Advertisement
ಇತ್ತೀಚೆಗೆ 40ಕ್ಕೂ ಅಧಿಕ ವೆಬ್‌ಸೈಟ್‌ಗಳು ಟಿಟಿಡಿ ವೆಬ್‌ಸೈಟ್ ಅನ್ನೇ ಹೋಲುವಂತೆ ವಿನ್ಯಾಸ ಮಾಡಿಕೊಂಡು ಭಕ್ತರನ್ನು ವಂಚಿಸುತ್ತಿವೆ. ಈ ಬಗ್ಗೆ ಭಕ್ತರೂ ದೂರು ನೀಡಿದ್ದಾರೆ. ಆದ್ದರಿಂದ ಟಿಟಿಡಿ ವೆಬ್‌ಸೈಟ್ ಎಂದು ಖಾತ್ರಿಪಡಿಸಿಕೊಂಡ ಬಳಿಕವೇ ಟಿಕೆಟ್ ಹಾಗೂ ವಸತಿ ಕಾಯ್ದಿರಿಸುವ ಪ್ರಕ್ರಿಯೆ ಕೈಗೊಳ್ಳಿ ಎಂದು ಮನವಿ ಮಾಡಿದೆ. ಅದಕ್ಕಾಗಿ ತಮ್ಮ ಅಧಿಕೃತ ವೆಬ್ ಐಡಿಯ ಕುರಿತೂ ಮಾಹಿತಿ ನೀಡಿದೆ. https://tirupatibalaji-ap-gov.org/ಈ ಮಾದರಿಯಲ್ಲಿ ಇರುವ ವೆಬ್‌ಗಳು ನಕಲಿ. https://tirupatibalaji.ap.gov.in/ ಈ ವೆಬ್ ಅಸಲಿ ಎಂದು ಟಿಟಿಡಿ ತಿಳಿಸಿದೆ. ವಂಚನೆಯ ವಿರುದ್ಧ ಟಿಟಿಡಿ ಮಂಡಳಿಯು ತಿರುಮಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ. ಸೈಬರ್ ಸೆಲ್ ವಿಭಾಗ ಇದರ ತನಿಖೆ ಆರಂಭಿಸಿದೆ. Advertisement
ಎಚ್ಚರ: ತಿರುಪತಿ ದರ್ಶನಕ್ಕೆ ಹುಟ್ಟಿಕೊಂಡಿವೆ ನಕಲಿ ವೆಬ್‌ಗಳು!
12:18 AM Apr 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.