Advertisement

ಬೆಂಗಳೂರಿನಲ್ಲಿರುವ ವಿರಾಟ್‌ ಕೊಹ್ಲಿ ಮಾಲೀಕತ್ವದ ಪಬ್‌ ಮೇಲೆ FIR ದಾಖಲು: ಆಗಿದ್ದೇನು?

11:23 AM Jul 09, 2024 | Team Udayavani |

ಬೆಂಗಳೂರು: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮಾಲೀಕತ್ವದ ಪಬ್‌ ಮೇಲೆ ಪೊಲೀಸರು ಎಫ್‌ ಐಆರ್‌ ದಾಖಲಿಸಿರುವ ಘಟನೆ ನಡೆದಿದೆ.

Advertisement

ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ  ಒನ್ 8 ಕಮ್ಯೂನ್ ಪಬ್ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಜು.6 ರಂದು ಮಧ್ಯರಾತ್ರಿ 1:30ರವರೆಗೆ ಪಬ್‌ ತೆರದಿತ್ತು. 1ಗಂಟೆಯವರೆಗೆ ಮಾತ್ರ ಪಬ್‌ ತೆರವಿಗೆ ಅವಕಾಶ ನೀಡಲಾಗಿತ್ತು. ಅವಧಿಗೂ ಮೀರಿ ಪಬ್‌ ತೆರೆದಿದ್ದ ಬಗ್ಗೆ, ಜೋರಾಗಿ ಮ್ಯೂಸಿಕ್‌ ಕೇಳಿ ಬರುತ್ತಿದ್ದರಿಂದ ಗಸ್ತಿನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಪಬ್ ಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಅನೇಕ ಗ್ರಾಹಕರು ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅವಧಿಗೂ ಮೀರಿ ಪಬ್‌ ಓಪನ್‌ ಮಾಡಿದ್ದರಿಂದ ಪೊಲೀಸರು ಎಫ್‌ ಐಆರ್‌ ದಾಖಲಿಸಿದ್ದಾರೆ.   ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿರಾಟ್ ಕೊಹ್ಲಿ ಅವರ ಒನ್ 8 ಕಮ್ಯೂನ್ ದೆಹಲಿ, ಮುಂಬೈ, ಪುಣೆ ಮತ್ತು ಕೋಲ್ಕತ್ತಾದಂತಹ ಇತರ ಮೆಟ್ರೋ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರು ಶಾಖೆಯನ್ನು ಪ್ರಾರಂಭಿಸಲಾಗಿತ್ತು.

Advertisement

ಕಳೆದ ವರ್ಷ ಇದೇ ಪಬ್‌ ನ ಮುಂಬೈ ಶಾಖೆಯಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಪಂಚೆ ಧರಿಸಿಕೊಂಡು ಬಂದಿದ್ದಕ್ಕಾಗಿ ಪಬ್‌ ಯೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ವಿಡಿಯೋ ʼಎಕ್ಸ್‌ʼ ನಲ್ಲಿ ವೈರಲ್‌ ಆಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next