Advertisement

“ಭೇಟಿ ಬಚಾವೋ,ಬಿಜೆಪೀಕೇ ಲೋಗೋಂಸೆ ಬಚಾವೋ’: ರಾಹುಲ್‌ ಲೇವಡಿ

04:31 PM Apr 23, 2018 | Team Udayavani |

ಹೊಸದಿಲ್ಲಿ : ದೇಶದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮತ್ತು ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ತನ್ನ ವಾಗ್ಧಾಳಿ ಆರಂಭಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ “ಭೇಟಿ ಬಚಾವೋ,ಬಿಜೆಪೀಕೇ ಲೋಗೋಂಸೆ ಬಚಾವೋ’ ಎಂಬುದು ಮೋದಿ ಅವರ ಹೊಸ ಘೋಷಣೆಯಾಗಿರುತ್ತದೆ ಎಂದು ಲೇವಡಿ ಮಾಡಿದರು. 

Advertisement

ದಿಲ್ಲಿಯ ತಾಲ್‌ಕಟೋರ ಸ್ಟೇಡಿಯಂನಲ್ಲಿ “ಸಂವಿಧಾನ ಉಳಿಸಿ’ ಅಭಿಯಾನದಲ್ಲಿ ಮಾತನಾಡುತ್ತಿದ್ದ ರಾಹುಲ್‌, “ನಮ್ಮ ದೇಶದ ಸಂವಿಧಾನವು ನಮಗೆ ಪ್ರಜಾಸತ್ತೆಯ ಹಲವು ಸಂಘ ಸಂಸ್ಥೆಗಳನ್ನು ಕೊಡುಗೆಯಾಗಿ ನೀಡಿದೆ. ಆದರೆ ಅವೆಲ್ಲಕ್ಕೂ ಬಿಜೆಪಿ ಸರಕಾರ ಆರ್‌ಎಸ್‌ಎಸ್‌ ಸಿದ್ಧಾಂತಿಗಳನ್ನು ನೇಮಿಸುತ್ತಿದೆ. ಮತ್ತು ಆ ಮೂಲಕ ಅವುಗಳನ್ನು ನಾಶಪಡಿಸಲು ಮುಂದಾಗಿದೆ’ ಎಂದು ಹೇಳಿದರು. 

“ಆದರೆ ನಮ್ಮ ಸಂವಿಧಾನವನ್ನು ನಾಶಮಾಡಲು ನಾವು ಬಿಜೆಪಿಗೆ, ಆರ್‌ಎಸ್‌ಎಸ್‌ಗೆ ಬಿಡುವುದಿಲ್ಲ; 2019ರಲ್ಲಿ ದೇಶದ ಜನರು ಮನ್‌ ಕೀ ಬಾತ್‌ ಹೇಳಲಿದ್ದಾರೆ’ ಎಂದು ರಾಹುಲ್‌ ನುಡಿದರು. 

Advertisement

Udayavani is now on Telegram. Click here to join our channel and stay updated with the latest news.

Next