ್ರಯತ್ನದಿಂದ ಗಂಗೆಯನ್ನು ಧರೆಗಿಳಿಸಿದ. ನಿರಂತರ ಹೋರಾಟ, ತ್ಯಾಗದಿಂದ ಭಗೀರಥನಿಗೆ ಈ ಸಾಧನೆ ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಭಗೀರಥ ಪ್ರಯತ್ನ ಮಾಡು ಎಂದೇ ಹೇಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ನ್ಸಾ , ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪಿ.ಎನ್‌. ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿಜಯಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಹಾಗೂ ವಿವಿಧ ಇಲಾಖೆಗಳ ಅಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next