Advertisement

ಮಸ್ಕ್, ಬೆಜೋಸ್‌ ಸಂಸ್ಥೆಗಳಿಂದ ದೇಶದಲ್ಲಿ ಉಪಗ್ರಹ ನೆಟ್‌ ಸೌಲಭ್ಯ?

12:47 AM Oct 02, 2021 | Team Udayavani |

ಹೊಸದಿಲ್ಲಿ: ಜಗತ್ತಿನ ಅತ್ಯಂತ ಸಿರಿವಂತ ಉದ್ಯಮಿಗಳಾಗಿರುವ ಜೆಫ್ ಬೆಜೋಸ್‌ ಮತ್ತು ಎಲಾನ್‌ ಮಸ್ಕ್ ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಈ ಮೂಲಕ ಸುನಿಲ್‌ ಭಾರತಿ ಮಿತ್ತಲ್‌ ಅವರ ಭಾರ್ತಿ ಏರ್‌ಟೆಲ್‌ ಮತ್ತು ಉದ್ಯಮಿ ಮುಕೇಶ್‌ ಅಂಬಾನಿ ಮಾಲಕತ್ವದ ರಿಲಯನ್ಸ್‌ ಜಿಯೋ ಇಂಟರ್‌ನೆಟ್‌ ಸೇವೆಗೆ ಸವಾಲು ಹಾಕಲು ಸಿದ್ಧತೆಯಲ್ಲಿದ್ದಾರೆ.

Advertisement

ಉದ್ಯಮಿ ಮಸ್ಕ್ ಮಾಲಕತ್ವದ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ನೀಡಲಿರುವ ಸ್ಟಾರ್‌ಲಿಂಕ್‌ ಮತ್ತು ಬೆಜೋಸ್‌ ಮಾಲಕತ್ವದ ಅಮೆಜಾನ್‌ ಕೇಂದ್ರ ದೂರಸಂಪರ್ಕ ಸಚಿವಾಲಯ ಮತ್ತು ಬಾಹ್ಯಾಕಾಶ ಇಲಾಖೆಯ ಜತೆಗೆ ಈಗಾಗಲೇ ಪ್ರತ್ಯೇಕ ಸಮಾಲೋಚನೆಗಳನ್ನು ನಡೆಸಿವೆ.

ಎರಡೂ ಕಂಪೆನಿಗಳು ಇಂಟರ್‌ನೆಟ್‌ ಸೇವೆ ನೀಡಲು ಅನು ಮತಿ ನೀಡುವಂತೆ ಮನವಿ ಸಲ್ಲಿಕೆ ಮಾಡಿಲ್ಲ. ಎರಡೂ ಕಂಪೆನಿ ಗಳ ಪ್ರತಿನಿಧಿಗಳು ಸರಕಾರದ 2 ಸಚಿವಾಲಯಗಳ ಜತೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:ವೃದ್ಧಾಶ್ರಮಗಳಿಗೆ ನೀಡುವ ಅನುದಾನ 15 ಲಕ್ಷ ರೂ.ಗೆ ಏರಿಕೆ: ಸಿಎಂ

ಯುನೈಟೆಡ್‌ ಕಿಂಗ್‌ಡಮ್‌ನನಲ್ಲಿ ಭಾರ್ತಿ ಏರ್‌ಟೆಲ್‌ ಪಾಲು ದಾರಿಕೆ ಹೊಂದಿರುವ “ವನ್‌ ವೆಬ್‌’ ಮುಂದಿನ ವರ್ಷ ದಿಂದ ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ನೀಡುವುದಾಗಿ ಘೋಷಣೆ ಮಾಡಿದೆ. ಅದಕ್ಕೆ ಈಗಾಗಲೇ ಕೇಂದ್ರ ಸರಕಾರದಿಂದ ಪರವಾನಿಗೆಯೂ ಸಿಕ್ಕಿದೆ.

Advertisement

1. ಏನಿದು ವ್ಯವಸ್ಥೆ ?
ಭೂಕಕ್ಷೆಯ ಕೆಳಭಾಗದಲ್ಲಿರುವ ಉಪಗ್ರಹಗಳ ಮೂಲಕ ನೀಡುವ ಇಂಟರ್‌ನೆಟ್‌ ಸಂಪರ್ಕ. ಟಿವಿ ಚಾನೆಲ್‌ ವೀಕ್ಷಣೆಗಾಗಿ ಸದ್ಯ ಇರುವ ಡೈರೆಕ್ಟ್ ಟು ಹೋಮ್‌- ಡಿಟಿಎಚ್‌ ವ್ಯವಸ್ಥೆಯಲ್ಲಿನ ಡಿಶ್‌ ಮೂಲಕ ಟಿವಿ ಚಾನೆಲ್‌ಗ‌ಳನ್ನು ನೋಡುವಂತೆಯೇ ಇಂಟರ್‌ನೆಟ್‌ ಸಂಪರ್ಕ ಪಡೆಯಲಾಗುತ್ತದೆ.

2. ಇಂಟರ್‌ನೆಟ್‌ ವೇಗವೆಷ್ಟು?
ಸಾಮಾನ್ಯವಾಗಿ 50ಎಂಬಿಪಿಎಸ್‌ (ಮೆಗಾ ಬೈಟ್ಸ್‌ ಪರ್‌ ಸೆಕೆಂಡ್‌)ನಿಂದ 150 ಎಂಬಿಪಿಎಸ್‌ ವೇಗ ಇರುತ್ತದೆ. ಅದನ್ನು 300 ಎಂಬಿಪಿಎಸ್‌ಗೆ ವರ್ಧಿಸಲೂ ಅವಕಾಶ ಉಂಟು. ಆದರೆ 5ಜಿ ಸ್ಪೆಕ್ಟ್ರಂನಲ್ಲಿ 50 ಎಂಬಿಪಿಎಸ್‌ನಿಂದ 1ಜಿಬಿಪಿಎಸ್‌ನಷ್ಟು ವೇಗದಲ್ಲಿ ಇಂಟರ್‌ನೆಟ್‌ ಸಿಗಲಿದೆ.
ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ನಲ್ಲಿ ಕೂಡ ಇಂಟರ್‌ನೆಟ್‌ ಸ್ಪೀಡ್‌ ಚೆನ್ನಾಗಿಯೇ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next