Advertisement
ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ಹೇರಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಣ್ಣ ಪುಟ್ಟ ವ್ಯಾಪಾರಿಗಳು, ಬೀದಿಬದಿ ವರ್ತಕರು, ಮಹಿಳೆಯರು ಸೇರಿದಂತೆ ದೊಡ್ಡ ಸಂಖ್ಯೆಯ ಜನರು ಪೇಟಿಎಂ ಮೂಲಕ ವಹಿವಾಟು ನಡೆಸುತ್ತಾರೆ. ಹೀಗಾಗಿ, ನಿಮ್ಮ ಹಣವನ್ನು ರಕ್ಷಿಸಿಕೊಳ್ಳಬೇಕೆಂದರೆ ಮತ್ತು ಹಣಕಾಸು ವಹಿವಾಟಿಗೆ ಯಾವುದೇ ಅಡೆತಡೆಯಾಗದಂತೆ ತಡೆಯಬೇಕೆಂದರೆ ಬಳಕೆದಾರರು ಬೇರೆ ಪಾವತಿ ಸೇವೆಗಳನ್ನು ಆಯ್ಕೆ ಮಾಡುವುದು ಒಳಿತು ಎಂದು ಒಕ್ಕೂಟ ಸಲಹೆ ನೀಡಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಸಮರ್ಪಕ ಗುರುತಿನ ಮಾಹಿತಿಗಳಿಲ್ಲದೇ, ದೃಢೀಕರಣವನ್ನೂ ಮಾಡದೇ ಸಾವಿರಾರು ಖಾತೆಗಳನ್ನು ತೆರೆದಿರುವುದೇ ಈ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ಹೇರಲು ಪ್ರಮುಖ ಕಾರಣ. ಕೆವೈಸಿ ಪ್ರಕ್ರಿಯೆಯನ್ನೂ ನಡೆಸದೇ ಕೋಟಿಗಟ್ಟಲೆ ವಹಿವಾಟು ನಡೆದಿರುವುದು, ಒಂದು ಸಾವಿರಕ್ಕೂ ಅಧಿಕ ಖಾತೆಗಳಿಗೆ ಒಂದೇ ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಿರುವುದು ಬೆಳಕಿಗೆ ಬಂದಿದೆ. ಇವೆಲ್ಲವೂ ಅಕ್ರಮ ಹಣಕಾಸು ವರ್ಗಾವಣೆ ನಡೆದಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿರುವ ಕಾರಣ, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಗೆ ಇ.ಡಿ. ಎಂಟ್ರಿ?
ಪೇಟಿಎಂ ಬ್ಯಾಂಕ್‌ನಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿ ನಿರ್ದೇಶನಾಲಯದ ಗಮನಕ್ಕೆ ತಂದಿದ್ದು, ಅಕ್ರಮ ಹಣಕಾಸು ವರ್ಗಾವಣೆ ಕುರಿತ ಹೊಸ ಆರೋಪಗಳು ಕೇಳಿಬಂದರೆ ಈ ಪ್ರಕರಣದ ವಿಚಾರಣೆಯನ್ನು ಇ.ಡಿ.ಯೇ ಆರಂಭಿಸುವ ಸಾಧ್ಯತೆಯಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.