Advertisement

ಬೆಣ್ಣಿಹಳ್ಳದಲ್ಲಿನ ತ್ಯಾಜ್ಯ ಸ್ವಚ್ಛತೆ

02:59 PM Apr 10, 2017 | |

ಹುಬ್ಬಳ್ಳಿ: ನವಲಗುಂದ ತಾಲೂಕು ಯಮನೂರಿನ ಬೆಣ್ಣಿ ಹಳ್ಳದಲ್ಲಿ ಭಕ್ತರು ಸ್ನಾನಮಾಡಿ ಬಿಸಾಕಿ ಹೋಗಿದ್ದ ವಸ್ತ್ರ ತ್ಯಾಜ್ಯಗಳನ್ನು ಪ್ರಗತಿಪರ ರೈತ ಹೋರಾಟ ಸಮಿತಿ, ಕಳಸಾ- ಬಂಡೂರಿ ಹೋರಾಟ ಸಂಘಟನೆ, ಎಐಟಿಯುಸಿ ಸೇರಿದಂತೆ ಇನ್ನಿತರೆ ಸಂಘಟನೆಗಳ ಕಾರ್ಯಕರ್ತರು ರವಿವಾರ ಶ್ರಮದಾನ ಮೂಲಕ ತೆರವುಗೊಳಿಸಿ ಹಳ್ಳವನ್ನು ಸ್ವಚ್ಛಗೊಳಿಸಿದರು. 

Advertisement

ಬೆಣ್ಣಿಹಳ್ಳದ ಸುಮಾರು ಎರಡು ಕಿ.ಮೀ. ವರೆಗೂ ಬಿದ್ದಿದ್ದ ತ್ಯಾಜ್ಯ-ಬಟ್ಟೆ ರಾಶಿಗಳನ್ನುಕಾರ್ಯಕರ್ತರು ತೆಗೆದು ಸ್ವಚ್ಛಗೊಳಿಸಿದರು. ಯಮನೂರ ಜಾತ್ರೆಯ ಬಳಿಕ ಮೊದಲ ಬಾರಿಗೆ ನಡೆದ ಸ್ವಚ್ಛತಾ ಕಾರ್ಯಕ್ರಮ ಇದಾಗಿದೆ. ಹಳ್ಳದಲ್ಲಿ ಬಿಸಾಕಿದ್ದ ಬಟ್ಟೆಗಳು, ದೇವರ ಫೋಟೋಗಳು, ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರೆ ತ್ಯಾಜ್ಯಗಳನ್ನು ಸಂಘಟನೆಗಳ ಕಾರ್ಯಕರ್ತರು ಕೂಡಿ ಹಾಕಿದರು.

ನಂತರ ತ್ಯಾಜ್ಯವನ್ನೆಲ್ಲ ಟ್ರಾಕ್ಟರ್‌ ಗಳ ಮೂಲಕ ವಿಲೇವಾರಿ ಮಾಡಲಾಯಿತು. ಜೊತೆಗೆ ಬೆಣ್ಣಿಹಳ್ಳಕ್ಕೆ ಆಗಮಿಸಿದ್ದ ಭಕ್ತರಿಗೆ ಬಟ್ಟೆಗಳನ್ನು ಹಳ್ಳದಲ್ಲಿ ಎಲ್ಲೆಂದರಲ್ಲಿ ಬಿಸಾಕದೆ ನಿಗದಿ ಪಡಿಸಿದ ಸ್ಥಳದಲ್ಲೆ ಒಂದೆಡೆ ಇಡುವಂತೆ, ದೇವರ ಫೋಟೋ, ಪ್ಲಾಸ್ಟಿಕ್‌ ಚೀಲ, ಬಾಟಲಿಗಳನ್ನು ಬಿಸಾಡದೆ ಸ್ವಚ್ಛತೆ ಕಾಪಾಡುವಂತೆ ಕಾರ್ಯಕರ್ತರಿಂದ ತಿಳಿವಳಿಕೆ ನೀಡಲಾಯಿತು. 

