Advertisement

Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3

01:26 PM Nov 08, 2024 | Team Udayavani |

ಬೆಂಗಳೂರು: “ಭಾರತದ ಸಿಲಿಕಾನ್‌ ವ್ಯಾಲಿ’ ಎಂದು ಹೆಗ್ಗಳಿಕೆ ಪಡೆದಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಜನಪ್ರಿಯತೆಯ ಮುಕುಟಕ್ಕೆ ಮತ್ತೂಂದು ಗರಿ ಪ್ರಾಪ್ತವಾಗಿದೆ.

Advertisement

“ಎಡೆಲ್‌ಗಿವ್‌-ಹುರುನ್‌ ಇಂಡಿಯಾ’ ಪ್ರಕಟಿಸುವ ದಾನಿಗಳ ನಗರದ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲಿಯೇ 3ನೇ ಸ್ಥಾನ ಪಡೆದುಕೊಂಡಿದೆ. ಉದ್ಯಾನನಗರಿಯಲ್ಲಿ ಒಟ್ಟು 18 ಮಂದಿ ದಾನಿಗಳು ಇದ್ದು, ಪ್ರಸಕ್ತ ವರ್ಷ ಅವರು ಒಟ್ಟು 307 ಕೋಟಿ ರೂ. ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನಿಲೇಕಣಿ ದಾನ ಮಾಡಿರುವ ಮೊತ್ತದ ಪ್ರಮಾಣ ಶೇ.62ರಷ್ಟು ಏರಿಕೆಯಾಗಿದೆ. ಈ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದ್ದು, ಅಲ್ಲಿ ಒಟ್ಟು 61 ಮಂದಿ ಶ್ರೀಮಂತ ದಾನಿಗಳು 407 ಕೋಟಿ ರೂ. ದಾನ ಮಾಡಿದ್ದಾರೆ. ದೇಶದ ರಾಜಧಾನಿ ನವದೆಹಲಿ ದ್ವಿತೀಯ ಸ್ಥಾನದಲ್ಲಿದ್ದು ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಶಿವ್‌ ನಾಡಾರ್‌ ಇತರ ಎಲ್ಲ ಪ್ರಮುಖರನ್ನು ಹಿಂದೆ ಹಾಕಿ ಬರೋಬ್ಬರಿ 2,153 ಕೋಟಿ ರೂ. ಮೊತ್ತವನ್ನು ವಿವಿಧ ಉದ್ದೇಶಗಳಿಗಾಗಿ ನೀಡಿದ್ದಾರೆ.

4ನೇ ಸ್ಥಾನದಲ್ಲಿ ಮಹಾರಾಷ್ಟ್ರದ ಪುಣೆ, ತೆಲಂಗಾಣ ರಾಜಧಾನಿ ಹೈದರಾಬಾದ್‌ ಇದೆ. 6ರಿಂದ 10ನೇ ಸ್ಥಾನಗಳಲ್ಲಿ ಕ್ರಮವಾಗಿ ಅಹಮದಾಬಾದ್‌, ಚೆನ್ನೈ, ಕೋಲ್ಕತಾ, ಗುರುಗ್ರಾಮ ಮತ್ತು ಸೂರತ್‌ ಇದೆ.

ಬೆಂಗಳೂರಲ್ಲಿ ನಂದನ್‌ ನಿಲೇಕಣಿ ಮೊದಲಿಗ

Advertisement

ದೇಶದ ಪ್ರಮುಖ ದಾನಿಗಳ ಪೈಕಿ ಇನ್ಫೋಸಿಸ್‌ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ 307 ಕೋಟಿ ರೂ. ದಾನ ಮಾಡಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಪತ್ನಿ 154 ಕೋಟಿ ರೂ. ದಾನ ಮಾಡಿ 10ನೇ ಸ್ಥಾನದಲ್ಲಿದ್ದಾರೆ. ಝೆರೋದಾ ಸಂಸ್ಥಾಪಕ ನಿಖೀಲ್‌ ಕಾಮತ್‌ 120 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಎಚ್‌ಸಿಎಲ್‌ ಟೆಕ್ನಾಲಜೀಸ್‌ ಸಂಸ್ಥಾಪಕ ಶಿವ್‌ ನಾಡಾರ್‌ 2153 ಕೋಟಿ ರೂ. ಹಂಚುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ 407 ಕೋಟಿ ರೂ. ನೀಡಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಜಾಜ್‌ ಫ್ಯಾಮಿಲಿ 352 ಕೋಟಿ ರೂ.ನೀಡಿ ತೃತೀಯ, 334 ಕೋಟಿ ರೂ. ನೀಡಿ ಕುಮಾರಮಂಗಳಂ ಬಿರ್ಲಾ 4ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಒಟ್ಟು 203 ಮಂದಿ ಸ್ಥಾನಪಡೆದಿದ್ದು, 96 ಮಂದಿ ಹೊಸಬರು. ಅವರೆಲ್ಲ 8783 ಕೋಟಿ ರೂ. ಉತ್ತಮ ಕಾರ್ಯಗಳಿಗೆ ವಿನಿಯೋಗ ಮಾಡಿದ್ದಾರೆ.

ಮಹಿಳಾ ಶ್ರೀಮಂತರ ಮಹಿಳಾ ದಾನಿಗಳು

 ದೇಣಿಗೆ ಕೊಟ್ಟ ಮಹಿಳೆಯರ ಪೈಕಿ ರೋಹಿಣಿ ನಿಲೇಕಣಿ ನಂ.1

 ರೋಹಣಿ ನೀಡಿದ ದೇಣಿಗೆ ಮೊತ್ತ: 154 ಕೋಟಿ ರೂ.

 ಮುಂಬೈ ಸುಷ್ಮಿತಾ ಬಗ್ಚಿಗೆ 2ನೇ ಸ್ಥಾನ: 90 ಕೋಟಿ ರೂ. ದಾನ

 ಕಿರಣ್‌ ಮಜುಮ್ಡಾರ್‌ ಶಾಗೆ 3ನೇ ಸ್ಥಾನ: 80 ಕೋಟಿ ರೂ. ದಾನ

Advertisement

Udayavani is now on Telegram. Click here to join our channel and stay updated with the latest news.

Next