ಬೆಂಗಳೂರು: ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ ಎಂದು ನಂಬಿಸಿ ಕೋಟ್ಯಂತರ ರೂ. ಪಡೆದು ವಂಚಿಸಿದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರದ ಟಿ.ಮಂಜಪ್ಪ (47) ಮತ್ತು ಆತನ ಸ್ನೇಹಿತ ವಿರೂಪಾಕ್ಷಪ್ಪ(52) ಬಂಧಿತರು.
ಆರೋಪಿಗಳು ಪಶ್ಚಿಮ ಬಂಗಾಳ ಮೂಲದ ಉದ್ಯಮಿ ಪ್ರದೀಪ್ತ ಭಾಸ್ಕರ್ ಪೌಲ್ ಎಂಬುವರ ಪುತ್ರಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 1.57 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ದೂರುದಾರ ಪ್ರದೀಪ್ತ ಭಾಸ್ಕರ್ ಪೌಲ್ ಪುತ್ರಿ ವೈಟ್‌ಫೀಲ್ಡ್ ಬಳಿಯಿರುವ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, 2018ರಲ್ಲಿ ಉತ್ತೀರ್ಣರಾಗಿದ್ದಾರೆ. ಇದೇ ವೇಳೆ ಸ್ನೇಹಿತ ವಿರೂಪಾಕ್ಷಪ್ಪಗೆ ತನ್ನ ಪುತ್ರಿ ಮಧುಶ್ರೀಗೆ ಪಿಜಿ ಕೋರ್ಸ್ ಮಾಡಲು ಕಾಲೇಜಿನಲ್ಲಿ ಸೀಟ್‌ಗಾಗಿ ಕೊಡಿಸುತ್ತೇನೆ ಎಂದು ಹೇಳಿ ಕೊಂಡಿದ್ದರು. ಇದನ್ನು ನಂಬಿದ ದೂರುದಾರರು 2022ರ ಜೂನ್ 21 ರಂದು ಬ್ಯಾಡರಹಳ್ಳಿಯಲ್ಲಿರುವ ತಮ್ಮ ಪರಿಚಯಸ್ಥರ ಕಚೇರಿಗೆ ಇಬ್ಬರು ಆರೋಪಿಗಳನ್ನು ಕರೆಸಿಕೊಂಡಿದ್ದಾರೆ. ಬಳಿಕ ಇಲ್ಲಿಯೇ ವ್ಯವಹಾರ ಮಾಡಿದ್ದು, ಪ್ರತಿಷ್ಠಿತ ಕಾಲೇಜೊಂದರಲ್ಲಿ ಮ್ಯಾನೇಜ್ ಮೆಂಟ್ ಸೀಟು ಕೊಡಿಸುತ್ತೇನೆ ಎಂದು ಮಂಜಪ್ಪ 1.30 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಆಗ ವಿರೂಪಾಕ್ಷಪ್ಪ ಕೂಡ ಈ ಹಣಕ್ಕೆ ತಾನೂ ಗ್ಯಾರಂಟಿ ಎಂದು ನಂಬಿಸಿದ್ದಾನೆ. ಬಳಿಕ ದೂರುದಾರರು ಆರೋಪಿ ಮಂಜಪ್ಪ 1.57 ಕೋಟಿ ರೂ.ಪಡೆದುಕೊಂಡು, ಪುತ್ರಿಗೆ ಮೆಡಿಕಲ್ ಸೀಟ್ ಕೊಡಿಸಿಲ್ಲ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖೀಸಿದ್ದರು.