Advertisement
ಭಾರತ ಆಡಿದ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ವಿಶ್ವಕಪ್ ತಂಡ ಅಂತಿಮಗೊಳ್ಳುವ ನಿರೀಕ್ಷೆಯಿತ್ತು. ಆದರೆ ಆ ಸರಣಿಯಿಂದ ವಿಶ್ವಕಪ್ ತಂಡದ ಆಯ್ಕೆ ಇನ್ನು ಜಟಿಲವಾಗಿದ್ದು, ಆಯ್ಕೆ ಸಮಿತಿಯ ಮೇಲೆ ಕೊಂಚ ಮಟ್ಟಿನ ಒತ್ತಡ ಬಿದ್ದಿದೆ. ಹೀಗಾಗಿ ಇವರಿಬ್ಬರ ಹೇಳಿಕೆ ಈ ಸಮಸ್ಯೆಗೆ ಪರಿಹಾರ ನೀಡುವ ಸಾಧ್ಯತೆಗಳಿವೆ.
“4ನೇ ಕ್ರಮಾಂಕದ ಸ್ಥಾನ ತುಂಬಬಲ್ಲ ಆಟಗಾರನೆಂದರೆ ಅದು ರಿಷಬ್ ಪಂತ್ ಮಾತ್ರ. ಪಂತ್ ಓರ್ವ ಶ್ರೇಷ್ಠ ಯುವ ಆಟಗಾರ. ಅವರು ಯಾವುದೇ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಸಿಡಿಯುವ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವುದೇ ಸೂಕ್ತ’ ಎಂದು ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ. ಐಪಿಎಲ್ ಮೂಲಕ ಲಭ್ಯ
“ಭಾರತ ತಂಡದಲ್ಲಿ ಕಾಡುತ್ತಿರುವ 4 ಕ್ರಮಾಂಕದ ಆಟಗಾರ ಐಪಿಎಲ್‌ನಲ್ಲಿ ಸಿಗಬಹುದು. ರಿಷಬ್ ಪಂತ್ ಈ ಸ್ಥಾನಕ್ಕೆ ಸೂಕ್ತ. ಪಂತ್ ಓರ್ವ ಉತ್ತಮ ಆಟಗಾರ. ಆತ ಭವಿಷ್ಯದಲ್ಲಿ ಭಾರತ ತಂಡದ ಆಸ್ತಿಯಾಗಲಿದ್ದಾರೆ ಎಂದು ಗಂಗೂಲಿ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಗಂಗೂಲಿ “ಕೊಹ್ಲಿ ಯಾವುದೇ ಕ್ರಮಾಂಕದಲ್ಲೂ ಆಡಬಹುದು. ಯಾವುದೇ ಕ್ರಮಾಂಕದಲ್ಲಿ ಅವರು ಆಡಿದರೂ ರನ್ ಬಂದೇ ಬರುತ್ತದೆ. ಆದರೆ ಕೊಹ್ಲಿಗೆ 3ನೇ ಕ್ರಮಾಂಕ ನನ್ನ ಆಯ್ಕೆ’ ಎಂದು ಹೇಳಿದ್ದಾರೆ.