Advertisement

Bengaluru: ʼರಾಹುಲ್‌ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್‌ ವಿರುದ್ಧ ಕೇಸ್‌

12:51 PM Sep 20, 2024 | Team Udayavani |

ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಉಗ್ರ ಎಂದು ನಿಂದಿಸಿರುವ ಕೇಂದ್ರ ರೈಲ್ವೆ ಮತ್ತು ಆಹಾರ ಸರಬರಾಜು ರಾಜ್ಯ ಖಾತೆ ಸಚಿವ ರವನೀತ್‌ ಸಿಂಗ್‌ ಬಿಟ್ಟು ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್ ಐಆರ್‌ ದಾಖಲಾಗಿದೆ.

Advertisement

ವಿಜಯನಗರದ ನಿವಾಸಿ, ವಕೀಲ ಎಂ.ವಿ.ರವೀಂದ್ರ ಎಂಬುವರು ನೀಡಿದ ದೂರು ಆಧರಿಸಿ ಕೇಂದ್ರ ಸಚಿವ ರವನೀತ್‌ ಸಿಂಗ್‌ ವಿರುದ್ಧ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ಧಾರೆ.

ಸೆ.15ರಂದು ಬಿಹಾರದ ಬಾಗಲಪುರದಲ್ಲಿ ವಂದೇ ಭಾರತ್‌ ರೈಲು ಉದ್ಘಾಟನೆ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವರು, ರಾಹುಲ್‌ ಗಾಂಧಿ ಮುಸ್ಲಿಮರನ್ನು ಓಲೈಕೆ ಮಾಡುತ್ತಾರೆ. ಮುಸ್ಲಿಮರು ಕೆಲಸಕ್ಕೆ ಬರುವುದಿಲ್ಲ. ಗಡಿಯಲ್ಲಿ ಸಿಖ್‌ರು ದೇಶವನ್ನು ಕಾಪಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಕುಟುಂಬಕ್ಕೆ ಸಿಖ್‌ರನ್ನು ಕಂಡರೇ ಆಗುವುದಿಲ್ಲ. ಗಾಂಧಿ ಕುಟುಂಬದಿಂದ ಸಿಖ್‌ರ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ರಾಹುಲ್‌ ಗಾಂಧಿ ಈ ದೇಶಕ್ಕೆ ದೊಡ್ಡ ಶತ್ರು ಹಾಗೂ ಭಯೋತ್ಪಾದಕರಾಗಿದ್ದಾರೆ ಎಂದು ನಿಂದಿಸಿದ್ದರು. ಅದರಿಂದ ಸಮಾಜದಲ್ಲಿ ಕೋಮು ಗಲಭೆ ಉಂಟಾಗುತ್ತದೆ. ಹೀಗಾಗಿ ಕೇಂದ್ರ ಸಚಿವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ರವೀಂದ್ರ ದೂರಿನಲ್ಲಿ ಆರೋಪಿಸಿದ್ದಾರೆ. ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next