Advertisement

ನಿರಂತರ ತರಬೇತಿಯಿಂದ ಉತ್ತಮ ಕ್ರೀಡಾಪಟುವಾಗಲು ಸಾಧ್ಯ: ತ್ಯಾಗಮ್‌ ಹರೇಕಳ

07:01 PM Apr 28, 2023 | Team Udayavani |

ಉಳ್ಳಾಲ: ಕ್ರೀಡೆಯಲ್ಲಿ ಎಲ್ಲರೂ ಸಾಧಕರಾಗಲು ಸಾಧ್ಯವಿಲ್ಲ ಆದರೆ ಉತ್ತಮ, ನಿರಂತರ ತರಬೇತಿಯಿಂದ ಖಂಡಿತವಾಗಿಯೂ
ಅತ್ಯುತ್ತಮ ಕ್ರೀಡಾಪಟುವಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿಗಳು ಮೊದಲು ಯಾವುದೇ ಒಂದು ಕ್ರೀಡೆಯನ್ನು ಆಯ್ಕೆ
ಮಾಡಿ ಕ್ರೀಡೆಯ ಎಲ್ಲ ಕೌಶಲಗಳನ್ನು ತರಬೇತುದಾರರಿಂದ ಕಲಿತುಕೊಂಡು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ
ಮುಂದೊಂದು ದಿನ ಕ್ರೀಡಾ ಸಾಧಕರಾಗಿ ಮೂಡಿಬರಲು ಸಾಧ್ಯ ಎಂದು ಉಳ್ಳಾಲ ತಾಲೂಕು ವಾಲಿಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ತ್ಯಾಗಂ ಹರೇಕಳ ಅಭಿಪ್ರಾಯಪಟ್ಟರು.

Advertisement

ಉಳ್ಳಾಲ ತಾಲೂಕು ವಾಲಿಬಾಲ್‌ ಅಸೋಸಿಯೇಷನ್‌ ವತಿಯಿಂದ ಶಾರೀರಿಕ ಶಿಕ್ಷಣ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಮತ್ತು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಇವುಗಳ ಸಂಯುಕ್ತ ಆಶಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲಾ ಮೈದಾನದಲ್ಲಿ 15 ದಿನಗಳ ಕಾಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ಉಚಿತ ವಾಲಿಬಾಲ್‌ ತರಬೇತಿ ಶಿಬಿರದ ಅಧ್ಯಕ್ಷತೆ
ವಹಿಸಿ ಮಾತನಾಡಿದರು.

ಶಿಬಿರವನ್ನು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಕಡೆಂಜ ಸೋಮಶೇಖರ್‌ ಚೌಟ ಉದ್ಘಾಟಿಸಿದರು ಅತಿಥಿಗಳಾಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾವೂರು  ಮುಖ್ಯೋಪಾಧ್ಯಾಯ ರಾಧಾಕೃಷ್ಣ ರೈ
ಹರೇಕಳ, ಹಿರಿಯ ಶಿಕ್ಷಕಿ ಮೋಹಿನಿ, ಕೈರಂಗಳ ಶಾರದಾ ವಿದ್ಯಾ ಗಣಪತಿ ಕೇಂದ್ರದ ಶಿಕ್ಷಕ ಗಣೇಶ್‌ ಉಪಸ್ಥಿತರಿದ್ದರು.

ಉಳ್ಳಾಲ ತಾಲೂಕು ವಾಲಿಬಾಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ಸುರೇಖಾ ಎಚ್‌. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿ ಅರುಣಾ ಪಿಂಟೊ ಸ್ವಾಗತಿಸಿದರು ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್‌ ಕೋಟೆಕಾರ್‌ ವಂದಿಸಿದರು. ಶಿಬಿರದಲ್ಲಿ ಅಸೋಸಿಯೇಶನ್‌ ಪದಾಧಿಕಾರಿಗಳು, ಸ್ಥಳೀಯ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.

ಸರ್ವತೋಮುಖ ಅಭಿವೃದ್ಧಿ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಅಧ್ಯಕ್ಷ ಡಾ| ನರಸಿಂಹಯ್ಯ ಮಾತನಾಡಿ, ಪ್ರತಿದಿನ ಕೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಕ್ರಿಯಾಶೀಲರಾಗಿರಲು ಸಾಧ್ಯ. ಕ್ರೀಡೆಯಿಂದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಸದೃಢ ದೇಹದಿಂದ ಸದೃಢ ಆರೋಗ್ಯ ಎಂಬಂತೆ, ಉತ್ತಮ ಆರೋಗ್ಯ ವಂತರಾಗಬೇಕಾದರೆ ಕ್ರೀಡೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗಾಗಿ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಬಹಳ ಸಹಕಾರಿಯಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next