Advertisement

70 ವರ್ಷಗಳ ಸಿನಿ ಪ್ರಯಾಣ ಮಾಡಿದ್ದ ಹಾಲಿವುಡ್‌ನ‌ ಹಿರಿಯ ನಟಿ ಬೆಟ್ಟಿ ವೈಟ್‌ ನಿಧನ

08:59 PM Jan 01, 2022 | Team Udayavani |

ವಾಷಿಂಗ್ಟನ್‌: ಹಾಲಿವುಡ್‌ನ‌ಲ್ಲಿ 70 ವರ್ಷಗಳ ಸಿನಿ ಪ್ರಯಾಣ ಮಾಡಿದ್ದ ಹಿರಿಯ ನಟಿ ಬೆಟ್ಟಿ ವೈಟ್‌(99) ಶುಕ್ರವಾರ ನಿಧನರಾಗಿದ್ದಾರೆ. ಬೆಟ್ಟಿ ಅವರು 1930ರಿಂದ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಪ್ರಮುಖವಾಗಿ ಹಾಸ್ಯಮಯ ಪಾತ್ರಗಳ ಮೂಲಕ ಜನರನ್ನು ನಗಿಸುತ್ತಿದ್ದರು.

Advertisement

ಅವರ ಸಾವಿಗೆ ಹಾಲಿವುಡ್‌ ಜೊತೆ ಅಮೆರಿಕ ಸೇನೆಯೂ ಸಂತಾಪ ಸೂಚಿಸಿದೆ. 2ನೇ ಮಹಾಯುದ್ಧದ ಸಮಯದಲ್ಲಿ ಮಹಿಳಾ ಸ್ವಯಂ ಸೇವಕಿಯಾಗಿ ಕೆಲಸ ಮಾಡಿದ್ದ ಬೆಟ್ಟಿ ಅವರ ಫೋಟೋ ಹಂಚಿಕೊಂಡಿರುವ ಅಮೆರಿಕ ಸೇನೆ, ಅವರು ತೆರೆಯ ಹೊರಗೂ ಅದ್ಭುತ ವ್ಯಕ್ತಿಯಾಗಿದ್ದರು ಎಂದಿದೆ.

ಜ.17ರಂದು 100 ವರ್ಷ ಪೂರೈಸಬೇಕಿದ್ದ ಬೆಟ್ಟಿ ಅವರಿಗಾಗಿ ಪೀಪಲ್‌ ಮಾಧ್ಯಮ ಸಂಸ್ಥೆಯ ವಿಶೇಷ ಮ್ಯಾಗಜಿನ್‌ ತಯಾರಿಸಿದ್ದು, ಅದರಲ್ಲಿ ಅವರ ಸಂದರ್ಶನದ ಜೊತೆ, ಮುಖಪುಟದಲ್ಲಿಯೇ “ಬೆಟ್ಟಿ ವೈಟ್‌ ಟರ್ನ್ಸ್ 100′ ಎಂದು ಮುದ್ರಿಸಿತ್ತು. ಈ ಮ್ಯಾಗಜಿನ್‌ ಅವರ ಸಾವಿಗೆ ಕೆಲ ದಿನವಿರುವಾಗಲೇ ಮಾರುಕಟ್ಟೆ ತಲುಪಿದ್ದು, ಇದೀಗ ಸಂಸ್ಥೆ ತಲೆ ತಗ್ಗಿಸುವಂತಾಗಿದೆ.

ಇದನ್ನೂ ಓದಿ : ಮೂಳೂರು : ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ‌ ಸ್ಥಳದಲ್ಲೇ ಸಾವು

Advertisement

Udayavani is now on Telegram. Click here to join our channel and stay updated with the latest news.

Next