Advertisement

ಬೆಂಗಳೂರು ಮಳೆ: ತೇಲಿದ ಕಾರುಗಳು, ಟ್ರ್ಯಾಕ್ಟರ್‌ ಏರಿದ ಉನ್ನತ ಅಧಿಕಾರಿಗಳು

07:06 PM Sep 07, 2022 | Team Udayavani |

ಬೆಂಗಳೂರು: ಉತ್ತರ ಬೆಂಗಳೂರಿನ ನೆಲೆಸಿರುವ ಕೆಲವು ಉನ್ನತ ವ್ಯಾಪಾರ ಅಧಿಕಾರಿಗಳು ತಮ್ಮ ಪ್ರದೇಶದಲ್ಲಿ ಈ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಎರಡು ದಿನಗಳ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಹಲವಾರು ಉದ್ಯಮಿಗಳು ತಮ್ಮ ಸ್ವಂತ ಮನೆಗಳಲ್ಲಿ ಸಿಲುಕಿಕೊಂಡರು, ನಗರದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಐಟಿ ಕಾರಿಡಾರ್ ರಸ್ತೆಗಳಲ್ಲಿ ಜನ ಜೀವನವನ್ನು ಸ್ತಬ್ದಗೊಳಿಸಿತ್ತು.

Advertisement

ನಾಗವಾರದ ಸಮೀಪವಿರುವ ಕಣ್ಮನ ಸೆಳೆಯುವ ಪ್ರದೇಶವು ಪ್ರವಾಹದ ಸಮಯದಲ್ಲಿ ನಾಗವಾರ ಕೆರೆಯಾಗಿ ಮಾರ್ಪಟ್ಟಿತು.ಇಲ್ಲಿ ಬಿಲಿಯನೇರ್‌ಗಳ ವಿಲ್ಲಾದ ಆರಂಭಿಕ ಬೆಲೆ ಕನಿಷ್ಠ 10 ಕೋಟಿ ರೂ.ಆಗಿದೆ. ಅತ್ಯಾಧುನಿಕ ಕಾರುಗಳು ಮುಳುಗಿದವು, ಮನೆಯ ಸಾಮಾನುಗಳು ಕೊಚ್ಚಿಕೊಂಡು ಹೋದವು ಮತ್ತು ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಐಷಾರಾಮಿ ಪ್ರದೇಶದ ನಿವಾಸಿಗಳು ಕುಟುಂಬಗಳೊಂದಿಗೆ ಟ್ರ್ಯಾಕ್ಟರ್ ಮತ್ತು ದೋಣಿಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕಾಯಿತು.

ನಿರ್ಮಾಣ ಉದ್ಯಮ ಸಂಸ್ಥೆಯ ಸಿಇಒ ವಿನೋದ್ ಕೌಶಿಕ್ ಅವರು ತಮ್ಮ ಕುಟುಂಬದೊಂದಿಗೆ ಟ್ರ್ಯಾಕ್ಟರ್‌ನಲ್ಲಿ ತಮ್ಮ ಮನೆಯನ್ನು ಖಾಲಿ ಮಾಡಬೇಕಾಯಿತು. ಪರ್ಪಲ್‌ಫ್ರಂಟ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಮತ್ತು ಸಿಇಒ ಮೀನಾ ಗಿರಿಸಬಲ್ಲಾಳ ಅವರು ಸ್ಥಳಾಂತರಗೊಂಡವರಲ್ಲಿ ಸೇರಿದ್ದಾರೆ. ಚರಂಡಿಯ ನೀರು ಅವರ ಮನೆಗಳಿಗೆ ನುಗ್ಗಿದ್ದರಿಂದ ಸಂಪೂರ್ಣ ಮನೆ ಜಲಾವೃತವಾಗಿತ್ತು.

ತೊಂದರೆಯು ಇಲ್ಲಿಗೇ ಸೀಮಿತವಾಗಿರಲಿಲ್ಲ. ಅನೇಕ ಉದ್ಯಮಿಗಳ, ಉನ್ನತ ಹುದ್ದೆ ಹೊಂದಿದವರ ಮನೆಗಳು ಜಲಾವೃತಗೊಂಡವು, ಕಾರುಗಳು ಮತ್ತು ವಾಹನಗಳು ಮುಳುಗಿದವು, ಮತ್ತು ಜನರು ತಮ್ಮ ಮನೆಗಳಿಗೆ ನೀರು ನುಗ್ಗಿದ್ದರಿಂದ ತಮ್ಮ ವಸ್ತುಗಳನ್ನು ಬಿಟ್ಟು ಓಡಿಹೋಗಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next