Advertisement
ಬೆಂಗಳೂರು ವಿವಿಯು ಅತ್ಯಂತ ಹಳೆಯ ವಿವಿಯಾಗಿದ್ದು, 1 ಸಾವಿರ ಎಕರೆಗಿಂತ ಹೆಚ್ಚು ವಿಸ್ತೀರ್ಣವಿದೆ. ಕ್ಯಾಂಪಸ್‌ನ ಒಳಗಡೆಯಿಂದ ಹಾದು ಹೋಗುವ ರಸ್ತೆಗಳಲ್ಲಿ ಬೈಕ್, ಕಾರುಗಳಲ್ಲಿ ಸಂಚರಿಸುವ ಹಲವರು ಮತ್ತು ವಾಯು ವಿಹಾರಕ್ಕೆಂದು ಬರುವ ಅನೇಕ ಮಂದಿ ಜ್ಞಾನ ದೇಗುಲವಾಗಿರುವ ಬೆಂಗಳೂರು ವಿವಿ ಕ್ಯಾಂಪಸ್ ಅನ್ನು ಕಸದ ತೊಟ್ಟಿಯೆಂದು ಭಾವಿಸಿದಂತಿದೆ!
Related Articles
Advertisement
ಕ್ಯಾಂಪಸ್‌ನಲ್ಲಿ ಕಸದ ವಾಸನೆ: ಕಸ ವಾಸನೆ ಬರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಓಡಾಟಕ್ಕೆ ಸಮಸ್ಯೆ ಆಗುವುದನ್ನು ಮನಗಂಡು ಎನ್ ಎಸ್‌ಎಸ್ ಸ್ವಯಂಸೇವಕರು ಆಗಾಗ ಕಸ ತೆಗೆದು ಕ್ಯಾಂಪಸ್ ಶುಚಿಗೊಳಿಸುವ ಪ್ರಯತ್ನ ನಡೆಸುತ್ತಾರೆ. ಆದರೂ ಸಾರ್ವಜನಿಕರು ಕಸ ಎಸೆಯುವುದು ತಪ್ಪುತ್ತಿಲ್ಲ. ನಮಗೂ ಕಸ ಎಸೆ ಯುವುದನ್ನು ತಡೆಯುವ ದಾರಿ ಗೋಚರಿಸುತ್ತಿಲ್ಲ ಎಂದು ವಿವಿ ಕುಲಪತಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ನಮ್ಮ ವಿವಿ ಕ್ಯಾಂಪಸಿನಲ್ಲಿ ಹೊರಗಿನಿಂದ ಬಂದು ಅನಾಗರಿಕರಂತೆ ಕಸ ಬಿಸಾಡುವುದು ಕಂಡಾಗ ನಮಗೆ ಬಹಳ ಬೇಸರವಾಗುತ್ತದೆ. ಜನರು ಕನಿಷ್ಠ ನಾಗರಿಕ ಪ್ರಜ್ಞೆ ಮೈಗೂಡಿಸಿಕೊಳ್ಳದಿದ್ದರೆ ಹೇಗೆ, ಇಷ್ಟೊಂದು ದೊಡ್ಡ ಕ್ಯಾಂಪಸ್‌ನಲ್ಲಿ ಕಸ ಬಿಸಾಕುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂಬುದೇ ನಮಗೆ ತೋಚುತ್ತಿಲ್ಲ. -ಡಾ.ಜಯಕರ್ ಶೆಟ್ಟಿ, ವಿವಿ ಕುಲಪತಿ
ಜ್ಞಾನಭಾರತಿ ಆವರಣದಲ್ಲಿ ಎನ್‌ಎಸ್ ಎಸ್ ವಿದ್ಯಾರ್ಥಿಗಳು ಪ್ರತಿ 15 ದಿನಗಳಿಗೊಮ್ಮೆ ವಿಶೇಷ ಸ್ವತ್ಛತಾ ಅಭಿಯಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಆದರೂ ಕಸದ ಸಮಸ್ಯೆ ಬಗೆಹರಿಯುತ್ತಿಲ್ಲ. ಸಾರ್ವಜನಿಕರು ಜವಾಬ್ದಾರಿ ಮರೆತು ವಿಶ್ವವಿದ್ಯಾಲಯದ ಆವರಣದಲ್ಲಿ ಮನಬಂದಂತೆ ಕಸ ಎಸೆದು ಹೋಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಎಂಬ ಅರಿವನ್ನು ಸಾರ್ವಜನಿಕರು ಹೊಂದಬೇಕು. ಬಿಬಿಎಂಪಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು -ಪ್ರೊ.ಎಚ್.ಆರ್. ರವೀಶ್, ಎನ್‌ಎಸ್‌ಎಸ್, ಸಂಯೋಜನಾಧಿಕಾರಿ
ಬೆಂಗಳೂರಿಗೆ ಆಕ್ಸಿಜನ್ ನಂತಿರುವ ಜ್ಞಾನ ಭಾರತಿ ಆವರಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಸಾರ್ವಜನಿಕ ಬೇಜವಾಬ್ದಾರಿತನದಿಂದ ವಿದ್ಯಾರ್ಥಿಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ವಿದ್ಯಾರ್ಥಿ ಒಕ್ಕೂಟಗಳು ಸಾಕಷ್ಟು ಹೋರಾಟ ನಡೆಸಿದ್ದರೂ ಯಾವುದೇ ಫಲ ದೊರೆತಿಲ್ಲ. ವಿದ್ಯಾರ್ಥಿಗಳು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಇದೆ. ಬಿಬಿಎಂಪಿ ಮತ್ತು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಕಠಿಣ ಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಇಲ್ಲವಾದರೆ ವಿದ್ಯಾರ್ಥಿ ಒಕ್ಕೂಟ ಮತ್ತಷ್ಟು ಪ್ರತಿಭಟಿಸಲಿದೆ.-ಚಂದ್ರು ಪೆರಿಯಾರ್, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಗೌರವಾಧ್ಯಕ್ಷ
–ರಾಕೇಶ್ ಎನ್.ಎಸ್