Advertisement
ಮುರುಗೇಶ್ ಪಾಳ್ಯದ ನಿವಾಸಿ ಮಂಜು ನಾಯ್ಕ್ (42) ಕೊಲೆ ಯಾದ ತೃತೀಯ ಲಿಂಗಿ. ಪ್ರೇಮಾ (51) ಬಂಧಿತೆ.
Related Articles
Advertisement
20 ವರ್ಷಗಳಿಂದ ತೃತೀಯ ಲಿಂಗಿ ಜತೆ ವಾಸ: ಪ್ರೇಮಾ ಪತಿ ಸುಮಾರು ವರ್ಷಗಳ ಹಿಂದೆ ಸಾವನ್ನ ಪ್ಪಿದ್ದರು. ಆ ನಂತರ ಪ್ರೇಮಾ ತೃತೀಯ ಲಿಂಗಿ ಮಂಜು ನಾಯ್ಕ್ ಜೊತೆ ಸುಮಾರು 20 ವರ್ಷಗಳಿಂದ ಬೆಂಗಳೂರಿನ ಮುರುಗೇಶ್ ಪಾಳ್ಯದ ಶ್ರೀರಾಮ ನಗರಿಯ ಮನೆಯೊಂದರಲ್ಲಿ ಜೊತೆಗೆ ವಾಸವಾಗಿದ್ದಳು. ಏ.26ರಂದು ರಾತ್ರಿ ನಮ್ಮಿಬ್ಬರ ನಡುವೆ ಜಗಳವಾಗಿ ಮಂಜು ನಾಯ್ಕ್ ಚಾಕುವಿನಿಂದ ನನ್ನನ್ನು ಸಾಯಿಸಲು ಬಂದಾಗ ನಾನು ಟವಲ್‌ನಿಂದ ಮಂಜು ನಾಯ್ಕ್ ಕುತ್ತಿಗೆ ಬಿಗಿದಿದ್ದೆ. ಆ ವೇಳೆ ಮಂಜು ನಾಯ್ಕ್ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಪ್ರೇಮಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಪ್ರೇಮಾಳನ್ನು ಮೇ 8 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಚೀಟಿ ಹಣ ಕೇಳಿದ್ದಕ್ಕೆ ಕೊಲೆ? : ಮಂಜು ನಾಯ್ಕ ಕಂಪನಿಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವೆ ಆಗಾಗ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಮಂಜು ನಾಯ್ಕ್ ಹಾಕಿದ್ದ ಚೀಟಿ ಹಣವನ್ನು ಕೊಡುವಂತೆ ಪ್ರೇಮಾ ಕೇಳಿದ್ದಳು. ಏ.26ರಂದು ಮದ್ಯದ ಅಮಲಿನಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಆ ವೇಳೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದ ಮಂಜು ನಾಯ್ಕ್ ನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರೇಮಾ ಟವಲ್‌ನಿಂದ ಮಂಜು ನಾಯ್ಕ್ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.