Advertisement
ನೆರೆದಿದ್ದ ಅಸಂಖ್ಯಾತ ಭಕ್ತಸಮೂಹ ಕರಗದ ವೈಭವ ವನ್ನು ಕಣ್ತುಂಬಿಕೊಂಡಿತು. ಕರಗದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಭಜನೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು. ರಾತ್ರಿಯಿಡೀ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಸದ್ದು ಮೊಳಗಿದವು.
Related Articles
Advertisement
ಗೊಲ್ಲರಪೇಟೆ, ತಿಗಳರಪೇಟೆಗ ಕುಲಬಾಂಧವರ ಮನೆಗಳಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿತು. ಹಾಲು ಬೀದಿ, ಕಬ್ಬನ್ ಪೇಟೆ ಮೂಲ ಸುಣಕಲ್ ಪೇಟೆ ಮಾರ್ಗವಾಗಿ ಕುಲ ಪುರೋಹಿತರ ಮನೆಗಳಲ್ಲಿ ಪೂಜಾದಿಗಳನ್ನು ಸ್ವೀಕರಿಸಿತು. ನರಸಿಂಹ ಜೋಯಿಸ್ ಗಲ್ಲಿ ಮೂಲಕ ಹಾದು ದೇವಾಲಯ ಸೇರಿತು. ಇದೇ ವೇಳೆ ಭಾವೈಕ್ಯತೆಯ ಸಂಗಮವಾದ ಅರಳೇಪೇಟೆಯ “ಮಸ್ತಾನ್ ಸಾಬ್ ದರ್ಗಾ’ ಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿ ನಂತರ ಕರಗ ಉತ್ಸವ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಶಾಸ್ತ್ರಬದ್ಧವಾಗಿ ನಡೆಯಿತು.
ವಿವಿಧೆಡೆಯಿಂದ ಬಂದ ಭಕ್ತರ ದಂಡು: ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಕರಗ ಕರ್ನಾಟಕ ಮಾತ್ರವಲ್ಲ ಹೊರರಾಜ್ಯಗಳಲ್ಲಿ ಖ್ಯಾತಿ ಪಡೆದಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಬೆಂಗಳೂರು ಕರಗ ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ , ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ , ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ನೆರದಿದ್ದರು.
ಧರ್ಮರಾಯಸ್ವಾಮಿ ದೇಗುಲಕ್ಕೆ ಸಿಎಂ ಭೇಟಿ
ಐತಿಹಾಸಿಕ ಬೆಂಗಳೂರು ಕರಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಮಂಗಳವಾರ ರಾತ್ರಿ ತಿಗಳರಪೇಟೆಯ ಶ್ರೀಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತೆಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಕರಗ ಉತ್ಸವದ ಬಗ್ಗೆ ಸಿದ್ಧತೆ ಕುರಿತು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ಮಾಹಿತಿ ಪಡೆದರು. ಈ ವೇಳೆ ಬಿಡಿಎ ಅಧ್ಯಕ್ಷ ಹ್ಯಾರೀಸ್ ಮತ್ತಿತರಿದ್ದರು.
3 ಸಾವಿರ ಕೆ.ಜಿ. ಸೇಲಂ ಮಲ್ಲಿಗೆ ಮೊಗ್ಗು
ಐತಿಹಾಸಿಕ ಕರಗಕ್ಕೆ ಸೇಲಂ ಮಲ್ಲಿಗೆ ಹೂವು ಬಳಕೆ ಮಾಡಲಾಗಿತ್ತು. 4 ಸಾವಿರ ಮಲ್ಲಿಗೆ ಹಾರಗಳು ಸೇರಿದಂತೆ 3 ಸಾವಿರ ಕೆ.ಜಿ. ಸೇಲಂ ಮಲ್ಲಿಗೆ ಹೂವು ಬಳಸಲಾಯಿತು. ಕರಗದಲ್ಲಿ ಪಾಲ್ಗೊಳ್ಳುವ ಸಹಸ್ರಾರು ವೀರಗಾರರಿಗೆ ಕರಗವಸ್ತ್ರ ಮತ್ತು ಪೇಟವನ್ನು ವಿತರಿಸಲಾಯಿತು. ದೀಕ್ಷೆ ಪಡೆದ ಸಾವಿರಾರು ವೀರಕುಮಾರರಿಗೆ ದೀಕ್ಷಾ ಖಡ್ಗಗಳನ್ನೂ ಉಚಿತವಾಗಿ ನೀಡಲಾಯಿತು.