Advertisement

ಭಗವನಾಮ ಸಂಕೀರ್ತನೆಯಿಂದ ಮಾನಸಿಕ ನೆಮ್ಮದಿ

06:54 PM Jan 28, 2021 | Team Udayavani |

ಮೀರಾರೋಡ್‌: ಇಲ್ಲಿನ ಪಲಿಮಾರು ಮಠದ ಬಾಲಾಜಿ ಸನ್ನಿಧಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ತನಕ ವಾರ್ಷಿಕ ಭಜನ ಮಹೋತ್ಸವವನ್ನು ಅಖಂಡ ಭಜ ನಾವಳಿಗಳೊಂದಿಗೆ ಪರಿಸರದ ಹಲವಾರು ಭಜನ ಮಂಡಳಿಗಳಿಂದ ಭಕ್ತಿ -ಶ್ರದ್ಧೆಯಿಂದ ನೆರವೇರಿಸಲಾಯಿತು.

Advertisement

ಪಲಿಮಾರು ಮಠದ ಸ್ವಾಮೀಜಿ ಶ್ರೀ ವಿದ್ಯಾ ಧೀಶ ಸ್ವಾಮೀಜಿಯವರ ಅಪೇಕ್ಷೆ ಹಾಗೂ ಆಶೀರ್ವಾದದೊಂದಿಗೆ ನಡೆದ ಈ ಭಕ್ತಿ ಸಂಪ್ರ ದಾಯಕ್ಕೆ ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ಮಾರ್ಗದರ್ಶನದಲ್ಲಿ ಹಾಗೂ ಪ್ರಶಾಂತ್‌ ಭಟ್‌, ಗೋಪಾಲ ಭಟ್‌ ಮತ್ತು ಕೃಷ್ಣ ಮೂರ್ತಿ ಉಪಾಧ್ಯಾಯ ಅವರಿಂದ ಪೂಜಾ ವಿಧಿ ವಿಧಾ ನಗಳೊಂದಿಗೆ ಚಾಲನೆ ನೀಡಲಾಯಿತು.

ಪ್ರಧಾನ ಅರ್ಚಕ ವಾಸುದೇವ ಎಸ್‌. ಉಪಾಧ್ಯಾಯರು ಮಾತನಾಡಿ, ಪ್ರತೀ ವರ್ಷದಂತೆ ನಡೆಯುವ ಈ ಭಜನ ಮಹೋತ್ಸವದಲ್ಲಿ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗ ಎಂದರೆ ಭಗವನ್ನಾಮ ಸಂಕೀರ್ತನೆ. ಸಾಮಾನ್ಯ ಮಾನವನಿಗೆ ಭಗವಂತನ ವಿವಿಧ ಲೀಲಾವಿನೋದಗಳನ್ನು ಸಂಕೀರ್ತನ ರೂಪ ದಲ್ಲಿ ಸೃಜಿಸಿ ಭಗವಂತನ ಸಾನ್ನಿಧ್ಯದ ಪರಮಾ ನಂದವನ್ನು ಪಡೆಯುವ ಏಕೈಕ ಮಾರ್ಗ ಪ್ರಾಪ್ತಿ ಆಗುವುದು ಭಜನೆಯಿಂದ ಮಾತ್ರ.

ಭಗವಂತನ ನಾಮ ಸ್ಮರಣೆ, ನಾಮೋಚ್ಛಾರಣೆ ಮಾಡುತ್ತಾ ಕೈತಾಳ ಹಾಕಿದರೆ ಪಾಪವೆಂಬ ಹಕ್ಕಿ ಹಾರಿ ಹೋಗುತ್ತದೆ. ಇದರಿಂದಾಗಿ ಮಾನಸಿಕ ಸ್ಥೈರ್ಯ

ಪ್ರಬಲವಾಗಿ, ಆಕಸ್ಮಿಕವಾಗಿ ಬಂದೊದಗುವ ತೊಂದರೆ, ರೋಗಾಧಿಗಳು ದೂರವಾಗಿ ಮನುಷ್ಯನಲ್ಲಿ ಶಾಂತಿ-ನೆಮ್ಮದಿ ನೆಲೆಯಾಗುತ್ತ ದೆ ಎಂದು ಭಕ್ತರೆಲ್ಲರನ್ನು ಹರಸಿದರು.

Advertisement

ಇದನ್ನೂ ಓದಿ:“ಮಕ್ಕಳಿಗ್ಯಾಕವ್ವ ಮದುವೆ’ ಬೀದಿ ನಾಟಕ ಪ್ರದರ್ಶನ

ಭಜನೆಯಲ್ಲಿ ಬಾಲಾಜಿ ಭಜನ ಮಂಡಳಿ, ಕಟೀಲೇಶ್ವರಿ ಭಜನ ಮಂಡಳಿ ಭಾಯಂದರ್‌, ಹನುಮಾನ್‌ ಭಜನ ಮಂಡಳಿ ದಹಿಸರ್‌, ಕರ್ನಾಟಕ ಮಹಾಮಂಡಲ ಭಾಯಂದರ್‌, ಶ್ರೀ ರಜಕ ಭಜನ ಮಂಡಳಿ, ವಿಟuಲ ಭಜನ ಮಂಡಳಿ ಭಾರತಿ ಪಾರ್ಕ್‌ ಇನ್ನಿತರ ಭಜನ ಮಂಡಳಿಗಳು ಭಜನೆಯಲ್ಲಿ ಪಾಲ್ಗೊಂಡಿದ್ದವು.

ನೂರಾರು ಸಂಖ್ಯೆಯ ಭಕ್ತರು ಹಾಜರಿದ್ದರು. ಬಾಲಾಜಿ ಭಜನ ಮಂಡಳಿಯವರು ಇತರ ಭಜನ ಮಂಡಳಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಕರಮಚಂದ ಗೌಡ ಅವರು ಸಹಕರಿಸಿದರು. ರಾತ್ರಿ ಮಹಾ ಮಂಗಳಾರತಿಯೊಂದಿಗೆ ಭಜನ ಮಹೋತ್ಸವ ಮುಕ್ತಾ ಯಗೊಂಡ ಬಳಿಕ ಸನ್ನಿಧಿಯಲ್ಲಿ ಮಹಾಪೂಜೆ, ಹಾಗೂ ಪ್ರಸಾದ ವಿತರಣೆ ನಡೆಯಿತು.

ಚಿತ್ರವರದಿ: ವೈ. ಟಿ. ಶೆಟ್ಟಿ ಹೆಜಮಾಡಿ

Advertisement

Udayavani is now on Telegram. Click here to join our channel and stay updated with the latest news.

Next