Advertisement

ಜಗತ್ತಿನ ಅನಘ್ರ್ಯ ರತ್ನ ಭಗವದ್ಗೀತೆ: ಸ್ವರ್ಣವಲ್ಲಿ ಶ್ರೀ

01:31 PM Dec 12, 2021 | Team Udayavani |

ಯಾದಗಿರಿ: ಜಗತ್ತಿನ ಅನಘ್ರ್ಯ ರತ್ನ ಭಗವದ್ಗೀತೆಯಾಗಿದ್ದು, ವ್ಯಕ್ತಿತ್ವ ವಿಕಸನಕ್ಕೆ ಇದರಷ್ಟು ಪ್ರಖರವಾದ ಮಹಾಗ್ರಂಥ ಬೇರ್ಯಾವುದೂ ಇಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೂಚಿಸಬಲ್ಲ ಅದಮ್ಯ ಶಕ್ತಿ ಇದರಲ್ಲಿದ್ದು, ವಿಶ್ವಕ್ಕೆ ಭಾರತ ಕೊಟ್ಟ ಹೆಮ್ಮೆಯ ಕೊಡುಗೆಯಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

Advertisement

ಇಲ್ಲಿನ ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಗೀತಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಭಗವದ್ಗೀತೆಯಲ್ಲಿನ 18 ಅಧ್ಯಾಯಗಳ ಎಲ್ಲ 700 ಶ್ಲೋಕಗಳಲ್ಲಿನ ಅಂಶಗಳು ವ್ಯಕ್ತಿಗೆ ಶ್ರೇಷ್ಠತೆಯತ್ತ ಒಯ್ಯುವ ಜತೆಗೆ ಉತ್ತಮ ಬದುಕಿಗೆ ಸರಳ ಮಾರ್ಗ ತೋರಿಸುತ್ತವೆ. ಇದು ಮನುಕುಲ ಉದ್ಧಾರದ ಮೌಲಿಕ ಗ್ರಂಥ ಎಂದರು.

ಭಗವಂತನ ನಿರಂತರ ಸಂಬಂಧವೇ ಜ್ಞಾನ. ಅಂತಹ ಜ್ಞಾನವನ್ನು ನಾವು ಗೀತೆಯಿಂದ ಪಡೆದುಕೊಳ್ಳಬಹುದಾಗಿದೆ. ಭಗವದ್ಗೀತೆ ಕೆಲವರಿಗಷ್ಟೇ ಸೀಮಿತ ಎಂದು ಹೇಳುತ್ತ ಜನರನ್ನು ಜ್ಞಾನ ಭಂಡಾರದ ಮಹಾ ಗ್ರಂಥದಿಂದ ವ್ಯವಸ್ಥಿತವಾಗಿ ದೂರವಿಡುತ್ತಿದ್ದಾರೆ. ಜನತೆ ವಾಸ್ತವ ಅರಿತು ಓದಬೇಕು. ಅಧ್ಯಾತ್ಮ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಸೇರಿ ಇದರಲ್ಲಿನ ನಾನಾ ಅಂಶಗಳು ಮನುಷ್ಯನಿಗೆ ಅಗಾಧ ಸಾಧನೆಯತ್ತ ಒಯ್ಯುತ್ತವೆ ಎಂದು ಪ್ರತಿಪಾದಿಸಿದರು.

ಲಯ ಬದ್ಧ, ವ್ಯಾಕರಣ ಶುದ್ಧವಾಗಿ ಶ್ಲೋಕ ಪಠಿಸುವುದರಿಂದ ಮನಸ್ಸಿನಲ್ಲಿ ಪ್ರಸನ್ನ ಭಾವ ಮೂಡುತ್ತದೆ. ಕೊರೊನಾದಿಂದ ಜನರಲ್ಲಿ ಧೆ„ರ್ಯ ಕಡಿಮೆ ಆಗಿದೆ. ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ. ಈ ಕಾಯಿಲೆ ತಡೆಯಲು ರೋಗ ನಿರೋಧಕ ಶಕ್ತಿ ಮತ್ತು ಮಾನಸಿಕ ಧೈರ್ಯ ಅಗತ್ಯ. ಗೀತೆಯಲ್ಲಿ ಅಭಯದ ಬಗ್ಗೆ ಪ್ರಸ್ತಾಪಿಸಲಾಗಿದೆ. ಭಯವಿಲ್ಲದ ಜೀವನ ಸಾಗಿಸುವುದಕ್ಕೆ ಸ್ಫೂರ್ತಿ ಪ್ರೇರಣೆ ನೀಡುತ್ತದೆ. ಗೀತೆಯಲ್ಲಿ ಇದಕ್ಕೆ ಪರಿಹಾರ ಬೋಧಿಸಲಾಗಿದೆ. ಈಗಿನ ಸ್ಥಿತಿಯಲ್ಲಿ ಮನಸ್ಸನ್ನು ಸದೃಢಗೊಳಿಸುವ ಶಕ್ತಿ ಭಗವದ್ಗೀತೆ ನೀಡುತ್ತದೆ ಎಂದರು. ಸಂಚಾಕಲ ಅನಿಲ ದೇಶಪಾಂಡೆ ಮಾತನಾಡಿದರು.

ಏಕದಂಡಗಿ ಮಠದ ಶ್ರೀನಿವಾಸ ಸ್ವಾಮಿಗಳು, ದಾಸಬಾಳ ಮಠದ ವೀರೇಶ್ವರ ಸ್ವಾಮಿಗಳು, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್‌, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್‌ ತುನ್ನುರು, ಜೆಡಿಎಸ್‌ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ, ರಮೇಶ ದೊಡ್ಮನಿ, ಪ್ರಮುಖರಾದ ವೆಂಕಟರಮಣ ಹೆಗಡೆ, ರವೀಂದ್ರ ಕುಲಕರ್ಣಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next