ಬೆಂಗಳೂರು: ಬೆಂಗಳೂರು ಸುರಕ್ಷಿತ ನಗರವಲ್ಲ ಎಂಬ ಆರೋಪದ ಬೆನ್ನಲ್ಲೇ ಹೆಮ್ಮೆಯ ಸಂಗತಿಯೊಂದು ಹೊರಬಿದ್ದಿದೆ… ಪ್ರಪಂಚದ 10 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ ಅಲಂಕರಿಸುವ ಮೂಲಕ ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿಯ ಅಮೆರಿಕದ ಸಿಲಿಕಾನ್ ಸಿಟಿಯನ್ನು ಹಿಂದಿಕ್ಕಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಜೆಎಲ್ಎಲ್ ಸಿಟಿ ಮೊಮೆಂಟಂ ಇಂಡೆಕ್ಸ್ ಪ್ರಕಾರ, ವಿಶ್ವದ ಟಾಪ್ 30 ಡೈನಾಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ ವನ್ ಸ್ಥಾನ ಪಡೆದಿದ್ದರೆ, ನೆರೆಯ ತಮಿಳುನಾಡು 17ನೇ ಸ್ಥಾನದಲ್ಲಿದೆ.
ಹೈದರಾಬಾದ್ 5ನೇ ಸ್ಥಾನದಲ್ಲಿದ್ದು, ಪುಣೆ 13, ದೆಹಲಿ 23 ಹಾಗೂ ಮುಂಬೈ 25ನೇ ಸ್ಥಾನ ಪಡೆದಿದೆ. ವಿಶ್ವದ ವೇಗದ ಬದಲಾವಣೆ ಕಾಣುತ್ತಿರುವ ನಗರಗಳ ಪಟ್ಟಿಯಲ್ಲಿಯೂ ಬೆಂಗಳೂರು ಚೀನಾವನ್ನು ಹಿಂದಿಕ್ಕಿದೆ ಎಂದು ಡಬ್ಲ್ಯುಎಫ್ (ವರ್ಲ್ಡ್ ಎಕೋನಾಮಿಕ್ ಫಾರಂ) ಟ್ವೀಟ್ ಮಾಡಿದೆ. ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿನ ಆರ್ಥಿಕ ಬೆಳವಣಿಗೆಯ ದರ, ನಗರೀಕರಣ, ಮೂಲಸೌಲಭ್ಯ ಸುಧಾರಣೆ ಕ್ಷೇತ್ರದಲ್ಲಿ ಅಗಾಧ ಹೂಡಿಕೆ, ಇಲ್ಲಿರುವ ನವೋದ್ಯಮಗಳು ಮತ್ತು ನಗರದಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಪೋರೇಟ್ ಕಚೇರಿಗಳಿಗೆ ಸ್ಥಳಾವಕಾಶ ಲಭ್ಯವಾಗುತ್ತಿರುವ ಅಂಶಗಳನ್ನು ಪರಿಗಣಿಸುವ ಮೂಲಕ ಉದ್ಯಾನನಗರಿ ನಂ.1 ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವರದಿ ವಿವರಿಸಿದೆ.
ವಿಯೆಟ್ನಾಂನ ಹೊ ಚಿ ಮಿನಾ ನಗರ ನಂ 2, ಅಮೆರಿಕದ ಸಿಲಿಕಾನ್ ವ್ಯಾಲಿ ನಂ 3, ಚೀನಾದ ಶಾಂಘೈ ನಂ 4, ಬ್ರಿಟನ್ ನ ಲಂಡನ್ ನಂ 6, ಅಮೆರಿಕದ ಆಸ್ಟಿನ್ ನಂ7, ವಿಯೆಟ್ನಾಂನ ಹನೋಯ್ ನಂ8, ಬೋಸ್ಟನ್ ನಂ9 ಹಾಗೂ ಕೇನ್ಯಾದ ನೈರೋಬಿ ನಂ 10, ಬೀಜಿಂಗ್ ನಂ 15,