Advertisement
ಅ. 21ರಿಂದ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅ. 20ರ ವರೆಗೆ ಲಘು ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳೂ ಇವೆ.
ಕೇರಳದಲ್ಲಿ ಭಾರೀ ಮಳೆಯಿಂದಾಗಿ ಶಬರಿಮಲೆ ದೇಗುಲಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಈಗಾಗಲೇ ಹೊರಟು ನೀಲಕ್ಕಲ್‌ಗೆ ತೆರಳಿರುವ ಭಕ್ತರು ಕೇರಳ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಪಾ ನದಿ ಉಕ್ಕಿ ಹರಿಯುತ್ತಿದ್ದು, ಹೀಗಾಗಿ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಿದ್ದೇವೆ ಎಂದು ಸರಕಾರ ಹೇಳಿದೆ. ಇದನ್ನೂ ಓದಿ:4ಜಿ ಡೌನ್ ಲೋಡ್ ಸ್ಪೀಡ್ ಜಿಯೋ ಮುಂದೆ
Related Articles
ಅ. 20ರ ವರೆಗೆ ಕೇರಳದ ಹಲವಾರು ಭಾಗಗಳಿಗೆ ಎಲ್ಲೋ ಅಲರ್ಟ್ ಮುಂದುವರಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲ ಅಣೆಕಟ್ಟುಗಳಲ್ಲಿ ಅಧಿಕ ನೀರು ಸಂಗ್ರಹವಾಗುತ್ತಿದೆ. ಹಲವು ಅಣೆಕಟ್ಟುಗಳು ಮತ್ತು ಕೆಳಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ ಇಡುಕ್ಕಿ ಡ್ಯಾಂನ ಎರಡು ಗೇಟ್ ತೆರೆಯಲಾಗುವುದು ಎಂದು ಸರಕಾರ ಹೇಳಿದೆ. ಕೇರಳದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿದೆ. ಭೂಕುಸಿತಗಳಿಂದಾಗಿ 22 ಮಂದಿ ಸಾವನ್ನಪ್ಪಿದ್ದಾರೆ.
Advertisement