ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಜನಪದವುನಲ್ಲಿ ಎರಡು ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ಸಹಿತ 33,500 ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಜು. 23ರಂದು ಬೆಳಕಿಗೆ ಬಂದಿದೆ.
ಬೆಂಜನಪದವಿನ ವಾಣಿಜ್ಯ ಸಂಕೀರ್ಣವೊಂದರಲ್ಲಿದ್ದ ದಿನಸಿ, ಜವಳಿ-ಫ್ಯಾನ್ಸಿ ಅಂಗಡಿಗಳ ಶಟರ್‌ನ್ನು ಕಬ್ಬಿಣದ ರಾಡ್ ಮೂಲಕ ತೆರೆದು ಕಳ್ಳರು ಒಳ ನುಗ್ಗಿದ್ದಾರೆ.
ದಿನಸಿ ಅಂಗಡಿಯಲ್ಲಿದ್ದ ಬಿಸ್ಕೆಟ್, ಸಿಗರೇಟ್ ಪ್ಯಾಕೆಟ್, ಡ್ರಾವರ್‌ನ ಬೀಗ ಮುರಿದು 1500 ರೂ. ನಗದು, ಜವಳಿ ಅಂಗಡಿಯ ಶಟರಿನ ಬೀಗ ಮುರಿದು ಸುಮಾರು 10 ಸಾವಿರ ರೂ.ಮೌಲ್ಯದ ಶರ್ಟ್, ಜೀನ್ಸ್ ಪ್ಯಾಂಟ್, 5 ಸಾವಿರ ರೂ.ಮೌಲ್ಯದ ಚಪ್ಪಲಿ, ಕ್ಯಾಶ್ ಡ್ರಾವರ್‌ನಲ್ಲಿದ್ದ 3500 ರೂ, ಕಾಣಿಕೆ ಡಬ್ಬದಲ್ಲಿದ್ದ 10 ಸಾವಿರ ರೂ. ನಗದು, ಜತೆಗೆ ಸಂಕೀರ್ಣದ ಸ್ಟಾಕ್ ರೂಮ್‌ನ ಶಟರಿನ ಬೀಗ ಮುರಿದು ಒಂದು ಪೈಂಟ್ ಡಬ್ಬವನ್ನು ಕಳವು ಮಾಡಿದ್ದಾರೆ.
ಪ್ರಕರಣದ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.