ಇದೇ ವೇಳೆ ಸಂಘಟನೆಯ ಕಾರ್ಯಕರ್ತರು ಶಾಸಕ ಎನ್‌.ಎಚ್‌. ಕೋನರಡ್ಡಿ ಅವರಿಗೆ ಕರೆ ಮಾಡಿ ಬೆಣ್ಣಿಹಳ್ಳ ಸ್ವಚ್ಛತೆ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗ್ರಾಪಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸಂಘಟನೆಯ ಮುಖಂಡರು ತಿಳಿಸಿದರು.

ಇದಕ್ಕೂ ಮುನ್ನ ದೊಡ್ಡಹುಣಸಿ ಕಲ್ಮಠದ  ಚನ್ನಬಸವ ಸ್ವಾಮೀಜಿ ಬೆಣ್ಣಿ ಹಳ್ಳಕ್ಕೆ ಪೂಜೆ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ, ಭಾರತದಲ್ಲಿ ಪ್ರತಿ ನದಿ, ಕೆರೆಗಳನ್ನು ದೈವೀಸ್ವರೂಪದಿಂದ ಕಾಣುವ ಸಂಪ್ರದಾಯವಿದೆ. ಇವೆಲ್ಲವಕ್ಕೂ ಗಂಗೆಯಷ್ಟೆ ಮಹತ್ವವಿದೆ. 

Advertisement

ಚಾಂದದೇವರ ಸಮನ್ವಯ ಕೇಂದ್ರವಾದ ಯಮನೂರಿನ ಬೆಣ್ಣಿ ಹಳ್ಳದಲ್ಲಿ ಸ್ನಾನ ಮಾಡಿದರೆ  ಚರ್ಮಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆಂಬ ನಂಬಿಕೆಯಿದೆ. ಆದರೆ ಇಲ್ಲಿಗೆ ಬರುವ ಭಕ್ತರು ಬಟ್ಟೆಯನ್ನು ಇಲ್ಲಿಯೇ ಬೇಕಾಬಿಟ್ಟಿ ಬಿಸಾಕಿ ಹೋಗುವುದು ಸರಿಯಲ್ಲ. ಇಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ.

ವಿವಿಧ ಸಂಘಟನೆಗಳಿಂದ ಹಳ್ಳದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಉತ್ತಮವಾದದ್ದು. ನಮ್ಮ  ಮನಸ್ಸಿನ ಕೊಳೆ ನಿವಾರಿಸಿಕೊಂಡರೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯ. ಬೆಣ್ಣಿಹಳ್ಳಕ್ಕೆ ನಿರಂತರ ಭಕ್ತರು ಆಗಮಿಸುವುದರಿಂದ ಇಲ್ಲಿ ಸ್ವಚ್ಛತಾ ಕಾರ್ಯ ಪ್ರತಿನಿತ್ಯವೂ ಕೈಗೊಳ್ಳಬೇಕು ಎಂದರು. 

ವಿವಿಧ ಸಂಘಟನೆಗಳ ಮುಖಂಡರಾದ ಬಾಬಾಜಾನ ಮುಧೋಳ, ರಾಜಶೇಖರ ಮೆಣಸಿನಕಾಯಿ, ಸಿದ್ದು ತೇಜಿ, ರಮೇಶ ಬೋಸ್ಲೆ, ಬಶೀರ ಮುಧೋಳ, ಮಕೂºಲ ಸಾವಂತನವರ, ಎನ್‌.ಎ. ಖಾಜಿ, ಇಕ್ಬಾಲ್‌ ಬಾಂಬೆವಾಲಾ, ಫಾರೂಕ ಅಬೂನವರ, ಸೂರ್ಯಕಾಂತ ಘೋಡಕೆ, ರಾಜು ಆರೋಗ್ಯಸ್ವಾಮಿ, ನೀಲಪ್ಪ ಸುಲ್ತಾನಪುರ, ರμàಕ ಬಳೆಪಸಾರ, ನಝೀರ ರೋಣ, ಬಸವರಾಜ ಕಾಂಬಳೆ, ಮಹಾಂತೇಶ ಕುಲಕರ್ಣಿ, ರುದ್ರಗೌಡ ಸರನಾಡಗೌಡ, ಮಹಾಂತೇಶ ಮಠದ, ಝಾಕೀರ ಹುಸೇನ, ಇಮಾಮಸಾಬ ನವಲಗುಂದ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next